ಪತಿಯ ಬರ್ಬರ ಕೊಲೆ : ಪತ್ನಿಯ ಸ್ಥಿತಿ ಕಂಡು ಗಾಬರಿಯಾದ ಪೊಲೀಸರು..!

ದಕ್ಷಿಣ ದೆಹಲಿಯ ಚಟ್ಟರ್‌ಪುರಲ್ಲಿರುವ ದಂಪತಿಗಳ ಅಪಾರ್ಟ್‌ಮೆಂಟ್‌ನಲ್ಲಿ 37 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟು, ಮೃತನ ಪತ್ನಿಯ ಸ್ಥಿತಿ ಕಂಡು ಪೊಲೀಸರು ಗಾಬರಿಗೊಂಡಿದ್ದಾರೆ.

ಮೃತನನ್ನು ಚಿರಾಗ್ ಎಂದು ಹೆಸರಿಸಲಾಗಿದ್ದು ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ. ಅವರ ಪತ್ನಿ ರೇಣುಕಾ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡ ಪೊಲೀಸ್ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

“ಅಪಾರ್ಟ್ ಮಾಲೀಕರು ಕರೆಗೆ ಓಗೊಡದೆ ಬಾಗಿಲು ತೆರೆಯದಿದ್ದಾಗ ನಮಗೆ ಕರೆ ಬಂತು. ಇದೇ ವೇಳೆ ಮಹಿಳೆಯೊಬ್ಬಳ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಕಂಡುಕೊಂಡಿದ್ದೇವೆ. ಅದರಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಹತ್ಯೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾಳೆ. ನಾವು ಬಾಗಿಲು ತೆರೆದಿದ್ದೇವೆ. ಈ ವೇಳೆ ಪತಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು” ಎಂದು ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ.

ದಂಪತಿಗೆ ಮಗು ಇರಲಿಲ್ಲ ಮತ್ತು ಪ್ರಾಥಮಿಕ ವಿಚಾರಣೆಯಿಂದ ಅವರ ನಡುವೆ ಮನಸ್ಥಾಪಗಳಿವೆ ಎಂದು ತಿಳಿದುಬಂದಿದೆ. ಅವರು ಏಳು ವರ್ಷಗಳಿಂದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು ಮತ್ತು ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights