FACT CHECK | ಪಹಲ್ಗಾಮ್ ದಾಳಿಯ ನಂತರ ಸೈನಿಕರಿಗೆ ಕಾಶ್ಮೀರಿ ನಾಗರೀಕರು ಥಳಿಸಿತ್ತಿರುವುದು ನಿಜವೇ? ವೈರಲ್ ವಿಡಿಯೋದ ಅಸಲೀಯತ್ತೇನು?
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತೀಯ ಸೇನಾ ಸೈನಿಕನೊಬ್ಬನನ್ನು ವ್ಯಕ್ತಿಯೊಬ್ಬ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರದ ಸ್ಥಳೀಯರು ಭಾರತೀಯ ಸೈನಿಕರೊಂದಿಗೆ ಜಗಳವಾಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡ ಒಬ್ಬ ವ್ಯಕ್ತಿ, “ಕಾಶ್ಮೀರಿ ಸ್ಥಳೀಯರು ಭಾರತೀಯ ಸೇನೆಯೊಂದಿಗೆ ಹೋರಾಡುತ್ತಿದ್ದಾರೆ. ಹೌದು, ಇದು ಏಪ್ರಿಲ್ 2025 ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ” ಎಂದು ಬರೆದಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಆಗಸ್ಟ್ 22, 2022 ರ ಈ ಘಟನೆಯ ಕುರಿತು ಸುದ್ದಿ ವರದಿ ಲಭ್ಯವಾಗಿದೆ. ಅದರ ಪ್ರಕಾರ, ಶ್ರೀನಗರದ ನೌಗಮ್ ಚೌಕ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿ ನಾಗರಿಕನೊಬ್ಬನನ್ನು ಥಳಿಸಿದ್ದರು ಎಂದು ವರದಿಯಾಗಿದೆ. ಈ ವೀಡಿಯೊ ಪಹಲ್ಗಾಮ್ ದಾಳಿಗಿಂತ ಸುಮಾರು ಮೂರು ವರ್ಷಗಳ ಹಿಂದಿನದು ಎಂದು ಇದು ಸ್ಪಷ್ಟಪಡಿಸುತ್ತದೆ.

ಈ ವೀಡಿಯೊ ಆಗಸ್ಟ್ 2022 ರದ್ದಾಗಿದೆ, ಆಗ ಭಾರತೀಯ ಸೇನಾ ಸಿಬ್ಬಂದಿ ಶ್ರೀನಗರದಲ್ಲಿ ನಾಗರಿಕನೊಬ್ಬನನ್ನು ಥಳಿಸಿದ್ದರು ಎಂದು ವರದಿಯಾಗಿದೆ. ಶ್ರೀನಗರದಲ್ಲಿ ಕೆಲವು ಸಮವಸ್ತ್ರ ಧರಿಸಿದ ಸೈನಿಕರು ಸಣ್ಣಪುಟ್ಟ ಜಗಳವಾಡಿದ ನಂತರ ನಾಗರಿಕನೊಬ್ಬನನ್ನು ಥಳಿಸಿದರು. ಘಟನೆಯ ನಂತರ, ನೌಗಮ್ ಪೊಲೀಸ್ ಠಾಣೆಯು ಆಗಸ್ಟ್ 18, 2022 ರಂದು ಸೈನಿಕರ ವಿರುದ್ಧ ಐಪಿಸಿಯ ಸೆಕ್ಷನ್ 323, 341 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
J&K police registers FIR after a video showing army men beating civilians at Nowgam area of Srinagar went viral. “On receipt of this information, cognisance of incident was taken and a case under FIR number 116/2022 under sections 323,341 of IPC was registered in nowgam PS.” https://t.co/LauWTVWKZQ
— Ieshan Wani (@Ieshan_W) August 22, 2022
ಸಮವಸ್ತ್ರ ಧರಿಸಿದ ಕೆಲವು ಸೇನಾ ಸಿಬ್ಬಂದಿ ನಾಗರಿಕನೊಬ್ಬನನ್ನು ಥಳಿಸಿದ ಘಟನೆ ಗಮನಕ್ಕೆ ಬಂದಿತು, ಆದರೆ ಅಲ್ಲಿದ್ದ ಇತರ ಸಿಬ್ಬಂದಿ ಕೂಡ ನೌಗಮ್ ಚೌಕ್‌ನಲ್ಲಿ ಸಣ್ಣಪುಟ್ಟ ಜಗಳದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ” ಎಂದು ಶ್ರೀನಗರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೀಡಿಯೊದಲ್ಲಿ, ಇಬ್ಬರು ಸೈನಿಕರು ಲೋಡ್ ಕ್ಯಾರಿಯರ್ ಚಾಲಕನನ್ನು ಹೊರಗೆಳೆದು ಕೋಲಿನಿಂದ ತಲೆಗೆ ಹೊಡೆದಿರುವುದನ್ನು ನಾವು ನೋಡಬಹುದು. ವಾಗ್ವಾದದ ಸಮಯದಲ್ಲಿ, ಇನ್ನೊಬ್ಬ ನಾಗರಿಕ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಆ ಸಮಯದಲ್ಲಿ, ಅನೇಕರು ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದರು. ಅಂತಹ ಒಂದು ಪೋಸ್ಟ್‌ನಲ್ಲಿ, ಘಟನೆಯ ಮತ್ತೊಂದು ವೀಡಿಯೊವನ್ನು ಬೇರೆ ಕೋನದಿಂದ ಚಿತ್ರೀಕರಿಸಲಾಗಿದೆ ಅದನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀನಗರದಲ್ಲಿ ಸೈನಿಕರು ನಾಗರಿಕನನ್ನು ಥಳಿಸುವ ಹಳೆಯ ವಿಡಿಯೋವನ್ನು ಪಹಲ್ಗಾಮ್ ದಾಳಿಗೂ ಎರಡು ವರ್ಷಕ್ಕೂ ಹಿಂದಿನದು, ಆದ್ದರಿಂದ ಈ ಘಟನೆಗೂ ಪಹಲ್ಗಾಮ್ ಘಟನೆಗೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಾಕ್ ವಿರುದ್ದ ಪೋಸ್ಟ್ ಮಾಡಿದಕ್ಕೆ ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆದಿದೆಯೇ?

