IPL 2020 ಆರಂಭ: ಇದೂವರೆಗೂ ಹೆಚ್ಚುಬಾರಿ ಕಪ್‌ ಗೆದ್ದಿರುವ ತಂಡಗಳಾವು ಗೊತ್ತೇ?

2020ರ ಐಪಿಎಲ್‌ ಟೂರ್ನಿಯು ಇಂದಿನಿಂದ ಆರಂಭವಾಗಲಿದೆ. ಯುಎಇಯಲ್ಲಿ ಇಂದು ಸಂಜೆಯಿಂದ ಪ್ರೇಕ್ಷರಿಲ್ಲದ ಟೂರ್ನಿ ಆರಂಭವಾಗಲಿದೆ. ಅಬುಧಾಬಿಯ ಶೇಖ್ ಝಾಯದ್ ಸ್ಟೇಡಿಯಂ ನಲ್ಲಿ ಟೂರ್ನಿಯ ಮೊಲದ ಆಟದಲ್ಲಿ ಕಳೆದ ಬಾರಿ ಕಪ್ ‌ಗೆದ್ದಿದ್ದ ಚೆನೈ ಸೂಪರ್ ಕಿಂಗ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಎದುರಾಗಲಿವೆ.

ಕಳೆದ ಬಾರಿ ಕಪ್‌ ಗೆದ್ದಿದ್ದ ಮುಂಬೈ ಇಂಡಿಯಲ್ಸ್‌ ಈ ಬಾರಿಯೂ ಕಪ್‌ ಗೆಲ್ಲುವ ಉತ್ಸಾಹದಲ್ಲಿದೆ. ರನ್ನರ್‌ ಅಪ್‌ ಪಡೆದಿದ್ದ ಸಿಎಸ್‌ಕೆ ಈ ಬಾರಿ ಕಪ್‌ ಪಡೆಯಲೇಬೇಕೆಂದು ಕಸರತ್ತು ನಡೆಸಿದೆ.

ಕಳೆದ ಸೀಸನ್​ನಲ್ಲಿ ವಿಫಲತೆಯಿಂದ ನಲುಗಿದ್ದ ಕೊಲ್ಕತ್ತಾ ನೈಟ್​ರೈಡರ್ಸ್​ ತಂಡ ಈ ಬಾರಿ ತಮ್ಮ ಎಂದಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. 11ನೇ ಸೀಸನ್​ನಲ್ಲಿ ರೋಚಕ ಆಟ ಪ್ರದರ್ಶಿಸಿದ್ದ ಸನ್​ ರೈಸರ್ಸ್​ ಹೈದರಾಬಾದ್ ಈ ಬಾರಿ ಚಾಂಪಿಯನ್ ಪಟ್ಟ ಪಡೆಯಲು ಸಜ್ಜಾಗಿದೆ.

ಅಲ್ಲದೆ, ಕಳೆದ ಬಾರಿ ಪ್ಲೇ ಆಫ್ ಎಂಟ್ರಿ ಕೊಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಕೂಡ ಫೇವರೆಟ್ ತಂಡಗಳಲ್ಲಿ ಗುರುತಿಸಿಕೊಂಡಿದೆ. ತಂಡವನ್ನು ಶ್ರೇಯಸ್ ಅಯ್ಯರ್  ಮುನ್ನಡೆಸಲಿದ್ದು, ಭಾರತದ ಯುವ ಆಟಗಾರರೇ ತಂಡದ ಪ್ಲಸ್​ ಪಾಯಿಂಟ್ ಆಗಿದ್ದಾರೆ.

ಪಿಂಕ್ ಸಿಟಿಯನ್ನು ಪ್ರತಿನಿಧಿಸಲಿರುವ ಪಿಂಕ್ ಜೆರ್ಸಿಯ ರಾಜಸ್ಥಾನ್ ರಾಯಲ್ಸ್​, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಕಪ್‌ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ಮುಂದಾಗಿವೆ.

ಇದನ್ನೂ ಓದಿ: ಇಂದಿನಿಂದ ಐಪಿಎಲ್‌ ಆರಂಭ; ಮೊದಲ ಪಂದ್ಯದಲ್ಲಿ ಸೆಣೆಸಾಡುವ ತಂಡಗಳ ಬಲ ಹೇಗಿದೆ ಗೊತ್ತೇ?

ಪ್ರತಿ ವರ್ಷವೂ, ಈ ಬಾರಿ ಕಪ್ ನಮ್ದೆ ಎಂದು ಹೇಳಿಕೊಳ್ಳುವ ಕೊಹ್ಲಿ ಪಡೆ ಆರ್‌ಸಿಬಿ ಕೂಡ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಅಭ್ಯಾಸಕ್ಕಾಗಿ ಎರಡು ತಂಡಗಳನ್ನು ಮಾಡಿಕೊಂಡು ಭಾರಿ ಅಭ್ಯಾಸ ಮಾಡುತ್ತಿವೆ. ಆರ್‌ಸಿಬಿ ತಂಡವು ಸೋಮವಾರ ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಮೊದಲ ಪಂದ್ಯವನ್ನಾಡಲಿದೆ. ಕಳೆದ 12 ಸೀಸನ್​ಗಳಿಂದ ಮರೀಚಿಕೆಯಾಗಿರುವ ಟ್ರೋಫಿ ಈ ಬಾರಿ ಆರ್​ಸಿಬಿ ಮುಡಿಗೇರಲಿದೆ ಎಂಬ ವಿಶ್ವಾಸದಲ್ಲಿ ಅಭಿಮಾನಿಗಳು ಕೂಡ ನಿರೀಕ್ಷೆಯಲ್ಲಿದ್ದಾರೆ.

ಇಲ್ಲಿಯವರೆಗೂ ಐಪಿಎಲ್​ನಲ್ಲಿ​ ಕಿರೀಟ ಮುಡಿಗೇರಿಸಿದ ತಂಡಗಳ ಪಟ್ಟಿ:

2008
ಚಾಂಪಿಯನ್ – ರಾಜಸ್ಥಾನ್ ರಾಯಲ್ಸ್
ರನ್ನರ್ ಅಪ್ – ಚೆನ್ನೈ ಸೂಪರ್ ಕಿಂಗ್ಸ್

2009
ಚಾಂಪಿಯನ್- ಡೆಕ್ಕನ್ ಚಾರ್ಜರ್ಸ್
ರನ್ನರ್ ಅಪ್- ರಾಯಲ್ ಚಾಲೆಂಜರ್ಸ್ ಬೆಂಗಳೂರು

2010
ಚಾಂಪಿಯನ್- ಚೆನ್ನೈ ಸೂಪರ್ ಕಿಂಗ್ಸ್
ರನ್ನರ್ ಅಪ್- ಮುಂಬೈ ಇಂಡಿಯನ್ಸ್

2011
ಚಾಂಪಿಯನ್- ಚೆನ್ನೈ ಸೂಪರ್ ಕಿಂಗ್ಸ್
ರನ್ನರ್ ಅಪ್- ರಾಯಲ್ ಚಾಲೆಂಜರ್ಸ್ ಬೆಂಗಳೂರು

2012
ಚಾಂಪಿಯನ್- ಕೋಲ್ಕತಾ ನೈಟ್ ರೈಡರ್ಸ್
ರನ್ನರ್ ಅಪ್- ಚೆನ್ನೈ ಸೂಪರ್ ಕಿಂಗ್ಸ್

2013
ಚಾಂಪಿಯನ್- ಮುಂಬಯಿ ಇಂಡಿಯನ್ಸ್
ರನ್ನರ್ ಅಪ್- ಚೆನ್ನೈ ಸೂಪರ್ ಕಿಂಗ್ಸ್

2014
ಚಾಂಪಿಯನ್- ಕೊಲ್ಕತ್ತಾ ನೈಟ್ ರೈಡರ್ಸ್
ರನ್ನರ್ ಅಪ್- ಕಿಂಗ್ಸ್ ಇಲೆವೆನ್ ಪಂಜಾಬ್

2015
ಚಾಂಪಿಯನ್- ಮುಂಬೈ ಇಂಡಿಯನ್ಸ್
ರನ್ನರ್ ಅಪ್- ಚೆನ್ನೈ ಸೂಪರ್ ಕಿಂಗ್ಸ್

2016
ಚಾಂಪಿಯನ್- ಸನ್​ರೈಸರ್ಸ್​ ಹೈದರಾಬಾದ್
ರನ್ನರ್ ಅಪ್- ರಾಯಲ್ ಚಾಲೆಂಜರ್ಸ್

2017
ಚಾಂಪಿಯನ್- ಮುಂಬಯಿ ಇಂಡಿಯನ್ಸ್
ರನ್ನರ್ ಅಪ್- ಪುಣೆ ಸೂಪರ್​ಜೈಂಟ್ಸ್

2018
ಚಾಂಪಿಯನ್- ಚೆನ್ನೈ ಸೂಪರ್ ಕಿಂಗ್ಸ್
ರನ್ನರ್ ಅಪ್- ಸನ್​ರೈಸರ್ಸ್ ಹೈದರಾಬಾದ್

2019
ಚಾಂಪಿಯನ್- ಮುಂಬೈ ಇಂಡಿಯನ್ಸ್
ರನ್ನರ್ ಅಪ್- ಚೆನ್ನೈ ಸೂಪರ್ ಕಿಂಗ್ಸ್​

ಬಹುತೇಕ ಪಂದ್ಯಗಳು ರಾತ್ರಿ 7.30 ಗಂಟೆಗೆ ಆರಂಭವಾಗಲಿದ್ದು, 2 ಪಂದ್ಯಗಳಿದ್ದ ದಿನ ಮೊದಲ ಪಂದ್ಯ ಸಂಜೆ 3.30 ಗಂಟೆಗೆ ಹಾಗೂ ಎರಡನೇ ಪಂದ್ಯ ರಾತ್ರಿ 7.30 ಕ್ಕೆ ನಡೆಯಲಿದೆ. ಈ ಪಂದ್ಯಗಳ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಚಾನೆಲ್​ ಹಾಗೂ ಹಾಟ್​ಸ್ಟಾರ್​ನಲ್ಲಿ ಇರಲಿದೆ.


ಇದನ್ನೂ ಓದಿ: IPL 2020: ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಆಟ- ರೈನಾ, ಭಜ್ಜಿ ಬಚ್ಚಿಟ್ಟಿದ್ದಾರಾ ಭಯಾನಕ ಸೀಕ್ರೆಟ್..?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights