ಟೋಕಿಯೊ ಪ್ಯಾರಾಲಿಂಪಿಕ್ಸ್: ಹೈ ಜಂಪ್ ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್!

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಹೈ ಜಂಪ್ ನಲ್ಲಿ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದು ಭಾರತದ 11 ನೇ ಪದಕ ವಿಜೇತರಾಗಿದ್ದಾರೆ.

ಪ್ಯಾರಾ ಹೈ ಜಂಪರ್ ಪ್ರವೀಣ್ ಕುಮಾರ್ ಶುಕ್ರವಾರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 11 ನೇ ಪದಕ ತಂದುಕೊಟ್ಟರು. ಒಲಿಂಪಿಕ್ ಕ್ರೀಡಾಂಗಣದಲ್ಲಿ ಮಳೆಯಿಂದ ತೇವಗೊಂಡ ಟ್ರ್ಯಾಕ್‌ನಲ್ಲಿ 2.10 ಮೀಟರ್ ಅತ್ಯುತ್ತಮ ಜಿಗಿತವನ್ನು ನಿರ್ವಹಿಸಿದ ಗ್ರೇಟ್ ಬ್ರಿಟನ್‌ನ ಜೊನಾಥನ್ ಬ್ರೂಮ್-ಎಡ್ವರ್ಡ್ಸ್ ಅವರನ್ನು ಹಿಂದಿಕ್ಕಿದ ಪ್ರವೀಣ್ ಅವರು 2.07 ಮೀಟರ್ ಜಿಗಿತದೊಂದಿಗೆ ಏಷ್ಯನ್ ದಾಖಲೆಯನ್ನು ಮುರಿದಿದ್ದಾರೆ.

ನಿಶಾದ್ ಕುಮಾರ್, ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್ ನಂತರ ಪ್ರವೀಣ್ ಟೋಕಿಯೊ ಕ್ರೀಡಾಕೂಟದಲ್ಲಿ ಪುರುಷರ ಎತ್ತರ ಜಿಗಿತದಲ್ಲಿ ಭಾರತದ ನಾಲ್ಕನೇ ಪದಕ ವಿಜೇತರಾಗಿದ್ದಾರೆ.

ಕುಮಾರ್ 2.01 ಮೀ ಮಾರ್ಕ್  ಜಿಗಿತ ಸಾಧಿಸಲು ಎರಡು ಪ್ರಯತ್ನಗಳನ್ನು ತೆಗೆದುಕೊಂಡಿದ್ದಾರೆ. ಕುಮಾರ್ ತನ್ನ ಮೊದಲ ಪ್ರಯತ್ನದಲ್ಲಿ 2.04 ಮೀ ಜಿಗಿತವನ್ನು  ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಆದರೆ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 2.07 ಮೀ ಮಾರ್ಕ್  ಜಿಗಿಯಲು ಸಾಧ್ಯವಾಗಲಿಲ್ಲ. ಆದರೆ, ಎರಡನೆ ಪ್ರಯತ್ನದಲ್ಲಿ ಕುಮಾರ್ ಅದನ್ನು ಸಾಧಿಸಿದ್ದರೂ, ಇನ್ನು ಪ್ರತಿ ಸ್ಪರ್ಧಿಗಳಾದ ಬ್ರೂಮ್ ಮತ್ತು ಲೆಪಿಯಾಟೊ ವಿಫಲರಾಗಿದ್ದರು. ಅಲ್ಲದೆ, ಲೆಪಿಯಾಟೊ ಕೂಡ ತನ್ನ ಮೂರನೇ ಪ್ರಯತ್ನದಲ್ಲಿ  ವಿಫಲವಾದ ಕಾರಣ  ಪ್ರವೀಣ್  ಅವರಲ್ಲಿ  ಬೆಳ್ಳಿ ಪದಕ ಗೆಲ್ಲುವ ಭರವಸೆ ಹುಟ್ಟಿತ್ತು. ಆದರೆ 2.10 ಮೀ ಮಾರ್ಕ್​ ನಲ್ಲಿ ಬ್ರೂಮ್ ತನ್ನ ಎರಡನೇ ಪ್ರಯತ್ನದಲ್ಲಿ 2.10 ಮೀ ಮಾರ್ಕ್ ಸಾಧಿಸಿದ್ದರು, ಅದನ್ನು ಪ್ರವೀಣ್ ತನ್ನ ಮೂರು ಪ್ರಯತ್ನಗಳಲ್ಲಿ ಅದನ್ನು ಸಾಧಿಸಲು ಸಾಧ್ಯವಾಗದ ಕಾರಣ ಹೈ ಜಂಪ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಜಾವೆಲಿನ್ ಎಸೆತಗಾರ ಸುಂದರ್ ಸಿಂಗ್ ಗುರ್ಜಾರ್, ಎತ್ತರ ಜಿಗಿತಗಾರ ಶರದ್ ಕುಮಾರ್ ಮತ್ತು ಶೂಟರ್ ಸಿಂಗರಾಜ್ ಕಂಚು ಗೆದ್ದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights