ಪಕ್ಷ ತೊರೆದ ಕಾಂಗ್ರೆಸ್ ಮಾಜಿ ಸಂಸದೆ ಸುಶ್ಮಿತಾ ದೇವ್..!
ಕಾಂಗ್ರೆಸ್ ನ ಮಾಜಿ ಸಂಸದೆ ಸುಶ್ಮಿತಾ ದೇವ್ ಪಕ್ಷವನ್ನು ತೊರೆದಿದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಇಂದು ಬೆಳಿಗ್ಗೆ ಅವರ ಟ್ವಿಟರ್ ಪ್ರೊಪೈಲ್ “ಮಾಜಿ ಸದಸ್ಯೆ” ಆಗಿ ಬದಲಾಗಿದ್ದು ಇದು ಅವರು ಕಾಂಗ್ರೆಸ್ ತೊರೆದ ಮೊದಲ ಸುಳಿವಾಗಿದೆ. ಮಾತ್ರವಲ್ಲದೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಭಾನುವಾರ ರಾಜೀನಾಮೆ ಪತ್ರ ರವಾನಿಸಿದ್ದಾರೆ.
Another @INCIndia leader @sushmitadevinc quits the party.@XpressBengaluru @santwana99 @ramupatil_TNIE @NewIndianXpress pic.twitter.com/j5rmfeLmek
— Subash_TNIE (@S27chandr1_TNIE) August 16, 2021
ಮೂರು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಸುಶ್ಮಿತಾ ಪಕ್ಷ ತೊರೆಯಲು ಕಾರಣ ತಿಳಿದುಬಂದಿಲ್ಲ. ನಿನ್ನೆ ಟ್ವಿಟ್ ಮಾಡುತ್ತಾ ಸಾರ್ವಜನಿಕ ಸೇವೆಯ ಹೊಸ ಅಧ್ಯಾಯ ಶುರು ಮಾಡುವ ಬಗ್ಗೆ ಬರೆದಿದ್ದಾರೆ.
ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ಮತ್ತು ಕೊಲೆಗೀಡಾದ ಒಂಬತ್ತು ವರ್ಷದ ಬಾಲಕಿಯ ಪೋಷಕರ ಚಿತ್ರಗಳನ್ನು ತೋರಿಸುವ ಪೋಸ್ಟ್ನಿಂದ ಟ್ವಿಟ್ಟರ್ ಹ್ಯಾಂಡಲ್ ಅನ್ನು ಲಾಕ್ ಮಾಡಿದ ಕಾಂಗ್ರೆಸ್ ನಾಯಕರಲ್ಲಿ ಎಂಎಸ್ ದೇವ್ ಸೇರಿದ್ದಾರೆ.

