ಫ್ಯಾಕ್ಟ್‌ಚೆಕ್: ಮೋದಿ ಮತ್ತು ಸ್ಮೃತಿ ಇರಾನಿ ಅವರ ಎಡಿಟ್ ಮಾಡಿದ ಫೋಟೊ ವೈರಲ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಯವರ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಪ್ರಧಾನಿ ಮೋದಿಯವರ ಬೆನ್ನಿಗೆ ಒರಗಿ ಸ್ಮೃತಿ ಇರಾನಿ ನಿಂತಿರುವ ಪೋಟೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದೆ.

ಟ್ವಿಟ್ಟರ್ ಬಳಕೆದಾರರಾದ ತನಿಷ್ಕಾ ಎಂಬುವವರು ಚಿತ್ರವನ್ನು ಪೋಸ್ಟ್ ಮಾಡಿ, “ಚಿಂತಿಸಬೇಡಿ.. ನಾನು ಇಲ್ಲಿರುವವರೆಗೂ, ಯಾರೂ ಕೂಡ ನಿಮ್ಮನ್ನು ಕ್ಯಾಬಿನೆಟ್‌ನಿಂದ ತೆಗೆದುಹಾಕಲು ಸಾಧ್ಯವಿಲ್ಲ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಟ್ವೀಟ್ ಮಾಡಿದ್ದಾರೆ.ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ABP ನ್ಯೂಸ್‌ ಪ್ರಕಟಿಸಿದ ಮೂಲ ಫೋಟೋ ಲಭ್ಯವಾಗಿದೆ. ಮೂಲ ಫೋಟೋದಲ್ಲಿ ಸ್ಮೃತಿ  ಇರಾನಿ ತಮ್ಮ ಮಗಳಾದ ಜೋಯಿಶ್ ಇರಾನಿಯೊಂದಿಗೆ ಇದ್ದಾರೆ ಎಂದು ವರದಿ ಮಾಡಿದೆ.

2019ರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಮಗಳನ್ನು ಶಾಲೆಯಲ್ಲಿ ಅವಮಾನಿಸಿದ ಮತ್ತು ಅಪಹಾಸ್ಯ ಮಾಡಿದ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಗಂಭೀರವಾದ ಪೋಸ್ಟ್ ಅನ್ನು ಬರೆದಿದ್ದರು.  “ನಾನು ನಿನ್ನೆ ನನ್ನ ಮಗಳ ಸೆಲ್ಫಿಯನ್ನು ಡಿಲೀಟ್ ಮಾಡಿದ್ದೇನೆ, ಏಕೆಂದರೆ ಆಕೆಯ ತರಗತಿಯಲ್ಲಿ ಒಬ್ಬ ಈಡಿಯಟ್ ಬುಲ್ಲಿ,  ಝಾಳ ನೋಟವನ್ನು ಅಪಹಾಸ್ಯ ಮಾಡುತ್ತಾನೆ ಮತ್ತು ತನ್ನ ತಾಯಿಯ ಇನ್‌ಸ್ಟಾ ಪೋಸ್ಟ್‌ನಲ್ಲಿ ಅವಳು ಹೇಗೆ ಕಾಣುತ್ತಿದ್ದಾಳೆಂದು ಅವಮಾನ ಮಾಡಲು ತರಗತಿಯಲ್ಲಿ ತನ್ನ ಗೆಳೆಯರಿಗೆ ಹೇಳಿದ್ದಾನೆ” ಎಂದು ಇರಾನಿ ಬರೆದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸ್ಮೃತಿ ಇರಾನಿ ಮತ್ತು ತನ್ನ ಮಗಳು ಜೋಯಿಶ್ ಇರಾನಿ ಅವರೊಂದಿಗೆ ತೆಗೆದುಕೊಂಡ ಸೆಲ್ಫಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ಫೋಟೊವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ರಾಜಕೀಯದಲ್ಲಿ ಪರ ಮತ್ತು ವಿರೋದಗಳು ಇರುವುದು ಸಹಜ, ಆದರೆ ಈ ರೀತಿ ಫೋಟೋವನ್ನು ಎಡಿಟ್ ಮಾಡುವ ಮೂಲಕ ವಯಕ್ತಿಕ ತೇಜೋವದೆ ಮಡುವುದು ಸರಿಯಾದ ಕ್ರಮವಲ್ಲ ಎಂದು ಜನರು ಕಮೆಂಟ್ ಮಾಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ AAP ಚುನಾವಣಾ ಪ್ರಚಾರಕ್ಕೆ ಬೃಹತ್ ಜನ ಸಮೂಹ ಸೇರಿತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.