ಭಾನುವಾರದಿಂದ ಅಮೆರಿಕಾದಲ್ಲಿಯೂ ಚೀನಾ ಆ್ಯಪ್‌ಗಳ ಬಳಕೆ ನಿಷೇಧ!

ಚೀನಾ ಮೂಲಕ ಆ್ಯಪ್‌ಗಳಾದ ಟಿಕ್​ಟಾಕ್ ಮತ್ತು ವೀ-ಚಾಟ್ ಅಪ್ಲಿಕೇಶನ್​ಗಳ ಡೌನ್ಲೋಡ್ ಮಾಡುವುದನ್ನು ಅಮೆರಿಕ ವಾಣಿಜ್ಯ ಇಲಾಖೆ ನಿಷೇಧಿಸಿದೆ. ಹೀಗಾಗಿ ಭಾನುವಾರದಿಂದ ಈ ಆ್ಯಪ್‌ಗಳ ಬಳಕೆ ಅಮೆರಿಕದ ಜನರಿಗೆ ಲಭ್ಯವಿರುವುದಿಲ್ಲ ಎಂದು ವೈಟ್​ಹೌಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಲ್ಲದೆ, “ಈ ಆ್ಯಪ್‌​ಗಳು ಮತ್ತು ಕಂಪನಿಗಳು ದೇಶದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುತ್ತಿವೆ ಮತ್ತು ಬಳಕೆದಾರರ ಮಾಹಿತಿಯನ್ನು ಚೀನಾಕ್ಕೆ ರವಾನಿಸುತ್ತಿವೆ ಎಂಬ ಸಂಶಯ ನಮಗಿದೆ. ಹಾಗಾಗಿ ಆ್ಯಪ್‌ಗಳ ಬಳಕೆಯ ಮೇಲೆ ನಿರ್ಬಂಧ ಹೇರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವೆ ಕಳೆದ ಹಲವು ವರ್ಷಗಳಿಂದ ಉದ್ವಿಗ್ನತೆಯ ವಾತಾವರಣ ಇದೆ. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಸಹ ಹಲವಾರು ಭಾರಿ ಡೊನಾಲ್ಡ್ ಟ್ರಂಪ್ ಚೀನಾ ಸರ್ಕಾರ ಅಮೆರಿಕನ್ನರ ವ್ಯಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಎಂದು ಆರೋಪಿಸಿದ್ದರು.

Remove China Apps ] 15 Popular Chinese Apps and Their Indian and US  Alternatives – Gadgets To Use

ಅಸಲಿಗೆ ಅಮೆರಿಕ ಕಳೆದ ಎರಡು ತಿಂಗಳಿನಿಂದ ಚೀನಾ ಅಪ್ಲಿಕೇಶನ್​ಗಳನ್ನು ಬ್ಯಾನ್ ಮಾಡುವ ಕುರಿತು ಆಯಾ ಕಂಪೆನಿಗಳಿಗೆ ಎಚ್ಚರಿಕೆ ನೀಡುತ್ತಲೇ ಇತ್ತು. ಹೀಗಾಗಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಟಿಕ್​ಟಾಕ್ ಕಂಪೆನಿಯ ಹೂಡಿಕೆದಾರರು ನಿರ್ಬಂಧದಿಂದ ತಮಗಾಗುವ ನಷ್ಟವನ್ನು ಭರ್ತಿ ಮಾಡುವ ಸಲುವಾಗಿ ಇಡೀ ಕಂಪೆನಿಯನ್ನು ಅಮೆರಿಕ ಮೂಲದ ಮೈಕ್ರೋಸಾಫ್ಟ್ ಕಂಪೆನಿಗೆ ಮಾರಾಟ ಮಾಡಲು ಮುಂದಾಗಿದ್ದರು.

ಈ ಸಂಬಂಧ ಹಲವು ಸುತ್ತಿನ ಮಾತುಕತೆ ಸಹ ನಡೆದಿತ್ತು. ಆದರೆ, ಟಿಕ್​ಟಾಕ್ ಕಂಪೆನಿ ಮಾರಾಟ ಪ್ರಯತ್ನದ ನಡುವೆಯೇ ಈ ಅಪ್ಲಿಕೇಶನ್ ಅನ್ನು ಡೊನಾಲ್ಡ್ ಟ್ರಂಪ್ ಸರ್ಕಾರ ಬ್ಯಾನ್ ಮಾಡಲು ಹೊರಟಿದೆ. ಇದರಿಂದ ಈ ಕಂಪೆನಿಗಳು ಭಾರೀ ಪ್ರಮಾಣದ ನಷ್ಟವನ್ನು ಎದುರಿಸಲಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ನೊಬೆಲ್‌ ಶಾಂತಿ ಪ್ರಶಸ್ತಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರು ನಾಮನಿರ್ದೇಶನ

ಇದಲ್ಲದೆ, ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಮತ್ತು ವೀಚಾಟ್‌ನ ಮೂಲ ಕಂಪನಿಯಾದ ಬೈಟ್‌ಡ್ಯಾನ್ಸ್ ಲಿಮಿಟೆಡ್‌ನೊಂದಿಗೆ ಅಮೆರಿಕದ ಬೇರೆ ಯಾವುದೇ ಕಂಪೆನಿಗಳ ವಹಿವಾಟುಗಳನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 6 ರಂದು ಸಹಿ ಹಾಕಿದ್ದರು. ಈ ಆದೇಶವು 45 ದಿನಗಳ ನಂತರ ಜಾರಿಗೆ ಬರಲಿದೆ ಎಂದು ಅಮೇರಿಕಾ ಹೇಳಿತ್ತು. ಹೀಗಾಗಿ ಟಿಕ್​ಟಾಕ್ ಸೇರಿದಂತೆ ಬಹುತೇಕ ಚೀನಾ ಅಪ್ಲಿಕೇಶನ್​ಗಳು ಮತ್ತೆ ಅಮೆರಿಕದಲ್ಲಿ ನೆಲೆ ಕಂಡುಕೊಳ್ಳುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ.

ಈ ನಡುವೆ ಭಾರತ ಸರ್ಕಾರ ಗಡಿ ಸಂಘರ್ಷವನ್ನು ಮುಂದಿಟ್ಟು ಚೀನಾದ ನೂರಾರು ಅಪ್ಲಿಕೇಶನ್​ಗಳನ್ನು ಭಾರತದಲ್ಲಿ ಬಳಕೆಗೆ ಸಿಗದಂತೆ ಕಳೆದ ಜೂನ್ ತಿಂಗಳಲ್ಲಿ ಬ್ಯಾನ್ ಮಾಡಿತ್ತು. ಭಾರತ ಇಂತಹ ಕ್ರಮಕ್ಕೆ ಮುಂದಾಗುತ್ತಿದ್ದಂತೆ ಇದೀಗ ಅಮೆರಿಕ ಸಹ ಚೀನಾ ಮೂಲದ ಟಿಕ್​ಟಾಕ್, ವೀ-ಚಾಟ್ ಸೇರಿದಂತೆ ಹಲವಾರು ಅಪ್ಲಿಕೇಶನ್​ಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದೆ.

ಗಾಲ್ವಾನ್ ವ್ಯಾಲಿ ಘರ್ಷಣೆಯ ನಂತರ ಭಾರತದಲ್ಲಿ ಚೀನಾದ ನೂರಾರು ಆ್ಯಪ್‌ಗಳನ್ನು ನಿಷೇಧಿಸಲಾಯಿತು. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕಿದ್ದನ್ನು ಉಲ್ಲೇಖಿಸಿ ಜೂನ್‌ನಲ್ಲಿ ಕೇಂದ್ರವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಕಳೆದ ವಾರ, ನಿಷೇಧಿತ ಅಪ್ಲಿಕೇಶನ್‌ಗಳ ತದ್ರೂಪುಗಳಾಗಿದ್ದ 47 ಅಪ್ಲಿಕೇಶನ್‌ಗಳನ್ನು ಸಹ ನಿರ್ಬಂಧಿಸಲಾಗಿದೆ. ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಭಾರತದ ಕ್ರಮವನ್ನು, ಚೀನಾ, ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳ ಉಲ್ಲಂಘನೆ ಎಂದು ಕರೆದಿದೆ.


ಇದನ್ನೂ ಓದಿ: Fact Check: ಭಾರತೀಯ ಮಾಧ್ಯಮಗಳು ಮೋದಿಯವರ ಚೇಲಾಗಳೆಂದು ಅಮೆರಿಕಾ ವ್ಯಂಗ್ಯಚಿತ್ರಕಾರ ಚಿತ್ರಿಸಿದ್ದರೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.