ನ್ಯೂಯಾರ್ಕ್ ನಲ್ಲಿ ಭಾರಿ ಮಳೆ, ಪ್ರವಾಹ : 44 ಜನ ಸಾವು – ನದಿಗಳಂತಾದ ರಸ್ತೆಗಳು!

ನ್ಯೂಯಾರ್ಕ್ ನಲ್ಲಿ ಕಳೆದ 50 ವರ್ಷಗಳಲ್ಲಿ ಕಾಣದ ಭಾರಿ ಮಳೆ, ಪ್ರವಾಹ ಉಂಟಾಗಿದ್ದು 44 ಜನ ಸಾವನ್ನಪ್ಪಿದ್ದಾರೆ. ದಾಖಲೆಯ ಮಳೆಯಿಂದಾಗಿ ರಸ್ತೆಗಳು ನದಿಗಳಂತಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಳೆ ನೀರು  ವಿಮಾನ ನಿಲ್ದಾಣಕ್ಕೆ ನುಗ್ಗಿದ್ದರಿಂದ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಮನೆಗಳಿಗೂ ನೀರು ನುಗ್ಗಿ ವಿದ್ಯುತ್ ಸಂಪರ್ಣವೂ ಕಡಿತಗೊಳಿಸಲಾಗಿದೆ.

ಹೌದು… ನ್ಯೂಯಾರ್ಕ್ ನಲ್ಲಾದ ಭಾರೀ ಮಳೆಯ ಬಗ್ಗೆ ವಿವರಿಸಿದ ಸ್ಥಳೀಯ ನಿವಾಸಿ ಮೆಟೊಡಿಜಾ ಮಿಹಾಜ್ಲೋವ್, ‘ನನಗೆ 50 ವರ್ಷ ವಯಸ್ಸಾಗಿದೆ ಮತ್ತು ನಾನು ಇಷ್ಟು ಮಳೆಯನ್ನು ನೋಡಿಲ್ಲ. ಮ್ಯಾನ್ಹ್ಯಾಟನ್ ರೆಸ್ಟೋರೆಂಟ್‌ನ ನೆಲಮಾಳಿಗೆಯಲ್ಲಿ ಮೂರು ಇಂಚು ನೀರು ತುಂಬಿದೆ.ಇದು ಕಾಡಿನಲ್ಲಿ ಉಷ್ಣವಲಯದ ಮಳೆಯಂತೆ ನಂಬಲು ಸಾಧ್ಯವಿಲ್ಲ. ಈ ವರ್ಷ ಎಲ್ಲವೂ ತುಂಬಾ ವಿಚಿತ್ರವಾಗಿದೆ. ಟರ್ಮಿನಲ್ ಗಳು ಮಳೆನೀರಿನಿಂದ ತುಂಬಿರುವುದರಿಂದ ಲಾಗಾರ್ಡಿಯಾ, ಜೆಎಫ್‌ಕೆ ಮತ್ತು ನೆವಾರ್ಕ್‌ನಲ್ಲಿ ವಿಮಾನ ನಿಲ್ದಾಣಗಳಲ್ಲಿ ನೂರಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ’ ಎಂದು ಹೇಳಿದರು.

ಶುಕ್ರವಾರ ದಕ್ಷಿಣ ರಾಜ್ಯ ಲೂಯಿಸಿಯಾನಕ್ಕೆ ಪ್ರವಾಸಕ್ಕೆ ಮುಂಚಿತವಾಗಿ ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಜೋ ಬಿಡೆನ್ ಅವರು  “ನಾವೆಲ್ಲರೂ ಒಟ್ಟಾಗಿದ್ದೇವೆ. ರಾಷ್ಟ್ರವು ಸಹಾಯ ಮಾಡಲು ಸಿದ್ಧವಾಗಿದೆ” ಎಂದರು.

ಮ್ಯಾನ್ಹ್ಯಾಟನ್, ದಿ ಬ್ರಾಂಕ್ಸ್ ಮತ್ತು ಕ್ವೀನ್ಸ್ ಸೇರಿದಂತೆ ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್ ಪ್ರಾಂತ್ಯಗಳಾದ್ಯಂತ ಮಳೆ ನೀರು ಪ್ರವಾಹದಂತೆ ಹರಿದಿದ್ದು, ಕಾರುಗಳು ಮುಳುಗಿಹೋಗಿವೆ. ನೂರಾರು ಜನರು ರಕ್ಷಿಸಲು ಅಗ್ನಿಶಾಮಕ ಇಲಾಖೆ ಹರಸಾಹಸಪಡುತ್ತಿದೆ.

ಪ್ರವಾಹದಿಂದ ನ್ಯೂಜೆರ್ಸಿಯಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದು ಈ ಸಾವುಗಳಲ್ಲಿ ಹೆಚ್ಚಿನವು ತಮ್ಮ ವಾಹನಗಳಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳದ್ದಾಗಿದೆ. ನೆರೆಯ ರಾಜ್ಯವಾದ ಕನೆಕ್ಟಿಕಟ್‌ನಲ್ಲಿ ಒಬ್ಬ ರಾಜ್ಯ ಸೈನಿಕ ಮೃತಪಟ್ಟಿದ್ದಾನೆ. ತಮ್ಮ ನೆಲಮಾಳಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ 11 ಮಂದಿ ಸೇರಿದಂತೆ ನ್ಯೂಯಾರ್ಕ್ ನಗರದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಬಲಿಪಶುಗಳು ಎರಡು ವರ್ಷದಿಂದ 86 ರವರೆಗಿನ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಸಂಜೆ ಜನಪ್ರಿಯ ಪ್ರವಾಸಿ ತಾಣ ಕೇಪ್ ಕಾಡ್, ಮ್ಯಾಸಚೂಸೆಟ್ಸ್ ನಲ್ಲಿ ಸುಂಟರಗಾಳಿ ಅಪ್ಪಳಿಸಿದೆ.

ನ್ಯೂಯಾರ್ಕ್‌ನ ಉಪನಗರವಾದ ವೆಸ್ಟ್‌ಚೆಸ್ಟರ್‌ನಲ್ಲಿ ಮೂವರು ಮೃತಪಟ್ಟರೆ, ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದ ಹೊರಗಿನ ಮಾಂಟ್‌ಗೊಮೆರಿ ಕೌಂಟಿಯಲ್ಲಿ ಇನ್ನೂ ನಾಲ್ವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights