Fact check: ಯುಪಿಯ ಗೋರಖ್‌ಪುರದಲ್ಲಿ ವಿಶ್ವದ ಅತಿ ಉದ್ದದ LPG ಪೈಪ್‌ಲೈನ್‌ ಫೋಟೋದ ವಾಸ್ತವವೇನು?

ಉತ್ತರ ಪ್ರದೇಶದ ಚುನಾವಣೆಯು ಹತ್ತಿರವಾಗುತ್ತಿದ್ದಂತೆ, ರಾಜಕೀಯ ಪಕ್ಷಗಳು ಮತ್ತು ಅವರ ಬೆಂಬಲಿಗರು ಎಂದಿಗಿಂತಲೂ ಹೆಚ್ಚು ಡಿಜಿಟಲ್ ಪ್ರಚಾರಗಳನ್ನು ಅವಲಂಬಿಸಿದ್ದಾರೆ. ಅದರ ಮಧ್ಯೆ ‘ಯುಪಿಯ ಗೋರಖ್‌ಪುರದಲ್ಲಿ ವಿಶ್ವದ ಅತಿ ಉದ್ದದ LPG ಪೈಪ್‌ಲೈನ್ ಬರುತ್ತಿದೆ’  ಎಂಬ ಪೋಸ್ಟ್ ಒಂದು ವೈರಲ್ ಆಗುತ್ತಿದೆ.

ಬಿಜೆಪಿಯು ಗೋರಖ್‌ಪುರ (ನಗರ)ದಿಂದ ಯೋಗಿ ಆದಿತ್ಯನಾಥ್ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿದಾಗಿನಿಂದ, ಸಾಮಾಜಿಕ ಮಾಧ್ಯಮ ಬಳಕೆದಾರರು ಗೋರಖ್‌ಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಯೋಜನೆಯ ಚಿತ್ರವಿರುವ ಪೋಸ್ಟ್‌ಕಾರ್ಡ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ವೈರಲ್‌ ಆಗಿರುವ ಚಿತ್ರದಲ್ಲಿ ಕ್ರೇನ್‌ಗಳ ಸಹಾಯದಿಂದ  ಬೃಹತ್‌ ಪೈಪನ್ನು ಎತ್ತುತ್ತಿರುವುದು ಕಾಣಬಹುದು. ಇದು ನಿಜವೇ ಎಂದುದನ್ನು ಪರಿಶೀಲಿಸೋಣ.


ಇದನ್ನು ಓದಿರಿ: fact check: ಮುಸ್ಲಿಂ ಯುವಕನಿಂದ ಕಳ್ಳತನ ಎಂದು ನಟಿಸಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ


ವೈರಲ್ ಆದ ಪೋಸ್ಟ್‌ಕಾರ್ಡ್‌ನಲ್ಲಿ, “ಯುಪಿಯ ಗೋರಖ್‌ಪುರದಲ್ಲಿ ವಿಶ್ವದ ಅತಿ ಉದ್ದದ ಎಲ್‌ಪಿಜಿ ಪೈಪ್‌ಲೈನ್ ಬರಲಿದೆ, 2023 ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ಕಾಂಡ್ಲಾ-ಗೋರಖ್‌ಪುರ ಪೈಪ್‌ಲೈನ್ ಅನ್ನು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 2,757 ಕಿಮೀ ಉದ್ದದ ಪೈಪ್‌ಲೈನ್ 34 ಕೋಟಿ ಮನೆಗಳಿಗೆ ಅನಿಲವನ್ನು ಪೂರೈಸುತ್ತದೆ. ಭಾರತದಲ್ಲಿ LPG ಕ್ರಾಂತಿಗೆ ನಾಂದಿ ಹಾಡುವ ಆಟವನ್ನು ಬದಲಾಯಿಸುವ ಯೋಜನೆ..! ಎಂದು ಪ್ರತಿಪಾದಿಸಲಾಗಿದೆ.

ಫ್ಯಾಕ್ಟ್‌ಚೆಕ್:

ಯುಪಿಯಲ್ಲಿ ಇಂತಹ ಯೋಜನೆಯ ಕಾಮಗಾರಿ ನಡೆಯುತ್ತಿದ್ದರೂ ಸಹ  ವೈರಲ್ ಪೋಸ್ಟ್‌ ನಲ್ಲಿ ಬಳಸಲಾದ ಚಿತ್ರವು ಮೂಲತಃ 12 ವರ್ಷಗಳ ಹಿಂದೆ ಜರ್ಮನಿಯಲ್ಲಿ ತೆಗೆದ ಚಿತ್ರವಾಗಿದೆ. ಏಪ್ರಿಲ್ 8, 2010 ರಂದು “ದಿ ನ್ಯೂಯಾರ್ಕ್ ಟೈಮ್ಸ್” ಪ್ರಕಟಿಸಿದ ವರದಿಯಲ್ಲಿ ಇದೇ ಚಿತ್ರವನ್ನು ಬಳಸಲಾಗಿದೆ.

ಇದೇ ಫೊಟೊವನ್ನು ಬಳಸಿಕೊಂಡು ಕಳೆದ ವರ್ಷ ಮಾರ್ಚ್‌ನಲ್ಲಿ ಯುಪಿಯಲ್ಲಿ ಎಲ್‌ಪಿಜಿ ಪೈಪ್‌ಲೈನ್ ಕೆಲಸದ ಕುರಿತು ವರದಿ ಮಾಡಿದ್ದಾರೆ. ಅದನ್ನು ಇಲ್ಲಿ ನೋಡಬಹುದಾಗಿದೆ.

ಹೆಚ್ಚಿನ ದೃಢೀಕರಣಕ್ಕಾಗಿ ಅಧಿಕೃತ “ಗೆಟ್ಟಿ ಇಮೇಜಸ್” ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಜರ್ಮನಿಯಲ್ಲಿ ಸೀನ್ ಗ್ಯಾಲಪ್ ಅವರು ತೆಗೆದ ಮೂಲ ಛಾಯಾಚಿತ್ರವು ಲಭಿಸಿದೆ.

ಗೆಟ್ಟಿ ಇಮೇಜಸ್ ಶೀರ್ಷಿಕೆಯು “ಜರ್ಮನಿಯ ಲುಬ್ಮಿನ್ ಬಳಿ ಏಪ್ರಿಲ್ 8, 2010 ರಂದು OPAL ಪೈಪ್‌ಲೈನ್‌ಗಾಗಿ ಕ್ರೇನ್‌ಗಳು ಪೈಪ್‌ನ ಒಂದು ಭಾಗವನ್ನು ನೆಲಕ್ಕೆ ಇಳಿಸಿದಾಗ ಕೆಲಸಗಾರನು ಆಜ್ಞೆಗಳನ್ನು ಕೂಗುತ್ತಾನೆ. OPAL ಮತ್ತು NEL ಪೈಪ್‌ಲೈನ್‌ಗಳು ರಷ್ಯಾದಿಂದ ನೈಸರ್ಗಿಕ ಅನಿಲವನ್ನು ಬಾಲ್ಟಿಕ್ ಸಮುದ್ರದಿಂದ ಜರ್ಮನಿಯಾದ್ಯಂತ ಮತ್ತು ಯುರೋಪ್‌ನ ಇತರ ದೇಶಗಳಿಗೆ ನಾರ್ಡ್ ಸ್ಟ್ರೀಮ್ ಪೈಪ್‌ಲೈನ್ ಮೂಲಕ ತಲುಪಿಸುತ್ತವೆ. ನಾರ್ಡ್ ಸ್ಟ್ರೀಮ್ ಯೋಜನೆಯು ರಷ್ಯಾದ ನೈಸರ್ಗಿಕ ಅನಿಲವನ್ನು ನೇರವಾಗಿ ಪಶ್ಚಿಮ ಯುರೋಪ್‌ಗೆ ತಲುಪಿಸುತ್ತದೆ ಮತ್ತು ಪೋಲೆಂಡ್ ಮತ್ತು ಉಕ್ರೇನ್‌ನಂತಹ ದೇಶಗಳಿಗೂ ಕೂಡ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ಆದ ಚಿತ್ರವು ಉತ್ತರ ಪ್ರದೇಶದ ಕಾಂಡ್ಲಾ-ಗೋರಖ್‌ಪುರ ಎಲ್‌ಪಿಜಿ ಪೈಪ್‌ಲೈನ್ ಯೋಜನೆಯದ್ದಲ್ಲ, ಏಪ್ರಿಲ್ 2010 ರಲ್ಲಿ ಜರ್ಮನಿಯಲ್ಲಿ ತೆಗೆದ ಫೊಟೊ ಎಂದು ಸಾಬೀತಾಗಿದೆ.


ಇದನ್ನು ಓದಿರಿ: Fact check: RSSನ ಮೋಹನ್ ಭಾಗವತ್ ಜೊತೆ ಓವೈಸಿ ಭೇಟಿ ಎಂಬುದು ಎಡಿಟೆಡ್ ಫೋಟೋ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights