ಯುಎಸ್‌ಎಗೆ ಪಾಕಿಸ್ತಾನದ ವಿಮಾನಗಳ ಹಾರಾಟವನ್ನು ನಿಷೇಧಿಸಿದ ಅಮೆರಿಕಾ!

ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ನಿಂದ ಅಮೆರಿಕಾಗೆ ಬರುವ ವಿಮಾನಗಳ ಹಾರಾಟವನ್ನು ಅಮೆರಿಕಾದ ಸಾರಿಗೆ ಇಲಾಖೆ ನಿಷೇಧಿಸಿದೆ.

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯು ಪಾಕಿಸ್ತಾನದ ಪೈಲಟ್‌ಗಳ ಅರ್ಹತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕಳೆದ ತಿಂಗಳು, ಪಾಕಿಸ್ತಾನದ ಮೂರನೇ ಒಂದು ಭಾಗದಷ್ಟು ಪೈಲಟ್‌ಗಳು ನಕಲಿ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ ಎಂಬ ಸುದ್ದಿಗಳು ಹೊರಬಂದಿದ್ದವು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಅಮೆರಿಕಾಗೆ ಬರುವ ವಿಮಾನಗಳಿಗೆ ನಿಷೇಧ ಹೇರಲು ನಿರ್ಧರಿಸಿರುವುದಾಗಿ ಯುನೈಟೆಡ್‌ ಸ್ಟೇಟ್ಸ್‌ ಸಾರಿಗೆ ಇಲಾಖೆ  ಘೋಷಿಸಿದೆ.

ಪೈಲಟ್‌ಗಳಿಗೆ ವೃತ್ತಿಪರ ಸಾಮರ್ಥ್ಯದ ಕೊರತೆಯಿಂದಾಗಿ ಪಿಐಎ ಜೆಟ್ ಕುಸಿದು 97 ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಖಚಿತಪಡಿಸಿದೆ. ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ ಪಿಐಎ ವಿಮಾನಯಾನವನ್ನು ಆರು ತಿಂಗಳವರೆಗೆ ನಿಷೇಧಿಸಿದ್ದು, ಯುಎಸ್‌ಎ ಕೂಡ ಪಾಕಿಸ್ತಾನದ ವಿಮಾನಗಳಿಗೆ ನಿರ್ಬಂಧ ಹೇರಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights