ಗನ್ ಹಿಡಿದುಕೊಂಡು ಸೆಲ್ಫಿ : ಗುಂಡು ಹಾರಿ ಹೋಗೇ ಬಿಡ್ತು ನವವಿವಾಹಿತೆ ಪ್ರಾಣ..!

ಇತ್ತೀಚೆಗೆ ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಅಧಿಕವಾಗುತ್ತಿವೆ. ಉತ್ತರ ಪ್ರದೇಶದ ನವವಿವಾಹಿತೆಯೊಬ್ಬಳು ಗುಂಡೇಟಿನಿಂದ ಗಾಯಗೊಂಡು ಗುರುವಾರ ರಾತ್ರಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ ಹಾರ್ಡೊಯ್‌ನ ರಾಧಿಕಾ ಗುಪ್ತಾ  ಗುಂಡಿಗೆ ಬಲಿಯಾದ ನವವಿವಾಹಿತೆ. ಇವರು 2021 ರ ಮೇ ತಿಂಗಳಲ್ಲಿ ರಾಧಿಕಾ ಆಕಾಶ್ ಗುಪ್ತಾರನ್ನು ಮದುವೆಯಾಗಿದ್ದರು. 26 ವರ್ಷದ ರಾಧಿಕಾ ತನ್ನ ಅತ್ತೆಯ ಸಿಂಗಲ್ ಬ್ಯಾರೆಲ್ ಗನ್ನಿಂದ ಸೆಲ್ಫಿ ಕ್ಲಿಕ್ ಮಾಡಲು ಪ್ರಯತ್ನಿಸುವಾಗ ಗುಂಡು ಹಾರಿದೆ. ಲೋಡ್ ಆಗಿದ್ದ ಗನ್ ನಿಂದ ಗುಂಡು ಅವರ ಕುತ್ತಿಗೆಗೆ ತಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ರಾಧಿಕಾ ಪ್ರಾಣಬಿಟ್ಟಿದ್ದರು.

ಆದರೆ ಘಟನೆಯ ಬಗ್ಗೆ ಸಂತ್ರಸ್ತೆಯ ತಂದೆ ಸೆಫ್ಲಿ ಆಟದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತ ರಾಧಿಕಾ ಬಳಸಿದ ಗನ್ ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಆಕೆಯ ಶವವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ತಂದೆಯ ದೂರಿನ ಆಧಾರದ ಮೇಲೆ ತನಿಖೆ ಮಾಡಲಾಗುತ್ತಿದೆ.

 

Spread the love

Leave a Reply

Your email address will not be published. Required fields are marked *