ಕನ್ಹಯ್ಯಾ ಕುಮಾರ್ ಕಾಂಗ್ರೆಸ್‌ ಸೇರುವ ಸಾಧ್ಯತೆ?; ಅವರನ್ನು ಹಿಡಿದಿಡಲು ಸಿಪಿಐ ಪ್ರಯತ್ನ!

ಜೆಎನ್‌ಯು ಮಾಜಿ ಅಧ್ಯಕ್ಷರ ಕನ್ಹಯ್ಯಾ ಕುಮಾರ್ ಕಾಂಗ್ರೆಸ್ ಸೇರುವ ಊಹಾಪೋಹಗಳ ನಡುವೆ, ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರು ಕನ್ಹಯ್ಯ ಪಕ್ಷವನ್ನು ತೊರೆಯುತ್ತಾರೆ ಎಂಬುದು ಸುಳ್ಳು, ಇದು ಅವರನ್ನು ನಿಂದಿಸುವ ಪ್ರಯತ್ನಗಳಾಗಿವೆ ಎಂದು ಹೇಳಿದ್ದಾರೆ. ಆದರೆ, ಕನ್ಹಯ್ಯಾ ಶೀಘ್ರದಲ್ಲೇ ಪಕ್ಷ ಸೇರಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕನ್ಹಯ್ಯ ಅವರು ಕಳೆದ ಎರಡು ದಿನಗಳಿಂದ ಅಜೋಯ್ ಭವನದಲ್ಲಿದ್ದಾರೆ. ಊಹಾಪೋಹಗಳು ಆತನನ್ನು ನಿಂದಿಸುವ ಉದ್ದೇಶವನ್ನು ಹೊಂದಿವೆ. ಇವು ಕೇವಲ ವದಂತಿಗಳು ಮತ್ತು ನಾನು ಅದನ್ನು ಖಂಡಿಸುತ್ತೇನೆ ಎಂದು ರಾಜಾ ತಿಳಿಸಿದ್ದಾರೆ.

ಕನ್ಹಯ್ಯಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕರೆ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ರಾಜಾ, “ಕನ್ಹಯ್ಯ ಅವರು ರಾಜಕೀಯ ನಾಯಕರನ್ನು ಭೇಟಿ ಮಾಡಲು ಮುಕ್ತರಾಗಿದ್ದಾರೆ. ಆ ಕಾರಣಕ್ಕಾಗಿ ಅವರು ಪಕ್ಷವನ್ನು ತೊರೆಯುತ್ತಿದ್ದಾರೆ ಎಂದಲ್ಲ. ಅಶಿಸ್ತಿನ ವಿರುದ್ಧದ ಕ್ರಮದ ಭಾಗವಾಗಿ ಕನ್ಹಯ್ಯ ಅವರು ಪಕ್ಷದ ಜೊತೆ ಅಸಮಾಧಾನಗೊಂಡಿದ್ದಾರೆ ಎಂದು ಊಹಾಪೋಹಗಳು ಹರಿದಾಡುತ್ತಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೋರಾಟಗಾರರ ಮೇಲಿನ 5,570 ಪ್ರಕರಣಗಳನ್ನು ವಾಪಸ್ ಪಡೆದ ತಮಿಳುನಾಡು ಸರ್ಕಾರ!

ಅವರು ಕಾಂಗ್ರೆಸ್‌ನ ಹೈಕಮಾಂಡ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಶೀಘ್ರದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಕನ್ಹಯ್ಯಾ 2019 ರಲ್ಲಿ ಬಿಹಾರದ ಬೇಗುಸರಾಯಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಸೋತರು.

ಮಾಜಿ ಜೆಎನ್‌ಯು ನಾಯಕ ಈ ವಿಷಯದಲ್ಲಿ ಮೌನವಾಗಿದ್ದಾರೆ. ಅವರು ಯಾವುದೇ ವರದಿಗಳಿಗೆ ಪ್ರತಿಕ್ರಿಯಿಸಿಲ್ಲ. ಕಾಂಗ್ರೆಸ್ ನಾಯಕರು ಕನ್ಹಯ್ಯ ಪಕ್ಷದ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ. ಬಿಹಾರದಲ್ಲಿ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಅವರನ್ನು ಸೇರಿಸಿಕೊಳ್ಳಲು ನೋಡುತ್ತಿದೆ.

ಇದನ್ನೂ ಓದಿ: ಧರ್ಮಾತೀತವಾಗಿ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ವಯಸ್ಕರಿಗಿದೆ: ಅಲಹಬಾದ್ ಹೈಕೋರ್ಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights