ಜೆಡಿಎಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಸಮರ ಸಾರಿದ ಸುಮಲತಾ..!

ಕೆಲ ದಿನಗಳಿಂದ ಕನ್ನಂಬಾಡಿಯಿಂದ ಶುರುವಾದ ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಡುವಿನ ಕಾಳಗ ಸದ್ಯ ಅಂಬರೀಶ್ ವರೆಗೂ ಬಂದು ತಲುಪಿದೆ. ಪದೇ ಪದೇ ಸುಮಲತಾ ವಿರುದ್ಧ ತಿರುಗಿ ಬೀಳುವ ದಳಪತಿಗಳಿಗೆ ಸಂಸದೆ ಸುಮಲತಾ ಸೋಷಿಯಲ್ ಮೀಡಿಯಾದಲ್ಲಿ ಸಮರ ಸಾರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಮರ ಸಾರಿದ ಸುಮಲತಾ ಮನೆ ಬಳಿ ಭದ್ರತೆ ಹೆಚ್ಚಿಸಲಾಗಿದೆ.

ದಳಪತಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ವಾರ್ ನಡೆದಿದ್ದು ಟ್ವೀಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸತ್ಯದ ಪರವಾಗಿ ನಿಂತಾಗ ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿದ್ದರೆ ಸಹಿಸಿಕೊಳ್ಳುವುದಿಲ್ಲ. ಭ್ರಷ್ಟರು ನಿಷ್ಠಾವಂತ ಅಧಿಕಾರಗಳನ್ನು ವರ್ಗಾವಣೆ ಮಾಡಿ, ಒತ್ತಡ, ಕಿರುಕುಳ ಕೊಡಬಲ್ಲರು. ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರೋದಿಲ್ಲ” ಎಂದು ಬರೆಯುವ ಮೂಲಕ ಸುಮಲತಾ ಜೆಡಿಎಸ್ ಗೆ ಕೌಂಟರ್ ಕೊಟ್ಟಿದ್ದಾರೆ.

ನಿನ್ನೆ ಸಮಲತಾ ಪರವಾಗಿ ಜೆಡಿಎಸ್ ದಳಪತಿಗಳ ವಿರುದ್ಧ  ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಧ್ವನಿ ಎತ್ತಿದ್ದರು. ಇದರಿಂದ ವೆಂಕಟೇಶ್ ಹೆಚ್ಡಿಕೆಗೆ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಕಾರ್ಯಕರ್ತರು ವೆಂಕಟೇಶ್ ಮನೆ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದರು. ಇವರನ್ನು ತಡೆಯಲು ಬ್ಯಾರಿಕೇಡ್ ಗಳನ್ನ ಹಾಕಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇದರಿಂದ ಸುಮಲತಾ ಮನೆ ಮುಂದೆ ಭದ್ರತೆ ಹೆಚ್ಚಿಸಲಾಗಿದೆ.

Spread the love

Leave a Reply

Your email address will not be published. Required fields are marked *