FACT CHECK | ಮೀರತ್ನಲ್ಲಿ ಮುಸ್ಲಿಂ ವ್ಯಕ್ತಿಗೆ ಹಿಂದೂಗಳ ಗುಂಪು ಗುಂಡುಕ್ಕಿ ಹತ್ಯೆ ಮಾಡಿದೆ ಎಂಬುದು ಸುಳ್ಳು
ಗಡ್ಡಧಾರಿ ವ್ಯಕ್ತಿಯೊಬ್ಬ ತಲೆಗೆ ಬ್ಯಾಂಡೇಜ್ ಸುತ್ತಿ ಆಮ್ಲಜನಕದ ಮಾಸ್ಕ್ ಹಾಕಿಕೊಂಡು, ಆಸ್ಪತ್ರೆಯಲ್ಲಿ ಮಲಗಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಮೀರತ್ನಲ್ಲಿ ಇಮಾಮ್ (ಮುಸ್ಲಿಂ ಧಾರ್ಮಿಕ ಮುಖಂಡ) ಎಂಬ ವ್ಯಕ್ತಿ ವಿದ್ಯಾರ್ಥಿಗಳಿಗೆ ಕುರಾನ್ ಪಠಣವನ್ನು ಕಲಿಸುತ್ತಿದ್ದಾಗ ಹಿಂದೂ ಗುಂಪಿನಿಂದ ಗುಂಡು ಹಾರಿಸಲಾಯಿತು ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

X ಬಳಕೆದಾರರು ವಿಡಿಯೊವನ್ನು ಹಂಚಿಕೊಂಡಿದ್ದು “ಯುಪಿಯ ಮೀರತ್ನಲ್ಲಿ, ಲಿಸಾರಿ ಗೇಟ್ನಲ್ಲಿರುವ ಖಾಸ್ಮಿ ಮಸೀದಿಯ ಇಮಾಮ್ ಮಕ್ಕಳಿಗೆ ಕುರಾನ್ ಅಭ್ಯಾಸ ಮಾಡಿಸುತ್ತಿದ್ದಾಗ ಹಿಂದೂ ಗುಂಪು ಮಸೀದಿಗೆ ನುಗ್ಗಿ ಆತನ ಮೇಲೆ ಗುಂಡು ಹಾರಿಸಿ ಆಯುಧವನ್ನು ಬಿಟ್ಟು ಪರಾರಿಯಾಗಿದೆ. ಇಮಾಮ್ ನಯೀಮ್ ಸ್ಥಿತಿ ಗಂಭೀರವಾಗಿದೆ ಎಂದು ಬರೆಯಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಮೀರತ್ ಪೋಲೀಸರ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಂಡ ಹೇಳಿಕೆಯೊಂದು ಲಭ್ಯವಾಗಿದೆ. ಲಿಸಾರಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಮರ್ ಗಾರ್ಡನ್ ಪ್ರದೇಶದಲ್ಲಿ ಅಕ್ಟೋಬರ್ 6 ರಂದು ಈ ಘಟನೆ ನಡೆದಿದೆ ಎಂದು ಅದು ಸ್ಪಷ್ಟಪಡಿಸಿದೆ. ಹೇಳಿಕೆಯು ಯಾವುದೇ ಕೋಮು ಕೋನವನ್ನು ತಳ್ಳಿಹಾಕಿದೆ, ಬಲಿಪಶು, ನಯೀಮ್ ಮತ್ತು ಆರೋಪಿ ಸರ್ತಾಜ್ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಆರೋಪಿ ವಿರುದ್ಧ ಲಿಸಾಡಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
थाना लिसाडी गेट क्षेत्र में हुई फायरिंग की घटना के सम्बन्ध में ब्रीफ नोट । pic.twitter.com/3qxclcSOqT
— MEERUT POLICE (@meerutpolice) October 6, 2024
ಮಾನಸಿಕ ಅಸ್ವಸ್ಥನಾಗಿರುವ ಸರ್ತಾಜ್ ವೈಯಕ್ತಿಕ ದ್ವೇಷದ ಕಾರಣ ಮಸೀದಿಯಲ್ಲಿ ಮೌಲಾನಾ ಎಂಬಾತನಿಗೆ ಗುಂಡು ಹಾರಿಸಿದ್ದಾನೆ ಎಂದು ಮೀರತ್ ಪೊಲೀಸರು ವಿಡಿಯೋ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ. ನಯೀಮ್ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಸರ್ತಾಜ್ ಬಂಧನಕ್ಕೆ ಎರಡು ಪೊಲೀಸ್ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.
थाना लिसाडी गेट क्षेत्र में हुई फायरिंग की घटना के सम्बन्ध में ब्रीफ नोट । pic.twitter.com/3qxclcSOqT
— MEERUT POLICE (@meerutpolice) October 6, 2024
Times of India ಅಕ್ಟೋಬರ್ 6 ರಂದು SSP ಮೀರತ್ ವಿಪಿನ್ ತಾಡಾವನ್ನು ಉಲ್ಲೇಖಿಸಿ ವರದಿ ಮಾಡಿದೆ, “ಕೆಲವು ದಿನಗಳ ಹಿಂದೆ ನಯೀಮ್ ಮತ್ತು ಸರ್ತಾಜ್ ಗೆ ನೆನಪಿನ ಸಮಸ್ಯೆಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಿದ್ದರು. ಆದರೆ ಅದರಿಂದ ಹೆಚ್ಚಿನ ಪ್ರಯೋಜನ ಆಗಿರಲಿಲ್ಲ. ಈ ನಡುವೆ ಇಬ್ಬರಿಗೂ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿತ್ತು. ನಯೀಮ್ ಅವರು (ಇಸ್ಲಾಮಿಕ್ ಮತ್ತು ಆಯುರ್ವೇದ ಔಷಧದ ವೈದ್ಯ) ಆಗಿದ್ದಾರೆ.ಸರ್ತಾಜ್ಗೆ ನೆನಪಿನ ಸಮಸ್ಯೆಗೆ ಸಂಬಂಧಿಸಿದಂತೆ ಚಿಕಿತ್ಸೆ ಬಗ್ಗೆ ಮಾತನಾಡಲು ಭಾನುವಾರ ಮಸೀದಿಗೆ ಬಂದ ಸರ್ತಾಜ್ ನಯೀಮ್ ಮೇಲೆ ಗುಂಡು ಹಾರಿಸಿ ಬಂದೂಕನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

TV9, Hindustan, ಮತ್ತು Dainik Bhaskar, ಸೇರಿದಂತೆ ಇತರೆ ಮಾಧ್ಯಮಗಳು ಅಕ್ಟೋಬರ್ 7 ರಂದು ಅದೇ ವಿವರಗಳೊಂದಿಗೆ ಘಟನೆಯನ್ನು ವರದಿ ಮಾಡಿವೆ. ಟಿವಿ9 ವರದಿಯ ಪ್ರಕಾರ ಸರ್ತಾಜ್ ದೆಹಲಿಯಲ್ಲಿ ಶರಣಾಗಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಯುಪಿಯ ಮೀರತ್ನಲ್ಲಿ ಹಿಂದೂಗಳ ಗುಂಪು ಇಮಾಮ್ ನಯೀಮ್ನನ್ನು ಎಂಬ ಮುಸ್ಲಿಂ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂಬುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಯುವಕ ಮುಸ್ಲಿಮನಲ್ಲ ! ಹಾಗಾದ್ರೆ ಮತ್ತ್ಯಾರು?

