FACT CHECK | ಕುನಾಲ್ ಕಾಮ್ರನನ್ನು ಬೆಂಬಲಿಸಿ ಓಲಾ ಶೋರೂಂಗೆ ಬೆಂಕಿ ಹಚ್ಚಲಾಗಿದೆ ಎಂಬುದು ಸುಳ್ಳು
ಓಲಾ ಸಂಸ್ಥಾಪಕ ಭವೀಶ್ ಅಗರ್ವಾಲ್ ಮತ್ತು ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಾಮ್ರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಾಗ್ಯುದ್ಧ ನಡೆದ ಹಿನ್ನಲೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಾಮ್ರರನ್ನು ಬೆಂಬಲಿಸಿ ಓಲಾ ಶೋರೂಂಗೆ ಬೆಂಕಿ ಹಚ್ಚಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
Ola EV Customers in Karnataka setting Ola Showroom on fire for not servicing their vehicle since month meanwhile their CEO Bhavish Aggarwal is busy trolling Kunal Kamra for bringing facts in public, Peak Arrogance! pic.twitter.com/e0ThT8C0Ez
— Vishal Verma (@VishalVerma_9) October 6, 2024
ಓಲಾ ತನ್ನ ಗ್ರಾಹಕರಿಗೆ ಸರಿಯಾದ ಸೇವೆ ಒದಗಿಸದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಸಿದ್ದ ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಾಮ್ರ ವಿರುದ್ದ ಓಲಾ CEO ಭವಿಶ್ ಅಗರ್ವಾಲ್ ದರ್ಪದಿಂದ ದುರಹಂಕಾರ ಮಾತುಗಳನ್ನಾಡಿದ್ದಕ್ಕೆ ಕೆರಳಿ ಗ್ರಾಹಕರೊಬ್ಬರು ಓಲಾ ಶೋರೂಂಗೆ ಬೆಂಕಿ ಹಚ್ಚಿದ್ದಾರೆ ಎಂದು ಪ್ರತಿಪಾದಿಸಿ @VishalVerma_9 ಎಂಬುವವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
#Ola EV customers in Karnataka r setting fire to an Ola showroom due to company’s failure to service their vehicles for months. Meanwhile, CEO Bhavish Aggarwal is preoccupied with mocking Kunal Kamra for exposing the facts publicly. This reflects a troubling level of arrogance. pic.twitter.com/SEbSnU7YVB
— Yeh_H_Mentos_Zindagi (@yeHMentosZindgi) October 7, 2024
ಕರ್ನಾಟಕದಲ್ಲಿ Ola ಸ್ಕೂಟರ್ನ ಗ್ರಾಹಕರೊಬ್ಬರು ಒಂದು ತಿಂಗಳಿನಿಂದ ತಮ್ಮ ವಾಹನವನ್ನು ಸರ್ವಿಸ್ ಮಾಡದ ಕಾರಣ Ola ಶೋರೂಮ್ಗೆ ಬೆಂಕಿ ಹಚ್ಚಿದ್ದಾರೆ. ಓಲಾ ದುರಹಂಕಾರಿ CEO ಭವಿಶ್ ಅಗರ್ವಾಲ್ ಅವರು ಸಾರ್ವಜನಿಕವಾಗಿ ಸತ್ಯಗಳನ್ನು ತಂದಿದ್ದಕ್ಕಾಗಿ ಕುನಾಲ್ ಕಮ್ರಾ ಅವರನ್ನು ಟ್ರೋಲ್ ಮಾಡುವಲ್ಲಿ ನಿರತರಾಗಿದ್ದಾರೆ. ಎಂದು ಆರೋಪಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕುನಾಲ್ ಕಮ್ರಾ ಮತ್ತು ಓಲಾ ಸಂಸ್ಥಾಪಕ ಭವೀಶ್ ಅಗರ್ವಾಲ್ ನಡುವಿನ ವಿವಾದ ಏನು?
ಓಲಾ ಸಂಸ್ಥಾಪಕ ಭವೀಶ್ ಅಗರ್ವಾಲ್, ಓಲಾ ಗೀಗಾ ಫ್ಯಾಕ್ಟರಿ ಎದುರು ರಿಪೇರಿಗಾಗಿ ಸಾಲಾಗಿ ನಿಂತಿರುವ ವಿದ್ಯುತ್ ಚಾಲಿತ ಸ್ಕೂಟರ್ ಗಳ ಚಿತ್ರವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದ ಸ್ಟ್ಯಾಂಡಪ್ ಕಾಮಿಡಿಯನ್, “ಭಾರತೀಯರಿಗೆ ಧ್ವನಿ ಇದೆಯೆ? ಅವರು ಇದಕ್ಕೇ ಯೋಗ್ಯರೆ? ದ್ವಿಚಕ್ರ ವಾಹನಗಳು ಹಲವಾರು ದಿನಗೂಲಿ ನೌಕರರ ಜೀವನಾಡಿಯಾಗಿದೆ” ಎಂದು ಹೇಳಿದ್ದರು.
Do indian consumers have a voice?
Do they deserve this?
Two wheelers are many daily wage workers lifeline…@nitin_gadkari is this how Indians will get to using EV’s? @jagograhakjago any word?
Anyone who has an issue with OLA electric leave your story below tagging all… https://t.co/G2zdIs15wh pic.twitter.com/EhJmAzhCmt— Kunal Kamra (@kunalkamra88) October 6, 2024
ಇಷ್ಟು ಮಾತ್ರವಲ್ಲದೆ, ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಟ್ಯಾಗ್ ಮಾಡಿದ್ದ ಕುನಾಲ್ ಕಾಮ್ರ, “ಭಾರತೀಯರು ಈ ರೀತಿ ವಿದ್ಯುತ್ ಚಾಲಿತ ವಾಹನಗಳನ್ನು ಬಳಸುವುದೆ?” ಎಂದು ಪ್ರಶ್ನಿಸಿದ್ದರು. ಅಲ್ಲದೆ ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ಖಾತೆಯಾದ @jagograhakjago ಅನ್ನೂ ಟ್ಯಾಗ್ ಮಾಡಿದ್ದ ಅವರು, “ಈ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು?” ಎಂದು ಪ್ರಶ್ನಿಸಿದ್ದರು. “ಓಲಾ ವಿದ್ಯುತ್ ಚಾಲಿತ ಸ್ಕೂಟರ್ ಬಗ್ಗೆ ಸಮಸ್ಯೆ ಇರುವವರು ಮೇಲಿನ ಎಲ್ಲರನ್ನೂ ಟ್ಯಾಗ್ ಮಾಡಿ ನಿಮ್ಮ ಪ್ರತಿಕ್ರಿಯೆಯನ್ನು ಇಲ್ಲಿ ಹಾಕಿ..” ಎಂದೂ ಬರೆದಿದ್ದರು.
Since you care so much @kunalkamra88, come and help us out! I’ll even pay more than you earned for this paid tweet or from your failed comedy career.
Or else sit quiet and let us focus on fixing the issues for the real customers. We’re expanding service network fast and backlogs… https://t.co/ZQ4nmqjx5q
— Bhavish Aggarwal (@bhash) October 6, 2024
ಈ ಪ್ರತಿಕ್ರಿಯೆಗೆ ಉತ್ತರಿಸಿರುವ ಭವೀಶ್ ಅಗರ್ವಾಲ್, “ಇಷ್ಟೊಂದು ಕಾಳಜಿ ವಹಿಸುವ ಕುನಾಲ್ ಕಾಮ್ರಾ ಅವರೆ, ಬನ್ನಿ ಮತ್ತು ನಮಗೆ ನೆರವು ನೀಡಿ! ನೀವು ಈ ಪೇಯ್ಡ್ ಟ್ವೀಟ್ ಗೆ ಪಡೆದಿರುವ ಹಣ ಅಥವಾ ನಿಮ್ಮ ಕಾಮಿಡಿ ವೃತ್ತಿ ಜೀವನದ ಫ್ಲಾಪ್ ಶೋನಲ್ಲಿ ಗಳಿಸಿರುವ ಹಣಕ್ಕಿಂತ ಹೆಚ್ಚು ಹಣವನ್ನು ನಾನು ನೀಡುತ್ತೇನೆ. ಅಥವಾ ಸುಮ್ಮನೆ ಕುಳಿತಿರಿ. ನಾವು ನೈಜ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸೋಣ” ಎಂದು ದುರಹಂಕಾರದ ಮಾತುಗಳನ್ನಾಡಿದ್ದರು.
ಗ್ರಾಹಕರ ಪರವಾಗಿ ಮಾತನಾಡಿದ (ಟ್ವೀಟ್ ಮಾಡಿದಕ್ಕೆ) ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಾಮ್ರ ಹಣ ತೆಗೆದುಕೊಂಡಿದ್ದಾನೆ ಎಂದು ಆರೋಪ ಮಾಡಿದ ಓಲಾ CEO ಭವಿಶ್ ಅಗರ್ವಾಲ್ ಮಾತಿನಿಂದ ಸಿಟ್ಟಿಗೆದ್ದ ಕರ್ನಾಟಕದ ಗ್ರಾಹಕರೊಬ್ಬರು ಓಲಾ ಶೋರೂಂಗೆ ಬೆಂಕಿ ಹಚ್ಚಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಲಾ ಶೋರೂಂಗೆ ಬೆಂಕಿ ಹಚ್ಚಲಾದ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಭವಿಶ್ ಅಗರ್ವಾಲ್ ಮತ್ತು ಕುನಾಲ್ ಕಾಮ್ರ ನಡುವೆ ನಡೆದ ವಾಗ್ಯುದ್ಧದಿಂದ ಓಲಾ ಶೋರೂಂ ಗೆ ಬೆಂಕಿ ಹಚ್ಚಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಸೋರೂಂಗೆ ಬೆಂಕಿ ಹಚ್ಚಿರುವ ವಿಡಿಯೋದಲ್ಲಿ ಕಂಡುಬರುತ್ತಿರುವ ದೃಶ್ಯಗಳು ಕರ್ನಾಟಕದಲ್ಲಿ ನಡೆದಿರುವುದು ನಿಜ ಆದರೆ, ಇದು ಒಂದು ತಿಂಗಳ ಹಿಂದೆ ನಡೆದಿದ್ದು ಭವಿಶ್ ಅಗರ್ವಾಲ್ ಮತ್ತು ಕುನಾಲ್ ಕಾಮ್ರ ನಡುವೆ ನಡೆದ ವಾಗ್ಯುದ್ಧಕ್ಕೂ ಇದಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಓಲಾ ಶೋರೂಂ ಗೆ ಬೆಂಕಿ ಹಚ್ಚಿದ್ದು ಯಾರು ಮತ್ತು ಯಾವಾಗ?
ಗ್ರಾಹಕರೊಬ್ಬರು ಖರೀದಿಸಿದ ಹೊಸ ಸ್ಕೂಟರ್ ನ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಷೋರೂಂನವರು ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕಾರಣಕ್ಕಾಗಿ ಕಲಬುರಗಿಯಲ್ಲಿ ವ್ಯಕ್ತಿಯೊಬ್ಬ ಆ ಶೋ ರೂಮ್ ಗೆ ಬೆಂಕಿಯಿಟ್ಟ ಘಟನೆ ನಡೆದಿದೆ ಎಂದು 11 ಸೆಪ್ಟಂಬರ್ 2024 ರಂದು ಹಲವು ಮಾಧ್ಯಮಗಳು ವರದಿ ಮಾಡಿರುವುದು ಲಭ್ಯವಾಗಿದೆ.

ತನ್ನ ಬೈಕ್ ಸರಿಯಾಗಿ ದುರಸ್ತಿ ಮಾಡಿಲ್ಲ ಎಂಬ ಕೋಪದಲ್ಲಿ ವ್ಯಕ್ತಿಯೊಬ್ಬರು ಹುಮನಾಬಾದ್ ಮುಖ್ಯರಸ್ತೆಯಲ್ಲಿನ ಓಲಾ ಎಲೆಕ್ಟ್ರಿಕ್ ವಾಹನದ ಶೋರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಸೆಪ್ಟಂಬರ್ 2024ರ ಮಂಗಳವಾರ ನಡೆದಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಓಲಾ ಸ್ಕೂಟರ್ ರಿಪೇರಿಗೆ ಅಸಡ್ಡೆ ಸೋರೂಂಗೆ ಬೆಂಕಿಯಿಟ್ಟ ಗ್ರಾಹಕ ಎಂದು ವಿಜಯ ಕರ್ನಾಟಕ ಸುದ್ದಿ ತಾಣದಲ್ಲಿ ಮಾಡಿದ ವರದಿ ಲಭ್ಯವಾಗಿದೆ.
ಸೆಪ್ಟಂಬರ್ 10ರಂದು ಬೆಳಿಗ್ಗೆ 10ರ ಸುಮಾರಿಗೆ ಶೋರೂಂಗೆ ಬಂದ ನದೀಮ್, ತನ್ನ ಎಲೆಕ್ಟ್ರಿಕ್ ಬೈಕ್ ದುರಸ್ತಿಯ ಬಗ್ಗೆ ಶೋರೂಂ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದರು. ಸರಿಯಾದ ಸ್ಪಂದನೆ ಸಿಗದಿರುವುದಕ್ಕೆ ಕೋಪದಲ್ಲಿ ಶೋರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಬೈಕ್ಗಳು, ಸಾಮಗ್ರಿಗಳು ಸುಟ್ಟಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈರಲ್ ವಿಡಿಯೋದ ಕೀಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 2024ರ ಸೆಪ್ಟೆಂಬರ್ 11ರಂದು ಇಂಡಿಯನ್ ಸ್ಟಾರ್ಟ್ಅಪ್ ನ್ಯೂಸ್ ಹಂಚಿಕೊಂಡ ಎಕ್ಸ್ನ ವಿಡಿಯೋ ಲಭ್ಯವಾಗಿದೆ 26 ವರ್ಷದ ಮೊಹಮ್ಮದ್ ನದೀಮ್ ಎಂಬ ವ್ಯಕ್ತಿ ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಓಲಾ ಎಲೆಕ್ಟ್ರಿಕ್ ಶೋರೂಮ್ಗೆ ಸೆಪ್ಟೆಂಬರ್ 10 ರಂದು ತನ್ನ ಎಲೆಕ್ಟ್ರಿಕ್ ಸ್ಕೂಟರ್ನ ಬಗೆಹರಿಯದ ಸಮಸ್ಯೆಗಳಿಂದಾಗಿ ಹತಾಶೆಯಿಂದ ಬೆಂಕಿ ಹಚ್ಚಿದ್ದಾನೆ ಎಂದು ಈ ಎಕ್ಸ್ನ ವೀಡಿಯೊದಿಂದ ಸ್ಪಷ್ಟವಾಗಿ ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕಲಬುರ್ಗಿಯ ಹುಮನಾಬಾದ್ ಮುಖ್ಯರಸ್ತೆಯಲ್ಲಿನ ಓಲಾ ಶೋರೂಂಗೆ ಬಂದ ಮಹಮದ್ ನದೀಮ್ ಎಂಬ ವ್ಯಕ್ತಿಯು ತನ್ನ ಬೈಕ್ ಸರಿಯಾಗಿ ದುರಸ್ತಿ ಮಾಡಿಲ್ಲ ಎಂಬ ಕೋಪದಲ್ಲಿ ಶೋರೂಮ್ಗೆ ಬೆಂಕಿ ಹಚ್ಚಿರುವ ಹಳೆಯ ವೀಡಿಯೊವನ್ನು, ಓಲಾ CEO ಭವಿಶ್ ಅಗರ್ವಾಲ್ ಮತ್ತು ಕುನಾಲ್ ಕಮ್ರಾ ನಡುವೆ ಟ್ವಿಟರ್ನಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಅತೃಪ್ತ ಗ್ರಾಹಕರು ಕರ್ನಾಟಕದಲ್ಲಿ ಓಲಾ ಶೋರೂಮ್ಗೆ ಬೆಂಕಿ ಹಚ್ಚಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮೀರತ್ನಲ್ಲಿ ಮುಸ್ಲಿಂ ವ್ಯಕ್ತಿಗೆ ಹಿಂದೂಗಳ ಗುಂಪು ಗುಂಡುಕ್ಕಿ ಹತ್ಯೆ ಮಾಡಿದೆ ಎಂಬುದು ಸುಳ್ಳು

