ತೆಲಂಗಾಣದಲ್ಲಿ ಬೆಳೆಯುತ್ತಿದೆ ಬಿಜೆಪಿ; ಕೇಸರಿ ಪಕ್ಷವನ್ನು ಮಣಿಸಲು ಕೆಸಿಆರ್ ಹೊಸ ತಂತ್ರ!
ಕಳೆದ ವಾರ ಘೋಷಣೆಯಾದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ (ಜಿಎಚ್ಎಂಸಿ) ಚುನಾವಣಾ ಫಲಿತಾಂಶವು ಆಡಳಿತಾರೂಢ ಟಿಆರ್ಎಸ್ ಪಕ್ಷಕ್ಕೆ ಆಘಾತವನ್ನು ಉಂಟುಮಾಡಿದೆ. ಹೈದರಾಬಾದ್ ಪಾಲಿಕೆಯಲ್ಲಿ ಅತ್ಯಂತ ದೊಡ್ಡಪಕ್ಷವಾಗಿ ಟಿಆರ್ಎಸ್ ಹೊರಹೊಮ್ಮಿದ್ದರೂ ಸಹ, ಶೇ.40 ಸ್ಥಾನಗಳನ್ನು ಅದು ಕಳೆದುಕೊಂಡಿದೆ. ಅಲ್ಲದೆ, ಆ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಇದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪಕ್ಷಕ್ಕೆ ಭಾರಿ ಹಿನ್ನೆಡೆಯನ್ನು ಉಂಟುಮಾಡಿದೆ. ಹೀಗಾಗಿ ತೆಲಂಗಾಣದಲ್ಲಿ ಬೆಳೆಯುತ್ತಿರುವ ಬಿಜೆಪಿಯ ಪ್ರಭಲ್ಯವನ್ನು ಮಣಿಸಲು ಹೊಸ ತಂತ್ರಗಳನ್ನು ರೂಪಿಸಲು ಟಿಆರ್ಎಸ್ ಮುಂದಾಗಿದೆ.
ಕಾಂಗ್ರೆಸ್ ಅಸ್ತಿತ್ವದಲ್ಲಿದ, ಪ್ರಭಲ ವಿರೋಧ ಪಕ್ಷವೂ ಇಲ್ಲದಂತೆ ಮಾಡುವಲ್ಲಿ ಟಿಆರ್ಎಸ್ ಯಶಸ್ವಿಯಾಗಿತ್ತು. ಆದರೆ, ಭಾರತದ ರಾಜಕೀಯ ಇತಿಹಾಸ ಹಳೆಯ ಖಾತಿ ಮಾಡಿರುವ ಜಾಗವನ್ನು ಬಿಜೆಪಿ ಆಕ್ರಮಿಸಿಕೊಳ್ಳುತ್ತಿದೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಈಗ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪಂಜಾಬ್ ಹಾಗೂ ವಿವಿಧ ರಾಜ್ಯಗಳ ರೈತರು ಕೇಂದ್ರ ಸರ್ಕಾರದ ವಿರುದ್ಧ ಸಿಟ್ಟಾಗಿದ್ದಾರೆ. ಹೊಸ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಕೃಷಿ ಮಸೂದೆಯ ವಿರುದ್ದದ ತೆಲಂಗಾಣ ಸರ್ಕಾರವು ತಂತ್ರಎಣೆಯಲು ಸಜ್ಜಾಗುತ್ತಿದೆ.
ಜಿಎಚ್ಎಂಸಿ ಚುನಾವಣೆಗೆ ಒಂದೆರಡು ದಿನಗಳ ಮೊದಲು, ಸಿಎಂ ಕೆಸಿಆರ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸ್ಥಳೀಯ ಚುನಾವಣೆಗೆ ಬಿಜೆಪಿಯ ರಾಷ್ಟ್ರ ನಾಯಕರು ಪ್ರಚಾರಕ್ಕಿಳಿದಿದ್ದನ್ನು ಅವರು ಟೀಕಿಸಿದ್ದರು. ಸ್ಥಳೀಯ ಚುನಾವಣೆಗೆ ದೆಹಲಿ ನಾಯಕರು ಬಂದರೆ ದೆಹಲಿ ರಾಜಕೀಯ ಕುಗ್ಗುತ್ತದೆ ಎಂದು ಅವರು ಹೇಳಿದ್ದರು. ಆದರೆ, ಚುನಾವಣೆಯ ಫಲಿತಾಂಶ ಬಿಜೆಪಿಯ ಕಸರತ್ತಿನ ಪ್ರತಿಫಲವಾಗಿತ್ತು.
ಜಿಎಚ್ಎಂಸಿ ಚುನಾವಣೆಯಲ್ಲಿ ಟಿಆರ್ಎಸ್ಗೆ ಹಿನ್ನಡೆಯಾಗಬಹುದು ಎಂದು ಕೆಸಿಆರ್ ಅಭಿಪ್ರಾಯ ನಿಜವಾಗಿದೆ. ಬಿಜೆಪಿಯು ಟಿಆರ್ಎಸ್ಗೆ ಒಳಪೆಟ್ಟು ನೀಡಿದೆ. ಅಲ್ಲದೆ, ಬಿಜೆಪಿ 2013ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಸಿದ್ದವಾಗಿದೆ.
ಆದರೂ, ಕೆಸಿಆರ್ ನೇತೃತ್ವದ ಟಿಆರ್ಎಸ್ ಪಕ್ಷದ ಗುರಿ ಸದ್ಯ, ವಿಧಾನ ಪರಿಷತ್ನ ಎರಡು ಪದವೀಧರ ಸ್ಥಾನಗಳಿಗೆ ನಡೆಯುವ ಚುನಾವಣೆಯನ್ನು ಗೆಲ್ಲುವುದು, ವಾರಂಗಲ್ ಮತ್ತು ಖಮ್ಮಂ ಪುರಸಭೆಗಳಿಗೆ ನಡೆಯುವ ಚುನಾವಣೆ ಮತ್ತು ನಾಗಾರ್ಜುನ ಸಾಗರ ವಿಧಾನಸಭಾ ಸ್ಥಾನಕ್ಕೆ ನಡೆಯುವ ಉಪಚುನಾವಣೆಗಳನ್ನು ಗೆಲ್ಲುವುದೇ ಗುರಿಯಾಗಿದೆ. ಹಾಗಾಗಿ, ಬಿಜೆಪಿಯನ್ನು ತನ್ನ ಆಧ್ಯ ಎದುರಾಳಿ ಎಂದು ಚಿತ್ರಿಸಲು ಕೆಸಿಆರ್ ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಮೃದು ಧೋರಣೆಯನ್ನು ಹೊಂದುವಲ್ಲಿ ಅವರು ಉತ್ಸುಕರಾಗಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿಗೆ ಬಲವಿಲ್ಲ. ಅವರ ರಾಜ್ಯಕೀಯ ಆಟ ಅಲ್ಲಿ ನಡೆಯುವುದಿಲ್ಲ ಎಂದು ಟಿಆರ್ಎಸ್ ಭಾವಿಸಿದೆ.
ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಬಿಜೆಪಿ; ಕಾಂಗ್ರೆಸ್ಗೆ ನಿರಾಸೆ!

