ನಾನು ನಾಯಿ, ಸಾರ್ವಜನಿಕರೇ ನನ್ನ ಮಾಲೀಕರು: ಜ್ಯೋತಿರಾಧಿತ್ಯ ಸಿಂಧಿಯಾ
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ನನ್ನನ್ನು ನಾಯಿ ಎಂದು ಕರೆದಿದ್ದಾರೆ ಎಂದು ಆರೋಪಿಸಿದರುವ ಬಿಜೆಪಿ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ, ಹೌದು ಕಮಲ್ನಾಥ್ ಕರೆದಿರುವಂತೆ ನಾನು ನಾಯಿ, ಸಾರ್ವಜನಿಕರು ನನ್ನ ಮಾಲೀಕರು. ನಾಯಿ ತನ್ನ ಮಾಲೀಕರನ್ನು ರಕ್ಷಿಸುತ್ತದೆ ಎಂದು ಹೇಳಿದ್ದಾರೆ.
ಜ್ಯೋತಿರಾಧಿತ್ಯ ಸಿಂಧಿಯಾ ಅವರ ಆರೋಪವನ್ನು ತಳ್ಳಿ ಹಾಕಿರುವ ಕಾಂಗ್ರೆಸ್, ಕಮಲ್ನಾಥ್ ಅವರು ಸಿಂಧಿಯಾ ವಿರುದ್ಧ ನಾಯಿ ಎಂಬ ಪದ ಬಳಸಿಲ್ಲ ಎಂದು ಹೇಳಿದೆ.
ಸಿಂಧಿಯಾ ಅಥವಾ ಯಾವುದೇ ಮುಖಂಡರ ಕುರಿತು ಮಾಜಿ ಮುಖ್ಯಮಂತ್ರಿ ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ಕಮಲ್ ನಾಥ್ ಮಾಧ್ಯಮ ಸಮನ್ವಯಾಧಿಕಾರಿ ಸಲೂಜಾ ಹೇಳಿದ್ದಾರೆ.
ಕಮಲ್ ನಾಥ್ ಇತ್ತೀಚಿಗೆ ಸಚಿವೆ ಹಾಗೂ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿಯನ್ನು ಐಟಂ ಎಂದು ಕರೆದಿದ್ದರು. ಅಲ್ಲದೆ, ಶಿವರಾಜ್ಸಿಂಗ್ ಚೌಹಾಣ್ ಅವರನ್ನು ‘ಮುಂಬಯಿನ ಸಿನಿಮಾಗಳಲ್ಲಿ ನಟಿಸಬೇಕಾದ ನೌಟಂಕಿ ಕಲಾಕಾರ’ ಎಂದು ಕರೆಸದಿದ್ದರು.
ಪದೇ ಪದೇ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಚುನಾವಣಾ ಆಯೋಗ ಶುಕ್ರವಾರ ಕಮಲ್ ನಾಥ್ ಹೊಂದಿದ್ದ ಸ್ಟಾರ್ ಪ್ರಚಾರಕ’ ಸ್ಥಾನಮಾನವನ್ನು ರದ್ದುಪಡಿಸಿತು.
ಮಧ್ಯಪ್ರದೇಶದ 28 ಸ್ಥಾನಗಳಿಗೆ ಉಪ ಚುನಾವಣೆ ನವೆಂಬರ್ 3 ರಂದು ನಡೆಯಲಿದೆ.
ಇದನ್ನೂ ಓದಿ: ಈದ್ ಪ್ರಾರ್ಥನೆಗೆ ಹೊರಟ ಫಾರೂಕ್ ಅಬ್ದುಲ್ಲಾಗೆ ತಡೆ: ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಎನ್ಸಿ ಆರೋಪ

