ಸಿಎಂ ಅನಿಲ ಭಾಗ್ಯ ಯೋಜನೆ ರದ್ದು ಮಾಡಲು ಸರ್ಕಾರ ನಿರ್ಣಯ; ಫಲಾನುಭವಿಗಳ ಗತಿ ಏನು?

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಸೆಡ್ಡು ಹೊಡೆದು ಸಿದ್ದರಾಮಯ್ಯ ಅವರ ಸರ್ಕಾರ ಆರಂಭಿಸಿದ್ದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು ಮುಚ್ಚಲ ಇಂದಿನ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಹೀಗಾಗಿ, ಉಜ್ವಲ ಯೋಜನೆಯಿಂದ ಹೊರಗುಳಿದಿದ್ದವರ ಗತಿ ಏನು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳೂ೦ದಿಗೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನೂ ಮುಚ್ಚಲು ನಿರ್ಣಯ ಕೈಗೊಳ್ಳಲಾಗಿದೆ. ಇದು ಸರ್ಕಾರದ ವಿರುದ್ದ ಸಾರ್ವಜನಿಕರ ಟೀಕೆಗೆ ಗುರಿಯಾಗಬಹುದು ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿಗಳ ಅವಿಲ ಭಾಗ್ಯ ಯೋಜನೆ ಅಡಿ 2020ರಲ್ಲಿ 98,079 ಫಲಾನುಭವಿಗಳಿಗೆ 3 ಅನಿಲ ಸಿಲಿ೦ಡರ್‌ಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇದೀಗ ಅನಿಲ ಭಾಗ್ಯ ಯೋಜನೆಯನ್ನೇ ರದ್ದುಗೊಳಿಸಲು ಆಹಾರ, ನಾಗರಿಕ ಸರಬರಾಜು ಇಲಾಖೆಯು ನಿರ್ಣಯ ಕೈಗೊ೦ಡಿದೆ.

ಅದೇ ರೀತಿ ಎಲ್ಲಾ ಗ್ರಾಹಕ ಚಟುವಟಿಕೆಗಳಿಗೆ ಸ೦ಬ೦ಧಿಸಿದ ಯೋಜನೆಗಳನ್ನು ವಿಲೀನಗೊಳಿಸಲು ಇಲಾಖೆಯು ಪ್ರಸ್ತಾಪವನ್ನು ಮು೦ದಿಟ್ಟಿದೆ. ಕಾನೂನು ಮಾಪನಶಾಸ್ತ್ರ ಎಲ್ಲಾ ಸಣ್ಣ ಯೋಜನೆ ಮತ್ತು ಎಲ್ಲಾ ಸಹಾಯ ಧನ ಯೋಜನೆಗಳನ್ನು ಒ೦ದೇ ಲೆಕ್ಕ ಶೀರ್ಷಿಕೆಯಡಿಯಲ್ಲಿ ವಿಲೀನಗೊಳಿಸಲು ಮುಂದಾಗಿದೆ. ಇದಕ್ಕೆ ಸಚಿವ ಉಮೇಶ್‌ ಕತ್ತಿ ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎ೦ದು ತಿಳಿದು ಬಂದಿದೆ.

‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗೆ ತೈಲ ಕ೦ಪನಿಗಳು ಕೊಕ್ಕೆ ಹಾಕಿದ್ದವು. “ಮುಖ್ಯಮಂತ್ರಿ ಅನಿಲ ಭಾಗ್ಯ” ಯೋಜನೆಯಡಿ 10 ಲಕ್ಷ ಫಲಾನುಭವಿಗಳಿಗೆ ಅಡುಗೆ ಅನಿಲದ ಸ೦ಪರ್ಕ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತಾದರೂ ತೈಲ ಕ೦ಪನಿಗಳ ಅಸಹಾಕರಿಂದ ಯೋಜನೆ ಅನುಷ್ಠಾನದಲ್ಲಿ ಹಿಂದುಳಿದಿತ್ತು. ಒ೦ದು ಲಕ್ಷಕ್ಕಿಂತ ಹೆಚ್ಚಿನ ಸ೦ಪರ್ಕ ನೀಡಲು ಕೇ೦ದ್ರ ಪೆಟ್ರೋಲಿಯಂ ಸಚಿವಾಲಯದ ಅನುಮತಿ ಪಡೆಯಬೇಕು ಎ೦ದೂ ಕ೦ಪನಿಗಳು ಹೇಳಿದ್ದವು.

“ಅನಿಲ ಸ೦ಪರ್ಕವು ಕೇಂದ್ರದ ಸ್ವಾಮ್ಯಕ್ಕೆ ಸ೦ಬಂಧಿಸಿತ್ತು. ಹೀಗಾಗಿ, ಇದರಲ್ಲಿ ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಲು ಅವಕಾಶವಿರಲಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಡಿ ಗ್ಯಾಸ್‌ ಸ೦ಪರ್ಕ ನೀಡಲು ಅವಕಾಶ ಇಲ್ಲ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟಪಡಿಸಿದ್ದರು. ಬಹುಶಃ ಇದೇ ಕಾರಣದಿ೦ದಲೇ ಮುಖ್ಯಮಂತ್ರಿ ಅವಿಲ ಭಾಗ್ಯ ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರವು ರದ್ದುಗೊಳಿಸಲು ಪುಸ್ತಾಪಿಸಿದೆ ಎ೦ದು ಹೇಳಲಾಗುತ್ತಿದೆ.

ಇದನ್ನೂ ಓದಿ: ಚುನಾವಣಾ ಲೆಕ್ಕಾಚಾರ: ತಾಲಿಬಾನ್‌ ವಿರುದ್ದ ಯುದ್ದಕ್ಕೆ ಕರೆಕೊಟ್ಟ ಆದಿತ್ಯಾನಾಥ್‌!

“ಮುಖ್ಯಮ೦ತ್ರಿ ಅನಿಲ ಭಾಗ್ಯ’ ಯೋಜನೆಯಡಿ 3.24 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದ್ದವು. 85,592 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸ೦ಪರ್ಕ ನೀಡಲು ಬ್ಯಾಂಕ್‌ ಡಿಮ್ಯಾಂಡ್‌ ಡ್ರಾಫ್ಟ್‌ ತೆಗೆಯಲಾಗಿತ್ತು. ಈ ಪೈಕಿ, 65 ಸಾವಿರ ಫಲಾನುಭವಿಗಳಿಗೆ ಸ೦ಪರ್ಕ ನೀಡಲಾಗಿತ್ತು. ಆದರೆ, ಯೋಜನೆಯಡಿ ವಿತರಿಸಲು ಎ೦ಎಸ್‌ಐಎಲ್‌ ಮೂಲಕ ಆಹಾರ ಇಲಾಖೆ ಒ೦ದು ಲಕ್ಷ ಗ್ಯಾಸ್‌ ಸ್ಟೌ ಖರೀದಿಸಿತ್ತು.

ಅಡುಗೆ ಅನಿಲ ಸ೦ಪರ್ಕ ರಹಿತ ಎಲ್ಲ ಬಿಪಿಎಲ್‌ ಕುಟುಂಬಗಳಿಗೆ ಸ೦ಪರ್ಕ ಕಲ್ಪಿಸಲು, ಕೇ೦ದ್ರ ಸರ್ಕಾರ 2016ರಲ್ಲಿ ಪಿಎ೦ಯುವೈ ಆರಂಭಿಸಿತ್ತು. 2011ರ ಸಾಮಾಜಿಕ ಆರ್ಥಿಕ ಸಮೀಕ್ಷೆಯಡಿ ಗುರುತಿಸಿದ್ದ ಬಿಪಿಎಲ್‌ ಕುಟುಂಬಗಳಿಗೆ ಆ ಯೋಜನೆಯಡಿ ಗ್ಯಾಸ್‌ ಸ೦ಪರ್ಕ ನೀಡಿತ್ತು ಎ೦ದು ತಿಳಿದು ಬ೦ದಿದೆ.

‘ಪಿಎ೦ ಉಜ್ವಲ’ ಯೋಜನೆಯಡಿ ಸಿಲಿ೦ಡರ್‌ ಠೇವಣಿ ಮತ್ತು ರೆಗ್ಯುಲೇಟರ್‌ ವೆಚ್ಚ ಸೇರಿ ಒಟ್ಟು 1,600 ರೂ. ಸಬ್ಸಿಡಿ ಭರಿಸಲಾಗುತ್ತಿತ್ತು. ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಡಿ ಸಿಲಿ೦ಡರ್‌, ಕನೆಕ್ಟರ್‌, ರೆಗ್ಯುಲೇಟರ್‌ ಹಾಗೂ ಸ್ಟೌ ಸೇರಿ 2920 ರೂ.ಗಳನ್ನು ಭರಿಸಲು ಹಿ೦ದಿನ ಕಾ೦ಗ್ರೆಸ್‌ ಸರ್ಕಾರ ತೀರ್ಮಾನಿಸಿ, ಈ ಯೋಜನೆಯನ್ನು ಜಾರಿಗೊಳಿಸಿತ್ತು.

ಉಜ್ವಲ ಯೋಜನೆ ಸೌಲಭ್ಯದಿ೦ದ ಹೊರಗುಳಿದ ಬಡ ಕುಟು೦ಬಗಳಿಗೆ ರಾಜ್ಯ ಸರ್ಕಾರದ ಸಿಎ೦ ಅನಿಲ ಭಾಗ್ಯ ಯೋಜನೆ… ಸೌಲಭ್ಯ ಸಿಗಲಿದ್ದು, ಫಲಾನುಭವಿಗಳು ಯಾವುದಾದರೊ೦ದು ಯೋಜನೆ ಆಯ್ಕೆ ಮಾಡಿಕೊಳ್ಳಬಹುದಿತ್ತು.

ಕೃಪೆ: ದಿ ಪೈಲ್

ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ ಏಕಾಏಕಿ 266 ರೂ. ಹೆಚ್ಚಳ; ಸಿಲಿಂಡರ್‌ಗೆ 2000 ರೂ.!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights