ಬೆಂಗಳೂರಿನಿಂದ ಏರ್​ಪೋರ್ಟ್​ಗೆ ಇಂದಿನಿಂದ 10 ರೈಲು ಸೇವೆ ಆರಂಭ!

ಸಿಲಿಕಾನ್ ಸಿಟಿ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಹೊಂದಲು ಬೆಂಗಳೂರಿನಿಂದ ಏರ್​ಪೋರ್ಟ್​ಗೆ ಇಂದಿನಿಂದ 10 ರೈಲು ಸೇವೆ ಆರಂಭಗೊಂಡಿವೆ.

ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಗೆ ರೈಲು ಸೇವೆ ಆರಂಭಗೊಂಡಿದೆ. ಕೇಂದ್ರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಪ್ರಥಮ ಉಪನಗರ ರೈಲು ಹೊರಟಿದೆ. ಈ ಮೂಲಕ 10 ರೂಪಾಯಿಗೆ ಟಿಕೆಟ್ ಪಡೆದು ರೈಲಿನಲ್ಲಿ ಕೆಂಪೇಗೌಡ ಏರ್​ಪೋರ್ಟ್​ಗೆ ಪಯಣ ಮಾಡಬಹುದಾಗಿದೆ.

ಇಂದು ಮುಂಜಾನೆ ಡೆಮೋ ರೈಲು ಸೇವೆ ಆರಂಭಗೊಂಡಿದ್ದು ಕೇಂದ್ರ ರೈಲ್ವೆ ನಿಲ್ದಾಣದಿಂದ ಬೆಳಿಗಿನ ಜಾವ 4.45ಕ್ಕೆ ಏರ್​ಪೋರ್ಟ್​ಗೆ ರೈಲು ಆರಂಭಿಸಲಾಯಿತು. ಈ ಡೆಮೋ ರೈಲಿನಲ್ಲಿ ಸಂಸದ ಪಿ.ಸಿ ಮೋಹನ್ ಅವರು ರೈಲ್ವೆ ಅಧಿಕಾರಿಗಳ ಜೊತೆ ರೈಲಿನಲ್ಲಿ ಪ್ರಯಾಣ ಬೆಳಿಸಿದರು. ವಿಮಾನ ನಿಲ್ದಾಣಕ್ಕೆ 2 ಕಿ.ಮೀ ದೂರದಲ್ಲಿ ಹಾಲ್ಟ್ ಸ್ಟೇಷನ್ ಇದೆ. ಇನ್ನು ದೇವನಹಳ್ಳಿ ರೈಲು ನಿಲ್ದಾಣದಿಂದ ಉಚಿತ ಬಸ್ ವ್ಯವಸ್ಥೆ ಇದ್ದು, ರೈಲಿನಲ್ಲಿ ಪ್ರಯಾಣ ಮಾಡಿ ದೇವನಹಳ್ಳಿ ವಿಮಾನ ನಿಲ್ದಾಣದತ್ತ ಪ್ರಯಾಣಿಕರು ತೆರಳಿದ್ದಾರೆ.

ದೇವನಹಳ್ಳಿ ರೈಲ್ವೆ ನಿಲ್ಆಣದಿಂದ ಎರಡು ಕಿಲೋಮೀಟರ್ ದೂರದಲ್ಲಿ ಏರ್​ಪೋರ್ಟ್ ಇದೆ. ರೈಲ್ವೆ ನಿಲ್ದಾಣದಿಂದ ನೇರವಾಗಿ ವಿಮಾನ ಟರ್ಮಿನಲ್ ಕಡೆ ಬಸ್ ಸಂಚಾರ ವ್ಯವಸ್ಥೆ ಕೂಡ ಇದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights