ಸಿನಿಮಾ ರೀತಿ ವಿವಾಹ: ಮಂಟಪದಿಂದ ವರ ನಾಪತ್ತೆ; ವಧುವನ್ನು ಮದುವೆಯಾದ ಕಂಡಕ್ಟರ್!

ರಾತ್ರಿ ರಿಷಪ್ಶನ್‌ ಸಮಾರಂಭದಲ್ಲಿ ಇದ್ದ ವರ, ಬೆಳಗ್ಗೆ ಮುಹೂರ್ತದ ವೇಳೆಗೆ ಕಾಣೆಯಾಗಿದ್ದು, ಮಧುವನ್ನು ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ವಿವಾಹವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಎಂಬ ಅಣ್ಣತಮ್ಮಂದಿರಿಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಯುವತಿಯರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ, ಸಿಂಧು ಎಂಬ ಯುವತಿ ಜೊತೆ ರಿಸೆಪ್ಷನ್‍ನಲ್ಲಿದ್ದ ನವೀನ್ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ.

ನವೀನ್‌ನನ್ನು ಪ್ರೀತಿಸಿದ ಯುವತಿ ಶನಿವಾರ ರಾತ್ರಿ, ನನ್ನನ್ನು ಪ್ರೀತಿಸಿ ಬೇರೆ ಹುಡುಗಿಯನ್ನು ಮದುವೆಯಾಗಲು ಬಿಡಲ್ಲ. ನಾನು ಛತ್ರದಲ್ಲೇ ವಿಷ ಕುಡಿಯುತ್ತೇನೆ. ಮದುವೆ ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದರಿಂದ ಭಯಗೊಂಡ ನವೀನ್‌ ಮದುವೆ ಮಂಟಪದಿಂದ ನಾಪತ್ತೆಯಾಗಿದ್ದರು.

ಹೀಗಾಗಿ, ವಿವಾಹ ನಿಂತುಹೋಗಿದೆ. ಆ ಸಂದರ್ಭದಲ್ಲಿ, ನಂದಿ ಗ್ರಾಮದ ಯುವಕ ಚಂದ್ರು ಎಂಬಾತ ಸಿಂಧು ಎಂಬ ವಧುವನ್ನು ವಿವಾಹವಾಗಿದ್ದಾರೆ. ಚಂದ್ರು ಬೆಂಗಳೂರಿನ ಬಿಎಂಟಿಸಿ ಬಸ್ ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ.

ನಾಪತ್ತೆಯಾದ ಯುವಕನನ್ನ ಪೋಷಕರು ಹುಡುಕಾಟ ನಡೆಸಿದರೂ ಸಿಕ್ಕಿಲ್ಲ.


ಇದನ್ನೂ ಓದಿ: ಭಾರತದ ರಫ್ತಿನಲ್ಲಿ ಭಾರೀ ಕುಸಿತ: 15.71 ಬಿಲಿಯನ್ ಡಾಲರ್ ವ್ಯಾಪಾರ ಕೊರತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights