ಕಾಂಗ್ರೆಸ್‌ನಲ್ಲಿ ಸಾಕಷ್ಟು ನೋವುಂಡು ಬಿಜೆಪಿ ಸೇರಿದ್ದೇನೆ: ಮಾಜಿ ಕಾಂಗ್ರೆಸ್ ಯುವ ಮುಖಂಡ

ಹಗರಿಬೊಮ್ಮನಹಳ್ಳಿ ತಾಲೂಕಿನ ಪ್ರಭಾವಿ ಕಾಂಗ್ರೆಸ್‌ ಯುವ ಮುಖಂಡ ಬ್ಯಾಲಹುಣಸೆ ರಾಮಣ್ಣ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ಹರಿಗಬೊಮ್ಮನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಅವರು ಬ್ಯಾಲಹುಣಸೆ ರಾಮಣ್ಣ ಸೇರಿದಂತೆ ಹಗರಿಬೊಮ್ಮನಹಳ್ಳಿಯ ಅನೇಕ ಕಾಂಗ್ರೆಸ್‌ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿಕೊಂಡರು.

ಈ ಕ್ಷಣಕ್ಕೆ ಕೇಂದ್ರ, ರಾಜ್ಯ ಸಚಿವರು, ಶಾಸಕರು, ಸಂಸದರು ಹಾಗೂ ಅಪಾರ ಜನಸ್ತೋಮ ಸಾಕ್ಷಿಯಾದರು. ಹಗರಿಬೊಮ್ಮನಹಳ್ಳಿ ಹಾಗೂ ನಗರದ ನೂರಾರು ಬಿಜೆಪಿ ಕಾರ್ಯಕರ್ತರು ಪಕ್ಷ ಸೇರ್ಪಡೆಗೊಂಡ ಮುಖಂಡರಿಗೆ ಜಯಘೋಷಣೆ ಹಾಕಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬ್ಯಾಲಹುಣಸೆ ರಾಮಣ್ಣ, ಕಾಂಗ್ರೆಸ್‌ನಲ್ಲಿ ಸಾಕಷ್ಟು ನೋವುಂಡೆವು. ಅನೇಕ ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದು ಪಕ್ಷ ಸಂಘಟನೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್‌ನಲ್ಲಿ ಬರೀ ಬಾಯಿಮಾತಿಗಷ್ಟೇ ಹೊರತು ಆಚರಣೆಯಿಲ್ಲಿಲ್ಲ. ಹೀಗಾಗಿ ದಲಿತ ಸಮುದಾಯಗಳಿಗೆ ದೊಡ್ಡ ಅನ್ಯಾಯವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೈ ಪಕ್ಷದಲ್ಲಿ ಸಾಕಷ್ಟು ನೊಂದು, ಬೆಂದು ಬಿಜೆಪಿಯನ್ನು ಸೇರಲು ನಿರ್ಧಾರ ಕೈಗೊಂಡಿದ್ದನೆ. ನಮ್ಮಂತೆ ಅನೇಕರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಾವು ಬಿಜೆಪಿಯ ಸಿದ್ಧಾಂತವನ್ನು ಒಪ್ಪಿಯೇ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ. ಬರುವ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಹಾಗೂ ಪುರಸಭೆ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಕಮಲ ಪಕ್ಷ ಅಧಿಕಾರ ಹಿಡಿಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.

ಇದೇ ವೇಳೆ 2018ರ ವಿಧಾನಸಭಾ ಚುನಾವಣೆಯ ಜೆಡಿಎಸ್‌ ಪರಾಜಿತ ಅಭ್ಯರ್ಥಿ ಕೃಷ್ಣಾನಾಯ್ಕ, ಹಗರಿಬೊಮ್ಮನಹಳ್ಳಿ ಮಾಜಿ ಪುರಸಭೆ ಅಧ್ಯಕ್ಷ ತಳವಾರ ರಾಘವೇಂದ್ರ, ಜೋಗಿ ಹನುಮಂತಪ್ಪ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಪೂರಾರ‍ಯ ನಾಯ್ಕ, ತಾಲೂಕು ಪಂಚಾಯಿತಿ ಸದಸ್ಯರಾದ ಬಸವರಾಜ್‌, ಸೋಮ್ಲಾನಾಯ್ಕ, ಮಾಜಿ ಪುರಸಭೆ ಸದಸ್ಯ ವಿ. ಕನಕಪ್ಪ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಸದಸ್ಯ ಎಲ್‌. ಮಂಜುನಾಥ, ಆನಂದ, ಚಿಲಕನಹಟ್ಟಿಗ್ರಾಪಂ ಮಾಜಿ ಅಧ್ಯಕ್ಷ ಸಿ. ದೇವೇಂದ್ರಪ್ಪ, ಹಗರಿಬೊಮ್ಮನಹಳ್ಳಿ ಮಾಜಿ ಪುರಸಭೆ ಸದಸ್ಯ ನವೀನ್‌ಕುಮಾರ್‌, ಈ. ಭರತ್‌ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಗೊಂಡು, ಪಕ್ಷ ಬಲವರ್ಧನೆಗೆ ಶ್ರಮಿಸುವುದಾಗಿ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights