ಉದ್ಯೋಗದಾತರಿಗೆ ವೇತನ ನೀಡುವ ನೋಟಿಸ್ ಜಾರಿ ವಿಚಾರ : ಕಾರ್ಮಿಕ ಇಲಾಖೆ ಮತ್ತೆ ಯು-ಟರ್ನ್?

ಉದ್ಯೋಗದಾತರಿಗೆ ಏಪ್ರಿಲ್‌ನಲ್ಲಿ ವೇತನ ಅಥವಾ ಪೂರ್ಣ ವೇತನವನ್ನು ಪಾವತಿಸದ ಕಾರಣ ನೋಟಿಸ್ ನೀಡಲು ಕಾರ್ಮಿಕ ಇಲಾಖೆ ನಿರ್ಧರಿಸಿದ ವಿಚಾರ  ಸದ್ಯ ಯುರ್ಟ್ ಆಗಿದೆ.

ಹೌದು.. ಕೊರೊನಾ ಲಾಕ್ ಡೌನ್ ನಿಂದಾಗಿ ಕಾರ್ಮಿಕr ಜೀವನ ಅಧೋಗತಿ ತಲುಪಿದೆ. ಅದೆಷ್ಟೋ ಕಾರ್ಮಿಕರಿಗೆ ವೇತರ ನೀಡಲಾಗಿಲ್ಲ. ಈ ಬಗ್ಗೆ ಎಚ್ಚೆತ್ತುಕೊಂಡ ಕಾರ್ಮಿಕ ಸಚಿವ ಎ. ಶಿವರಾಮ್ ಹೆಬ್ಬಾರ್  ವೇತರ ಪಾವತಿಯಾಗದ ಕಾರ್ಮಿಕರು ದೂರು ನೀಡುವಂತೆ ಸಲಹೆ ನೀಡಿದ್ದರು. ಇದರ ಆಧಾರದ ಮೇಲೆ ವೇತನ ನೀಡುವಂತೆ ಆಯಾ ಕಂಪನಿಗಳಿಗೆ ನೋಟೀಸ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದರು.

ಕಾರ್ಮಿಕ ಇಲಾಖೆ ಯು-ಟರ್ನ್

ತೊಂದರೆಯಲ್ಲಿರುವವರು ಇಲಾಖೆಯ ಸಹಾಯವಾಣಿಗೆ ದೂರು ಸಲ್ಲಿಸುವ ಸಚಿವರ ನಿರ್ದೇಶನದಂತೆ 24 ಗಂಟೆಯಲ್ಲಿ 700ಕ್ಕೂ ಅಧಿಕ ಉದ್ಯೋಗದಾತರಿಂದ ವೇತರ ಪಾವತಿಯಾಗದ ದೂರುಗಳು ಸಹಾಯವಾಣಿಗೆ ಬಂದಿವೆ. ಇದರ ಆಧಾರದ ಮೇಲೆ ಏಪ್ರಿಲ್ ತಿಂಗಳಿಗೆ ಕಾರ್ಮಿಕರಿಗೆ ಸಂಬಳ / ಪೂರ್ಣ ವೇತನವನ್ನು ಪಾವತಿಸದ ಕೈಗಾರಿಕಾ ಘಟಕಗಳಿಗೆ ನೋಟಿಸ್ ನೀಡುವಂತೆ ಕಾರ್ಮಿಕ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಆದರೆ, ಕೈಗಾರಿಕಾ ಘಟಕಗಳಿಗೆ ನೋಟಿಸ್ ನೀಡದಂತೆ ಗುರುವಾರ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದು ಸದ್ಯ ಸಾಕಷ್ಟು ಅನುಮಾನಗಳಿಗೆ ಗುರಿ ಮಾಡಿದೆ. ಈ ನಿರ್ಧಾರಕ್ಕೆ ಕಾರಣ ಸಚಿವರು ಉದ್ಯಮ ಸಂಸ್ಥೆಗಳಿಂದ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಡ್ಡಾಯವಾಗಿ ವೇತನವನ್ನು ಪಾವತಿಸುವ ನಿರ್ಧಾರವನ್ನು ಕಾರ್ಮಿಕ ಇಲಾಖೆ ಯು-ಟರ್ನ್ ಮಾಡುವುದು ಇದು ಎರಡನೇ ಬಾರಿ. ಏಪ್ರಿಲ್ ಎರಡನೇ ವಾರದಲ್ಲಿ, ಕೈಗಾರಿಕಾ ಸಂಸ್ಥೆಗಳು ಹಿರಿಯ ಅಧಿಕಾರಿಗಳನ್ನು ಭೇಟಿಯಾದ ನಂತರ ವೇತನವನ್ನು ಕಡ್ಡಾಯಗೊಳಿಸುವ ಮತ್ತು ಕಾರ್ಮಿಕರನ್ನು ಹಿಂಪಡೆಯುವ ಆದೇಶವನ್ನು ತರಾತುರಿಯಲ್ಲಿ ಹಿಂತೆಗೆದುಕೊಳ್ಳಲಾಗಿತ್ತು.

ಕಾರ್ಯಪಡೆ ಸಭೆ

ಕಳೆದ ವಾರ ವೇತನ ಮತ್ತು ಹಿಂಪಡೆಯುವಿಕೆಯ ಸಮಸ್ಯೆಗಳನ್ನು ನಿಭಾಯಿಸಲು 16 ಸದಸ್ಯರ ಕಾರ್ಯಪಡೆಯನ್ನು ಸ್ಥಾಪಿಸಲಾಗಿತ್ತು. ಗುರುವಾರ ಸಭೆ ಸೇರಿ ಟಾಸ್ಕ್ ಫೋರ್ಸ್ ಸದಸ್ಯರೊಬ್ಬರು, ಉದ್ಯಮದ ಪ್ರತಿನಿಧಿಗಳು ಈ ಸಮಸ್ಯೆಯನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ.  ಈ ಸಭೆಯಲ್ಲಿ ಲಾಕ್ ಡೌನ್ ನಿಂದಾಗಿ ಉದ್ಯಮ ಸಂಸ್ಥೆಗಳು ನಷ್ಟದಲ್ಲಿರುವ ವಿಚಾರವನ್ನು ಪ್ರಸ್ತಾಪಿಸಿದ್ದು, ಇವರ ಒತ್ತಡಕ್ಕೆ ಮಣಿದು ಸಚಿವರು ನೋಟೀಸ್ ಜಾರಿಗೊಳಿಸುವುದನ್ನ ತಡೆಹಿಡಿದಿದ್ದಾರೆಂದು ಮೂಲಗಳು ತಿಳಿಸಿವೆ.

ಜೊತೆಗೆ ಈ ಸಭೆಯಲ್ಲಿ ಎಂಎಸ್‌ಎಂಇ ವಲಯದಲ್ಲಿ ವೇತನ ಪಾವತಿಸದಿರುವಿಕೆ ಅಥವಾ ಹಿಂಪಡೆಯುವಿಕೆಯ ದೂರುಗಳನ್ನು ಕಡಿಮೆ ಮಾಡಲು, ವೇತನ ಪಾವತಿಗೆ ಬಳಸಬಹುದಾದ ಪ್ಯಾಕೇಜ್ ಅನ್ನು ಘೋಷಿಸುವಂತೆ ಸದಸ್ಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. “ಸುಮಾರು ಮೂರು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಎಂಎಸ್ಎಂಇ ವಲಯವನ್ನು ಆರ್ಥಿಕವಾಗಿ ಬಲಪಡಿಸಬೇಕು” ಎಂದು ಮೂಲವೊಂದು ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights