ದೆಹಲಿ ಗಲಬೆಗೆ ಅಮಿತ್‌ ಶಾ ನೇರ ಹೊಣೆ: ಸತ್ಯಶೋಧನಾ ವರದಿ

ಫೆಬ್ರವರಿ ತಿಂಗಳಿನಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಬೆ ಮತ್ತು ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಹೊಣೆಗಾರರು. ಅಲ್ಲಿಯ ಹಿಂಸಾಚಾರ ಉಲ್ಬಣಗೊಳ್ಳಲು ಮತ್ತು ಪೊಲೀಸ್‌ ತನಿಖೆ ಪೂರ್ವಾಗ್ರಹ ಪೀಡಿತವಾಗಿರಲು ಅಮಿತ್‌ ಶಾ ಅವರೇ ಕಾರಣ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ಸಿಸ್ಟ್‌) ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.

“ಕಮ್ಯುನಲ್ ವಾಯ್ಲೆನ್ಸ್ ಇನ್ ನಾರ್ತ್ ಈಸ್ಟ್ ಡೆಲ್ಲಿ, ಫೆಬ್ರವರಿ 2020” ಎಂಬ ಶೀರ್ಷಿಕೆಯಲ್ಲಿ ಸತ್ಯಶೋಧನಾ ವರದಿಯನ್ನು ಸಿಪಿಐ(ಎಂ) ಬಿಡುಗಡೆ ಮಾಡಿದ್ದು, “ಮತೀಯ ಹಿಂಸಾಚಾರವನ್ನು ದಿಲ್ಲಿ ಹಿಂಸಾಚಾರ ಎಂದು ವರ್ಣಿಸುವುದು ತಪ್ಪು. ಎರಡೂ ಕಡೆಗಳು ಸಮಭಾಗಿಯಾದಂತಹ ಪರಿಸ್ಥಿತಿಯಲ್ಲಿ ಹಿಂಸಾಚಾರ ಎಂದು ಹೇಳಬಹುದು. ಆದರೆ ಇಲ್ಲಿ ಹಿಂದುತ್ವ ಗುಂಪುಗಳು ದಾಳಿ ನಡೆಸಿದರೆ ಇನ್ನೊಂದು ಸಮುದಾಯ ತನ್ನನ್ನು ದಾಳಿಗಳಿಂದ ರಕ್ಷಿಸಿಕೊಳ್ಳಲು ಯತ್ನಿಸಿದೆ. ಪೊಲೀಸರು ಹಿಂದುತ್ವ ಗುಂಪುಗಳ ಪರ ಇದ್ದರೆಂಬುದಕ್ಕೆ ಸಾಕಷ್ಟು ವೀಡಿಯೋ ಆಧಾರಗಳಿವೆ” ಎಂದು ವರದಿಯಲ್ಲಿ ಹೇಳಲಾಗಿದೆ.

ಬಿಜೆಪಿ ನಾಯಕರುಗಳಾದ ಕಪಿಲ್ ಮಿಶ್ರಾ ಮತ್ತು ಅನುರಾಗ್ ಠಾಕೂರ್ ಅವರ ಪ್ರಚೋದನಾತ್ಮಕ ಭಾಷಣಗಳು ಹಾಗೂ ಫೆಬ್ರವರಿ 21ರ ಶಿವರಾತ್ರಿ ಮೆರವಣಿಗೆಗಳ ವೇಳೆಯ ಪ್ರಚೋದನಾತ್ಮಕ ಘೋಷಣೆಗಳು ಕೂಡ ಹಿಂಸೆಗೆ ಕಾರಣವಾಯಿತು, ಎಂದು ಹೇಳಿದ ವರದಿ ಸಂತ್ರಸ್ತರಿಗೆ `ಭಾಗಶಃ’ ಪರಿಹಾರ ನೀಡುವಲ್ಲಿನ ವಿಳಂಬಕ್ಕೆ ದಿಲ್ಲಿಯ ಆಪ್ ಸರಕಾರವನ್ನೂ ದೂಷಿಸಿದೆ. ಘಟನೆ ಕುರಿತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಸಬೇಕೆಂದೂ ವರದಿಯಲ್ಲಿ ಆಗ್ರಹಿಸಲಾಗಿದೆ.


ಇದನ್ನೂ ಓದಿ: ತೆಲಂಗಾಣದಲ್ಲಿ ಬೆಳೆಯುತ್ತಿದೆ ಬಿಜೆಪಿ; ಕೇಸರಿ ಪಕ್ಷವನ್ನು ಮಣಿಸಲು ಕೆಸಿಆರ್‌ ಹೊಸ ತಂತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ದೆಹಲಿ ಗಲಬೆಗೆ ಅಮಿತ್‌ ಶಾ ನೇರ ಹೊಣೆ: ಸತ್ಯಶೋಧನಾ ವರದಿ”

  • January 28, 2021 at 8:28 am
    Permalink

    ಇವರೆಲ್ಲಾ ಕಾನೂನು ಕ್ರಮಗಳಿಂದ ತಪ್ಪಿಸಿ ಕೊಳ್ಳುವುದರಲ್ಲಿ ನಿಸ್ಸೀಮರು. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಾಕ್ಷ್ಯಗಳಿದ್ದ್ದೂ ತಪ್ಪಿಸಿಕೊಂಡ ಖದೀಮರು.

    Reply

Leave a Reply

Your email address will not be published.

Verified by MonsterInsights