#MeToo ಆರಂಭಕ್ಕೆ ಮಹಿಳೆಯರು ಉದ್ಯೋಗಕ್ಕೆ ಹೋಗಿದ್ದೇ ಕಾರಣ: ಮುಖೇಶ್‌ ಖನ್ನಾ ಹೇಳಿಕೆಗೆ ನೆಟ್ಟಿಗರ ತರಾಟೆ!

“#MeToo ಚಳುವಳಿ ಪ್ರಾರಂಭವಾಗಲು ಕಾರಣ ಮಹಿಳೆಯರು ತಮ್ಮನ್ನು ಪುರುಷರಿಗೆ ಸಮಾನರು ಎಂದು ಭಾವಿಸಲು ಪ್ರಾರಂಭಿಸಿ ಕೆಲಸಕ್ಕೆ ಹೋಗಲು ಶುರು ಮಾಡಿದ್ದು ಎಂದಿದ್ದಾರೆ. ಮಹಿಳೆಯ ಕೆಲಸ ಮನೆ ನಿಭಾಯಿಸುವುದು. ಮಹಿಳೆಯೇ ಬೇರೆ, ಪುರುಷರೇ ಬೇರೆ”  ಎಂದು ಹಿಂದಿ ಕಿರುತೆರೆಯ ಶಕ್ತಿಮಾನ್ ಮತ್ತು ಮಹಾಭಾರತ ಧಾರವಾಹಿಗಳಿಂದ ಹೆಸರುವಾಸಿಯಾದ ನಟ ಮುಖೇಶ್ ಖನ್ನಾ ಹೇಳೀಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ.

ಫಿಲ್ಮಿ ಚಾರ್ಚಾಗೆ ನೀಡಿದ ಇತ್ತೀಚಿನ ಸಂದರ್ಶನವೊಂದರ ಅವರ ಮಾತುಗಳಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, “ಮಹಿಳೆಯರು ಕೆಲಸ ಮಾಡಲು ಪ್ರಾರಂಭಿಸಿದಾಗ #ಒeಖಿoo ಸಮಸ್ಯೆ ಪ್ರಾರಂಭವಾಯಿತು” ಎಂದು ನಟ ಮುಖೇಶ್ ಖನ್ನಾ ಹೇಳುತ್ತಾರೆ.

“ಮನೆಯಲ್ಲಿ ತಾಯಿ ಇಲ್ಲದೆ ಮಕ್ಕಳು ಕಷ್ಟಪಡುತ್ತಾರೆ. ಪುರುಷ ಮಾಡಿದ್ದನ್ನೆಲ್ಲಾ ನಾನೂ ಮಾಡುತ್ತೇನೆ ಎಂದು ಮಹಿಳೆ ಹೇಳಲು ಶುರು ಮಾಡಿದ್ದರಿಂದಲೇ ಸಮಸ್ಯೆ ಶುರುವಾಗಿದೆ. ಆದರೆ ಹಾಗಾಗಲ್ಲ. ಮಹಿಳೆ ಮಹಿಳೆಯೇ, ಪುರುಷ ಪುರುಷನೇ ಎಂದು ಮುಖೇಶ್​ ಖನ್ನಾ ಮಾತಾಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.

https://twitter.com/SahilBulla/status/1322124458618806273?ref_src=twsrc%5Etfw%7Ctwcamp%5Etweetembed%7Ctwterm%5E1322124458618806273%7Ctwgr%5Eshare_3&ref_url=https%3A%2F%2Fnaanugauri.com%2Fmetoo-movement-began-because-women-started-working-mukesh-khanna%2F

ಟ್ವಿಟರ್ ಬಳಕೆದಾರರೊಬ್ಬರು, “ಶಕ್ತಿಮಾನ್‌ನ ದೊಡ್ಡ ದೌರ್ಬಲ್ಯ ಅವನ ಮನೋಧರ್ಮ ಎಂದು ತಿಳಿದಿರಲಿಲ್ಲ” ಎಂದಿದ್ದಾರೆ.

ಬಾಲ್ಯದಲ್ಲಿ ಆರಾಧಿಸುತ್ತಿದ್ದ ಸೂಪರ್​ಹೀರೋ ಮುಖೇಶ್ ಖನ್ನಾ ಈ ರೀತಿಯ ಆಲೋಚನೆಗಳನ್ನ ಹೊಂದಿದ್ದಾರಾ? ಅಂತ ಕಮೆಂಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬ ನೆಟ್ಟಿಗರು ’ ನನ್ನ ಬಾಲ್ಯದ ಅನೇಕ ಅಮೂಲ್ಯ ಸಮಯಗಳು ಶಕ್ತಿಮಾನ್ ವೀಕ್ಷಣೆಯಲ್ಲಿ ವ್ಯರ್ಥವಾಯಿತು ಎಂಬ ಅಂಶವನ್ನು ಈಗ ನೋವಿನಿಂದ ಅರಿತುಕೊಂಡೆ” ಎಂದಿದ್ದಾರೆ.

https://twitter.com/bej_2019/status/1322132618662440960?ref_src=twsrc%5Etfw%7Ctwcamp%5Etweetembed%7Ctwterm%5E1322132618662440960%7Ctwgr%5Eshare_3&ref_url=https%3A%2F%2Fnaanugauri.com%2Fmetoo-movement-began-because-women-started-working-mukesh-khanna%2F

ಮುಖೇಶ್ ಖನ್ನಾ ವಿವಾದಾತ್ಮಕ ಹೇಳಿಕೆಗೆ ಹಲವು ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮಹಿಳೆಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುವ ಮೂಲಕ ಮೀ ಟೂ ಅಭಿಯಾನದ ಬಗ್ಗೆ ಇಂತಹ ಹೇಳಿಕೆ ನೀಡಿರುವ ನಟನ ಹೇಳಿಕೆ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಇತ್ತೀಚೆಗೆ, ಮುಖೇಶ್ ಖನ್ನಾ ಕಪಿಲ್ ಶರ್ಮಾ ಶೋ ಬಗ್ಗೆ ಟೀಕೆ ಮಾಡಿ ವಿವಾದದ ಕೇಂದ್ರ ಬಿಂದುವಾಗಿದ್ದರು. ಶೋನಲ್ಲಿ ಭಾಗವಹಿಸಲು ನಿರಾಕರಿಸಿ, ಶೋ ಡಬಲ್ ಮೀನಿಂಗ್ ಪದಗಳಿಂದ ಕೂಡಿದೆ, ಪ್ರತಿ ಕ್ಷಣದಲ್ಲೂ ಅಶ್ಲೀಲತೆಯತ್ತ ತಿರುಗುತ್ತದೆ ಎಂದೆಲ್ಲಾ ಹೇಳಿಕೆ ನೀಡಿದ್ದರು.


ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವವನ್ನು ‘ಕಪ್ಪು ದಿನ’ವಾಗಿ ಆಚರಿಸಲು ಮಹಾರಾಷ್ಟ್ರ ಸಚಿವರುಗಳ ನಿರ್ಧಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights