ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ; ಮಗುವನ್ನು ಉಪ್ಪು ನೀರಿನ ತೊಟ್ಟಿಗೆ ಎಸೆದ ವಿಕೃತ ಕಾಮುಕ

ವಿಕೃತ ಮನಸ್ಸಿನ ಕಾಮುಕನೊಬ್ಬ ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಿಗಿದ್ದು, ಕೃತ್ಯದ ಬಳಿಕ ಮಗುವನ್ನು ಉಪ್ಪು ನೀರಿನ ತೊಟ್ಟಿಗೆ ಎಸೆದಿರುವ ಅಮಾನುಷ, ಹೃದಯವಿದ್ರಾವಕ ಘಟನೆ ಮಂಗಳೂರಿನ ಹೊಯ್ಗೆ ಬಜಾರ್ ಎಂಬಲ್ಲಿ ಭಾನುವಾರ ನಡೆದಿದೆ.

ಮಗುವನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ಮಗು ಬಿಹಾರ ಮೂಲದ ದಂಪತಿಗಳ ಮಗು ಎಂದು ಗುರುತಿಸಲಾಗಿದೆ. ತಂದೆ ತಾಯಿ ಸಂಜೆ ಕೆಲಸ ಮುಗಿಸಿ ಬಂದಾಗ ಮಗು ನಾಪತ್ತೆಯಾಗಿತ್ತು. ಮಗುವನ್ನು ಹುಡುಕಾಡಿದಾಗ ರಾತ್ರಿ 9 ಗಂಟೆಗೆ ಉಪ್ಪು ನೀರಿನ ಮೀನಿನ ತೊಟ್ಟಿಯಲ್ಲಿ ಮಗು ಪತ್ತೆಯಾಗಿದೆ. ನಂತರ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಹಾರ ಮೂಲದ ವ್ಯಕ್ತಿಯೋರ್ವ ಮಗುವನ್ನು ಕರೆದುಕೊಂಡು ಹೋಗಿದ್ದಾನೆ ಎಂಬುದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ. ನಂತರ, ಆರೋಪಿಯನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ಆತ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಮಗು ಸದ್ಯ ಚೇತರಿಕೆ ಕಾಣುತ್ತಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಕೋರ್ಟ್‌ಗೆ ಶರಣಾದ RSS ಮುಖಂಡ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights