ಕೃಷಿ ನೀತಿ ವಿರೋಧಿಸಿ ರೈತ ಸಾವು: ಯೂ-ಟರ್ನ್‌ ಹೊಡೆದ ಹರ್ಸಿಮ್ರತ್ ಕೌರ್ ಬಾದಲ್!

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಹೊಸ ಕೃಷಿ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಅದರಲ್ಲೂ ಪಂಜಾಬ್‌ನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಕೃಷಿ ನೀತಿಯನ್ನು ವಿರೋಧಿ ಪ್ರತಿಭಟನೆ ನಡೆಸುತ್ತಿದ್ದ 70 ವರ್ಷದ ರೈತರೊಬ್ಬರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಈ ಸಾವು “ಕೃಷಿ ನೀತಿಗೆ ಮೊದಲ ಬಲಿ” ಎಂದು ರೈತ ಸಂಘಟನೆಗಳು ಕರೆದಿದ್ದು, ಈ ಸಾವಿಗೆ ಸರ್ಕಾರವೇ ಕಾರಣ ಎಂದು ಆರೋಪಿಸಿವೆ.

ಪಂಜಾಬ್‌ ಮಾಜಿ ಮುಖ್ಯಮಂತ್ರಿ  ಪ್ರಕಾಶ್ ಸಿಂಗ್ ಬಾದಲ್‌ ಅವರ ಸ್ವಗ್ರಾಮ ಬಾದಲ್‌ನಲ್ಲಿ ಸೆಪ್ಟೆಂಬರ್‌ 15ರಿಂದ ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹಣ್) ಪ್ರತಿಭಟನೆ ನಡೆಸುತ್ತಿದೆ. ಸಾವನ್ನಪ್ಪಿದ್ದ ರೈತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು  ಏಕ್ತಾ ಉಗ್ರಾಹಣ್ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಉದ್ಯಮಿಗಳಿಗಾಗಿ ರೈತರ ಭೂಮಿ ಕಿತ್ತುಕೊಂಡು ಬೀದಿ ಪಾಲು ಮಾಡುತ್ತಿದೆ ಸರ್ಕಾರ: ಶಶಿಕಾಂತ್‌ ಸೆಂಥಿಲ್‌

ಪಂಜಾಬ್‌ನಲ್ಲಿ ಕಿಸಾನ್ ಮಜ್ದೂರ್‌ ಸಂಘರ್ಷ್ ಸಂಘಟನೆ ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 26 ರವರೆಗೆ ರಾಜ್ಯಾದ್ಯಂತ ‘ರೈಲ್ ರೋಕೊ’ ಆಂದೋಲನಕ್ಕೆ ಕರೆ ನೀಡಿದೆ. ಇತರ ರೈತ ಸಂಘಟನೆಗಳು ಸೆಪ್ಟೆಂಬರ್ 25ಕ್ಕೆ ಪಂಜಾಬ್ ಬಂದ್‌ಗೆ ಕರೆ ನೀಡಿವೆ.

ದೇಶದಲ್ಲಿ ಕಳೆದ ಒಂದು ವಾರದಿಂದ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಹೊಸ ಕೃಷಿ ಮಸೂದೆಗಳು ರೈತರನ್ನು, ಕೃಷಿ ಕ್ಷೇತ್ರವನ್ನು ಕಾಪೋರೇಟ್ ಶಕ್ತಿಗಳ ಸೆರೆಯಾಗುವಂತೆ ಮಾಡುತ್ತವೆ ಎಂದು ಆರೋಪಿಸಿವೆ.

ಉಲ್ವಾ ಹೊಡೆದ ಹರ್ಸಿಮ್ರತ್ ಕೌರ್ ಬಾದಲ್

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ರೈತ ವಿರೋಧಿಯಾಗಿವೆ ಎಂದು ಆರೋಪಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಂಸದೆ ಮತ್ತು ಮಾಜಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಹೇಳಿಕೆಯಲ್ಲಿ ಯೂಟರ್ನ್‌ ಹೊಡೆದಿದ್ದಾರೆ.

ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿದ ಹರ್ಸಿಮ್ರತ್ ಕೌರ್ ಬಾದಲ್,  ಈ ಮೂರು ಮಸೂದೆಗಳನ್ನು “ರೈತ ವಿರೋಧಿ” ಎಂದು ಕರೆಯುತ್ತಿಲ್ಲ.  ರೈತರು ಅವರನ್ನು ರೈತ ವಿರೋಧಿ ಎಂದು ಕರೆಯುತ್ತಿದ್ದಾರೆ. ರೈತರ ಅನುಕೂಲಕ್ಕಾಗಿ ಮಸೂದೆಗಳು ಬಂದಿವೆ. ಅದು ಅವರ ಲಾಭದಲ್ಲಿದೆ ಎಂದು ರೈತರು ನಂಬಬೇಕು ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಆದರೆ, ಗುರುವಾರ ರಾಜೀನಾಮೆ ಘೋಷಿಸಿದ ನಂತರ, ಹರ್ಸಿಮ್ರತ್ ಕೌರ್ ಬಾದಲ್ “ಸರ್ಕಾರದ ನೀತಿಗಳು ರೈತ ವಿರೋಧಿಯಾಗಿವೆ. ಸರ್ಕಾರದ ರೈತ ವಿರೋಧಿ ಸುಗ್ರೀವಾಜ್ಞೆಗಳು ಮತ್ತು ಶಾಸನಗಳನ್ನು ವಿರೋಧಿಸಿ ನಾನು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ಟ್ವೀಟ್ ಮಾಡಿದ್ದರು.


ಇದನ್ನೂ ಓದಿ: ಮೋದಿ ಸರ್ಕಾರದ ಕೃಷಿ ನೀತಿ ರೈತ ವಿರೋಧಿಯಾಗಿದೆ ಎಂದು ಸಚಿವ ಸ್ಥಾನಕ್ಕೆ ಕೇಂದ್ರ ಸಚಿವೆ ರಾಜೀನಾಮೆ!


ಇದನ್ನೂ ಓದಿ: ಜೈ ಶ್ರೀರಾಮ್‌ ಹೇಳಲು ನಿರಾಕರಿಸಿದ ಕ್ಯಾಬ್‌ ಚಾಲಕನ ಹತ್ಯೆ; ನೋಯ್ಡಾದಲ್ಲಿ ಅಮಾನುಷ ಘಟನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights