ಹೆತ್ತ ತಾಯಿಯನ್ನೇ ಕೊಂದು ಶವದೊಂದಿಗೆ ಗೊಂಬೆ ಆಟ ಆಡಿದ ಮಕ್ಕಳು..!

ಹೆತ್ತ ತಾಯಿಯನ್ನೇ ಕೊಂದ ಇಬ್ಬರು ಹೆಣ್ಣುಮಕ್ಕಳು ಶವದೊಂದಿಗೆ ಗೊಂಬೆ ಆಟ ಆಡಿದ ಕರುಣಾಜನಕ ಕಥೆ ತಮಿಳುನಾಡಿನಲ್ಲಿ ನಡೆದಿದೆ.

ಸಾಮಾನ್ಯವಾಗಿ ಇಂಥದೊಂದು ಕೃತ್ಯಕ್ಕೆ ಯಾವ ಮಕ್ಕಳು ಕೂಡ ಕೈ ಹಾಕುವುದಿಲ್ಲ. ಆದರೆ ತಾಯಿಯನ್ನೇ ಕೊಂದಿರುವ ಅರಿವಿಲ್ಲದ ಮಕ್ಕಳು ತಾಯಿ ಶವದೊಂದಿಗೆ ಗೊಂಬೆ ಆಟ ಆಡಿದ್ದಾರೆ. ಈ ಘಟನೆ ನಿಜಕ್ಕೂ ಭಯಾನಕ ಮತ್ತು ಮರುಕಹುಟ್ಟಿಸುವಂತದ್ದು. ಮಾನಸಿಕ ಅಸ್ವಸ್ಥರಾದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಇಬ್ಬರು ಹೆಣ್ಣುಮಕ್ಕಳು ತಾಯಿ ಉಷಾರನ್ನು ಕೊಂದಿದ್ದಾರೆ.

ಉಷಾ ಪತಿ ಅಗಲಿಕೆ ಬಳಿಕ ಇಬ್ಬರು ಹೆಣ್ಣುಮಕ್ಕಳೊಂದಿಗೆ ಪಾಲಯಂಕೋಟೈನ ಕೆಟಿಸಿ ನಗರದಲ್ಲಿ ವಾಸಿಸುತ್ತಿದ್ದರು. ಶಾಲಾ ಮಕ್ಕಳಿಗೆ ಬೋಧನೆ ನೀಡುವ ಮೂಲಕ ಉಷಾ ತಮ್ಮ ಜೀವನ ನಡೆಸುತ್ತಿದ್ದರು.

ಮಂಗಳವಾರ ಉಷಾ ಬೆಳಿಗ್ಗೆಯಿಂದ ತನ್ನ ಮನೆಯಿಂದ ಹೊರಬಂದಿರಲಿಲ್ಲ. ಕಿಟಕಿಗಳೂ ಮುಚ್ಚಿದ ಹಾಗೇ ಇದ್ದವು. ಇದನ್ನು ಕಂಡು ನೆರೆಹೊರೆಯವರಿಗೆ ಏನಾದರೂ ತೊಂದರೆಯಾಗಿರುವ ಅನುಮಾನ ಹುಟ್ಟಿದೆ. ತಕ್ಷಣಕ್ಕೆ ಸಹೋದರಿಯೊಬ್ಬಳು ಹೊರಗೆ ಬಂದು ತಮ್ಮ ತಾಯಿ ಸತ್ತಿದ್ದಾರೆ ಎಂದು ಹೇಳಿದಾಗ ನೆರೆಯ ಜನ ಶಾಕ್ ಆಗಿದ್ದಾರೆ. ಕೂಡಲೆ ನೆರೆ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಕಂಡಿದ್ದು ಹೃದಯ ಮಿಡಿಯುವ ದೃಶ್ಯ. ಆ ಇಬ್ಬರೂ ಹೆಣ್ಣುಮಕ್ಕಳು ತಾಯಿ ಶವದೊಂದಿಗೆ ಗೊಂಬೆ ಆಟ ಆಡುತ್ತಾ ಕುಳಿತಿದ್ದರು. ಇದನ್ನು ನೋಡಿದ ಪೊಲೀಸರಿಗೆ ಕೊಲೆ ಯಾರಿಂದ ಆಗಿದೆ ಎನ್ನುವ ಬಗ್ಗೆ ಹೆಚ್ಚೇನು ಅನುಮಾನ ಹುಟ್ಟಲಿಲ್ಲ. ತಾಯಿ ಬಟ್ಟೆಯಂತೆ ಸಹೋದರಿಯರಿಬ್ಬರ ಬಟ್ಟೆ ಕೂಡ ರಕ್ತದಿಂದ ಕೂಡಿತ್ತು. ಈ ಬಗ್ಗೆ ಸಹೋದರಿಯರು ಮಾತನಾಡಲು ಸಿದ್ಧರಿರಲಿಲ್ಲ. ಪೊಲೀಸರು ಸಹೋದರಿಯರಿಗೆ ಚಿಕಿತ್ಸೆಗಾಗಿ ಕರೆದೊಯ್ದಿದರು. ಉಷಾ ಶವಪರೀಕ್ಷೆಗೆ ಕಳುಹಿಸಲಾಯಿತು.

ನಂತರ ಸಹೋದರಿಯರನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು, ಅವರಲ್ಲಿ ಒಬ್ಬರು ತಾಯಿಯನ್ನು ಕೋಲಿನಿಂದ ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆದರೆ, ಸಹೋದರಿಯರು ಮಾನಸಿಕ ಮೌಲ್ಯಮಾಪನ ಮತ್ತು ಅಗತ್ಯ ಚಿಕಿತ್ಸೆಗೆ ಒಳಗಾದ ನಂತರವೇ ಅವರ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *