FACT CHECK | ಪಾಕ್ ವಿರುದ್ದ ಪೋಸ್ಟ್ ಮಾಡಿದಕ್ಕೆ ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆದಿದೆಯೇ?
ಪುಣೆಯ ಭವಾನಿ ಪೇತ್ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದ ವಿಡಿಯೋಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಪೋಸ್ಟ್ ಮಾಡಿದ್ದಕ್ಕಾಗಿ ಮುಸ್ಲಿಂ ಕುಟುಂಬವೊಂದು ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸಿದೆ ಎಂದು ಪ್ರತಿಪದಿಸಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಳ್ಳುತ್ತಿದ್ದಾರೆ.
A Hindu family was attacked in Pune—simply for speaking out against Pakistan.
Imagine that. In your own country, you can’t voice your opinion about a hostile nation. Because if you do, you offend the delicate sensibilities of those whose loyalties lie elsewhere—those born here,… pic.twitter.com/GRambrRJq2
— Oxomiya Jiyori (@SouleFacts) May 2, 2025
“ಕೇವಲ ಪಾಕಿಸ್ತಾನದ ವಿರುದ್ಧ ಮಾತನಾಡಿದ ಕಾರಣಕ್ಕಾಗಿ, ಪುಣೆಯಲ್ಲಿನ ಹಿಂದೂ ಕುಟುಂಬದ ಮೇಲೆ ಜಿಹಾದಿಗಳು ಕ್ರೂರವಾಗಿ ದಾಳಿ ಮಾಡಿದ್ದಾರೆ. ಒಬ್ಬ ಹಿಂದೂ ಕೂಡ ಅವರನ್ನು ರಕ್ಷಿಸಲು ಮುಂದೆ ಬಂದಿಲ್ಲ. ಇದು ಕಠೋರ ವಾಸ್ತವ.” ಎಂಬ ಹೇಳಿಕೆಯೊಂದಿಗೆ ಪೋಸ್ಟ್ವೊಂದನ್ನು ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ.
“In Bhavani Peth’s Gurunanak Nagar, Pune — a Hindu family was attacked for speaking out against Pakistan. And yet, not a single Hindu stood by them. pic.twitter.com/ApMgsN8xX1
— ᴅᴇʙᴀᴊɪᴛ ꜱᴀʀᴋᴀʀ (@debajits3110) May 2, 2025
ಮತ್ತೊಬ್ಬ ಎಕ್ಸ್ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ” ಕೇವಲ ಪಾಕಿಸ್ತಾನದ ವಿರುದ್ಧ ಮಾತನಾಡಿದ ಕಾರಣಕ್ಕಾಗಿ, ಪುಣೆಯಲ್ಲಿ ಹಿಂದೂ ಕುಟುಂಬದ ಮೇಲೆ ದಾಳಿ ನಡೆಸಲಾಯಿತು – ನಿಮ್ಮ ಸ್ವಂತ ದೇಶದಲ್ಲಿ, ನಿಮಗೆ ತೊಂದರೆ ಕೊಡುವ ರಾಷ್ಟ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಏಕೆಂದರೆ ನೀವು ಹಾಗೆ ಮಾಡಿದರೆ, ಬೇರೆಡೆ ನಿಷ್ಠೆ ಹೊಂದಿರುವವರ ಸೂಕ್ಷ್ಮ ಸಂವೇದನೆಗಳಿಗೆ ನೀವು ನೋವು ಮಾಡುತ್ತೀರಿ.” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
A Hindu family was attacked for posting against Pakistan. Bhavani Peth Gurunanak Nagar, Pune.
Not a single Hindu came to help. pic.twitter.com/BAYtaVrSaS
— महावीर जैन, ಮಹಾವೀರ ಜೈನ, Mahaveer Jain (@Mahaveer_VJ) May 1, 2025
ಮಹಾವೀರ್ ಜೈನ್ (@Mahaveer_VJ) ಎಂಬ ಎಕ್ಸ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, “ಪಾಕಿಸ್ತಾನದ ವಿರುದ್ಧ ಪೋಸ್ಟ್ ಮಾಡಿದ್ದಕ್ಕಾಗಿ ಹಿಂದೂ ಕುಟುಂಬದ ಮೇಲೆ ದಾಳಿ ಮಾಡಲಾಯಿತು. ಭವಾನಿ ಪೇಠ್ ಗುರುನಾನಕ್ ನಗರ, ಪುಣೆ. ಒಬ್ಬ ಹಿಂದೂ ಗೆ ಸಹಾಯ ಮಾಡಲು ಯಾರೂ ಬಂದಿಲ್ಲ.”
ಪಾಕಿಸ್ತಾನದ ವಿರುದ್ಧ ಪೋಸ್ಟ್ ಮಾಡಿದ್ದಕ್ಕಾಗಿ ಪುಣೆಯಲ್ಲಿ ಹಿಂದೂ ಕುಟುಂಬದ ಮೇಲೆ ದಾಳಿ ಎಂಬ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೊಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಮೇ 02, 2025ರ ಫ್ರೀ ಪ್ರೆಸ್ ಜರ್ನಲ್ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದ್ದು, ರಸ್ತೆಯಲ್ಲಿ ಹಾರ್ನ್ ಮಾಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ ಎಂದು ವರದಿ ಮಾಡಿದೆ.

ವರದಿಯ ಪ್ರಕಾರ, ಹಾರ್ನ್ ಮಾಡುವ ವಿಷಯಕ್ಕೆ ಜಗಳ ನಡೆದಿದ್ದು, ಪ್ರಕರಣದಲ್ಲಿ 29 ವರ್ಷದ ಆಟೋರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಯನ್ನು ಕಾಶಿವಾಡಿಯ ನಿವಾಸಿ ಶೋಯೆಬ್ ಉಮರ್ ಸೈಯದ್ ಎಂದು ಗುರುತಿಸಲಾಗಿದೆ.
ಕರಣ್ ಮೆಹ್ತಾ ಎಂಬ ವ್ಯಕ್ತಿ ಬೈಕ್ ನಲ್ಲಿ ಬರುತ್ತಿದ್ದಾಗ, ರಸ್ತೆಗೆ ಅಡ್ಡಲಾಗಿ ಸಯ್ಯದ್ ಅವರ ಆಟೋರಿಕ್ಷಾ ನಿಲ್ಲಿಸಿ ತನ್ನ ಸರಕುಗಳನ್ನು ಇಳಿಸುವಾಗ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೆಹ್ತಾ ಹಾರ್ನ್ ಮಾಡಿದಾಗ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಸ್ವಲ್ಪ ಸಮಯದ ನಂತರ, ಸಯ್ಯದ್ ಮತ್ತು ಅವರ ಸಹಚರರು ಮೆಹ್ತಾ ಮತ್ತು ಅವರ ಸಹೋದರ ಸಹೋದರಿ ಮತ್ತು ಅವರ ಚಿಕ್ಕಪ್ಪ ಸೇರಿದಂತೆ ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದರು ಎಂದು ಉಲ್ಲೇಖಿಸಿದೆ.

ಪುಣೆ ಪೊಲೀಸರ ಪ್ರಕಾರ, ಸಂತ್ರಸ್ಥ ಹರ್ಷ್ ಕೇಶ್ವಾನಿ ಮತ್ತು ಆರೋಪಿ ಸಯ್ಯದ್ ಒಂದೇ ಕಾಲೋನಿಯ ನಿವಾಸಿಗಳು. ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ವಾಹನವನ್ನು ತೆರುವುಗೊಳಿಸಿ ದಾರಿ ಮಾಡಿಕೊಡುವಂತೆ ಹಾರ್ನ್ ಮಾಡಲಾಗಿದೆ, ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸಯ್ಯದ್ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಪುಣೆಯಲ್ಲಿ ರಸ್ತೆಗೆ ಅಡ್ಡಲಾಗಿ ಆಟೋ ನಿಲ್ಲಿಸಿದ್ದರಿಂದ, ಸಂಚಾರಕ್ಕೆ ತೊಂದರೆಯಾಗಿದ್ದು ಇದನ್ನು ಪ್ರಶ್ನಿಸಿದ ಮೆಹ್ತಾ ಮತ್ತು ಕುಟುಂಬಸ್ಥರ ವಿರುದ್ದ ಹಲ್ಲೆ ನಡೆಸಲಾಗಿದೆ. ಪಾಕಿಸ್ತಾನದ ವಿರುದ್ದ ಪೋಸ್ಟ್ ಹಾಕಿದಕ್ಕೆ ಹಿಂದೂಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಘಟನೆಗೆ ಯಾವುದೇ ಕೋಮು ದೃಷ್ಟಿಕೋನವಾಗಲಿ ಇಲ್ಲ
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಾಕಿಸ್ತಾನದ ಮೇಲೆ ಯುದ್ದ ಮಾಡಲು ತರಳುತ್ತಿರುವ ಯೋದರಿಗೆ ಸಿಹಿ ತಿನಿಸಿ ಶುಭ ಹಾರೈಸಿದ್ರಾ ಪ್ರಧಾನಿ ಮೋದಿ

