ಬಾಲಕನ ಶಸ್ತ್ರಚಿಕಿತ್ಸೆಗೆ 20 ಲಕ್ಷ ನೆರವು ನೀಡಿ ಮೆಚ್ಚುಗೆ ಪಡೆದ ನಟ ಸೋನು ಸೂದ್‌!

ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ ಸಮಯದಲ್ಲಿ ಮಾನವೀಯತೆಯಿಂದ ರಸ್ತೆಗಿಳಿದು ಜನರಿಗೆ ನೆರವಾದ ಬಾಲಿವುಡ್‌ ನಟ ಸೋನು ಸೂದ್‌. ವಲಸೆ ಕಾರ್ಮಿಕರಿಗಾಗಿ ಹಲವು ರೀತಿಯ ನೆರವು ನೀಡಿ ಸುದ್ದಿಯಾಗಿದ್ದ ನಟ ಸೋನು ಸೂದ್‌, ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಹೈದರಾಬಾದ್‌ನ 06 ವರ್ಷದ ಬಾಲನೊಬ್ಬ ಹಲವು ದಿನಗಳಿಂದ ಪಿತ್ತಜನಕಾಂಗ ಸಮಸ್ಯೆಯಿಂದ ಬಳಲುತ್ತಿದ್ದು, ಆತನ ಶಸ್ತ್ರಚಿಕಿತ್ಸೆಗೆ ಸೋನು ಸೂದ್‌ ನೆರವಾಗಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಬಾಲಕನಿಗೆ ಪಿತ್ತಜನಕಾಂಗ ಸಂಪೂರ್ಣವಾಗಿ ಹಾಳಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು. ಆಪರೇಷನ್‌ ಮಾಡಲು 20 ಲಕ್ಷ ರೂ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.

ಶಸ್ತ್ರಚಿಕಿತ್ಸೆ ಮಾಡಿಸಲು ನಮ್ಮ ಬಳಿ ಹಣವಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳ ನಿಧಿ ಹಾಗೂ ಆರೋಗ್ಯ ಯೋಜನೆಗಳಿಂದ ಸಹಾಯ ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದೆವು. ಆದರೆ, ಎಲ್ಲಿಯೂ ಸಹಾಯ ಸಿಗಲಿಲ್ಲ. ಚಿತ್ರೀಕರಣಗಳಲ್ಲಿ ಬಿಸಿಯಾಗಿದ್ದರೂ ಕೂಡ ವಿಚಾರ ತಿಳಿದ ಕೂಡಲೇ ಸೋನು ಸೂದ್ ಅವರು ನಮ್ಮನ್ನು ಭೇಟಿ ಮಾಡಿ, ಸಹಾಯ ಮಾಡುವುದಾಗಿ ತಿಳಿಸಿದ್ದರು. ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಿದ್ದಾರೆ ಎಂದು ಬಾಲಕನ ತಾಯಿ ತಿಳಿಸಿದ್ದಾರೆ.


ಇದನ್ನೂ ಓದಿ: ಅಮೆರಿಕಾದಲ್ಲಿ ಶುರವಾಗಿದೆ ಡೆಮಾಕ್ರಾಟ್ ಪಕ್ಷದವರ ಟ್ರಂಪೀಕರಣ!?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights