Sports : Tennis ಆಟಗಾರರ ಸಹಾಯಕ್ಕೆ ಮುಂದಾದ ಟೆನಿಸ್ ಫೆಡರೇಷನ್‌ಗಳು…

ಕೊರೊನಾ ವೈರಸ್‌ನಿಂದ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿದ್ದು ಇದು ಕ್ರೀಡಾ ಲೋಕಕ್ಕು ತಟ್ಟಿದೆ, ಆಯೋಜಕರಿಗೆ ಹಣಕಾಸಿನ ಮುಗ್ಗಟ್ಟು ಒಂದಡೆ ಯಾದರೆ, ಕ್ರೀಡಾ ಪ್ರೇಮಿಗಳ  ಸಂಕಟ ಇನ್ನೊಂತರ, ಇವ4ರ ಮಧ್ಯ ಆಟಗಾರರಿಗೆ ಆಡದ ಸಂಕಟ ಜೊತೆಗೆ ಆರ್ಥಿಕ ಸಂಕಟ ಒಟ್ಟಿಗೆ ಕಾಡುತ್ತವೆ..ಅದಕ್ಕಾಗಿ ವಿಶ್ವದಾದ್ಯಂತ ಏಳು ಟೆನಿಸ್ ಫೆಡರೇಷನ್‌ಗಳು ಆಟಗಾರರಿಗೆ ಸಹಾಯ ಮಾಡಲು 6 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿವೆ.

ಡಬ್ಲ್ಯೂಟಿಎ, ಎಟಿಪಿ ಮತ್ತು ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ ITF ಮತ್ತು ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ ಆಯೋಜಕರು ಮಂಗಳವಾರ ಜಂಟಿ ಹೇಳಿಕೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಪರಿಹಾರ ಕಾರ್ಯಕ್ರಮವನ್ನು ಪ್ರಾರಂಭಿಸುವುದು ಈ ಕಷ್ಟದ ಅವಧಿಯಲ್ಲಿ ಆಟಗಾರರಿಗೆ ಸಹಾಯ ಮಾಡುವ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆರ್ಥಿಕ ಸಹಾಯದ ಅಗತ್ಯವಿರುವ ಸುಮಾರು 800 ಡಬಲ್ಸ್ ಮತ್ತು ಸಿಂಗಲ್ಸ್ ಆಟಗಾರರಿಗೆ ಸಹಾಯ ಮಾಡಲು ಎಟಿಪಿ ಮತ್ತು ಡಬ್ಲ್ಯೂಟಿಎ ಗುರಿಯನ್ನು ಹೊಂದಿದೆ. ಆಟಗಾರರ ಶ್ರೇಯಾಂಕ ಮತ್ತು ಹಿಂದಿನ ಬಹುಮಾನದ ಹಣವನ್ನು ಆಧರಿಸಿ ಹಣಕಾಸಿನ ನೆರವು ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೇಳಿಕೆಯ ಪ್ರಕಾರ, ಹರಾಜು, ಆಟಗಾರರ ನೆರವು ಮತ್ತು ಟೆನಿಸ್ ಪಂದ್ಯಗಳ ಮೂಲಕ ಈ ನಿಧಿಗೆ ಹಣವನ್ನು ಸಂಗ್ರಹಿಸಲಾಗಿದೆ. ಕೊರೊನಾ ವೈರಸ್‌ನಿಂದಾಗಿ ವೃತ್ತಿಪರ ಟೆನಿಸ್ ಅನ್ನು ಜುಲೈ 13 ರವರೆಗೆ ಮುಂದೂಡಲಾಗಿದೆ ಎಂಬುದು ಗಮನಾರ್ಹ. ಇದೇ ರೀತಿ ಇತರೆ ಕ್ರೀಡಾ ಸಂಸ್ಥೆಗಳು ಮುಂದೆ ಬಂದು ತಮ್ಮ ತಮ್ಮ ಆಟಗಾರರಿಗೆ ಸಹಾಯ ಮಾಡವೇಕಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights