ಉಕ್ರೇನ್ನ ಮೇಲೆ ರಷ್ಯಾದ ದಾಳಿ ಹೆಚ್ಚಾಗುತ್ತಿದ್ದಂತೆ ಉಕ್ರೇನ್ನಲ್ಲಿ ಅಪಾತದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮಾಡಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ, ಅಪಾಯದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಸಹಾಯ ಮಾಡುವಂತೆ ಭಾರತ ಸರ್ಕಾರವನ್ನು ವಿನಂತಿಸುತ್ತಿದ್ದಾರೆ.
ಇದರ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದ್ದು “#ಇವಳು_ವೈಶಾಲಿ_ಯಾದವ್.ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯವಳು.ಮನೆಯಲ್ಲಿ ಕುಳಿತು,ಯುಕ್ರೇನ್ ನಿಂದ ವಿಡಿಯೋ ಮಾಡಿದಂತೆ ಮಾಡಿ,ಮೋದಿ ಹಾಗು ಯೋಗಿ ಸರ್ಕಾರದ ನನಗೆ ಭಾರತಕ್ಕೆ ಬರಲು ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದು ಟೀವಿಗೆ ವಿಡಿಯೋ ತುಣುಕುಗಳನ್ನು ಕಳಿಸಿ ಮೋದಿ ಹಾಗು ಯೋಗಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಳು. ಸ್ಥಳೀಯರ ವರದಿಯಂತೆ ಹೋಗಿ ನೋಡಲಾಗಿ,ಮನೆಯಲ್ಲೇ ಇದ್ದ ಇವಳುಉತ್ತರ ಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ಈ ಅಪಪ್ರಚಾರ ಮಾಡುತ್ತಿರುವುದು ಕಂಡುಬಂತು.ಸಧ್ಯ ಪೋಲೀಸ್ ಆತಿಥ್ಯದಲ್ಲಿಇರುವಳು.” #ಹೇಗಿದೆನೋಡಿಇವರಸಮಾಜವಾದ ಇವಳ ತಂದೆ ಸಮಾಜವಾದಿ ಪಕ್ಷದ ಮುಖಂಡ ಎಂದು ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ.

https://twitter.com/MeghBuIletin/status/1498925342987227140?ref_src=twsrc%5Etfw%7Ctwcamp%5Etweetembed%7Ctwterm%5E1498925342987227140%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fup-police-arresting-vaishali-yadav-daughter-of-sp-leader-for-pretending-to-be-a-student-stuck-in-ukraine-and-accusing-govt-false-claim%2F
The claim has been shared on Twitter by various BJP leaders such as Neetu Singh, Naveen Kumar Jindal, Sunil Yadav, Dr Richa Rajpoot, Anil Kumar and others.
ವೈಶಾಲಿ ಉಕ್ರೇನ್ನಲ್ಲಿ ವಿದ್ಯಾರ್ಥಿನಿಯಂತೆ ನಟಿಸುತ್ತಿದ್ದಳು ಆದರೆ ನಿಜವಾಗಿ ಭಾರತದಲ್ಲಿ ಇದ್ದಾಳೆ ಎಂದು ಹೇಳುವ ಮೂಲಕ ಅನೇಕ ಬಿಜೆಪಿ ಪರ ಪ್ರಚಾರದ ಹ್ಯಾಂಡಲ್ಗಳು ಟ್ವಿಟ್ಟರ್ನಲ್ಲಿ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆಕೆಯನ್ನು ಯುಪಿ ಪೋಲೀಸರು ಹರ್ದೋಯಿಯಿಂದ ಬಂಧಿಸಿದ್ದಾರೆ ಮತ್ತು ಸಮಾಜವಾದಿ ಪಕ್ಷದ ನಾಯಕರಾದ ಆಕೆಯ ತಂದೆ ಮಹೇಂದ್ರ ಯಾದವ್ ಅವರ ಆದೇಶದ ಮೇರೆಗೆ ವೀಡಿಯೊವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆಗಳೊಂದಿಗೆ ವೈರಲ್ ಮಾಡಲಾಗಿದೆ. ವೈರಲ್ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಸೋಣ.
ಫ್ಯಾಕ್ಟ್ಚೆಕ್:
Google ನಲ್ಲಿ ಕೀವರ್ಡ್ ಸರ್ಚ್ ಮಾಡಲಾಗಿದ್ದು ಅದರಲ್ಲಿ ಹರ್ದೋಯ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ಅವರ ಹೇಳಿಕೆಯನ್ನು
ಖಂಜಾರ್ ಸೂತ್ರ ಎಂಬ ಫೇಸ್ಬುಕ್ ಪುಟದಿಂದ ಅಪ್ಲೋಡ್ ಮಾಡಲಾಗಿದ್ದು. ವೈಶಾಲಿ ಬಂಧನದ ಹೇಳಿಕೆಯನ್ನು ತಳ್ಳಿಹಾಕಿರುವ ದ್ವಿವೇದಿಯವರು ವೈಶಾಲಿಯವರು ಪ್ರಸ್ತುತ ರೊಮೇನಿಯಾದಲ್ಲಿದ್ದಾರೆ ಎಂದು ಹೇಳಿದರು. ವೈಶಾಲಿ ಉತ್ತರ ಪ್ರದೇಶದಲ್ಲೇ ಇದ್ದು ಸರ್ಕಾರದ ಸಹಾಯವನ್ನು ಕೋರಿ ವೀಡಿಯೊವನ್ನು ಮಾಡಿದ್ದಾರೆ ಹಾಗು ಯುಪಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿಗಳು ಸುಳ್ಳು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಫ್ಯಾಕ್ಟ್ಚೆಕ್ ಮಾಡಿರುವ ಆಲ್ಟ್ನ್ಯೂಸ್ ವೈರಲ್ ಸುದ್ದಿಯ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ. ಫೇಸ್ಬುಕ್ ಲಿಂಕ್ ಸಹಾಯವನ್ನು ಪಡೆದುಕೊಂಡು, ಯುವತಿಯ ತಂದೆ ಮತ್ತು ಎಸ್ಪಿ ನಾಯಕ ಮಹೇಂದ್ರ ಯಾದವ್ ಅವರನ್ನು ಆಲಟ್ನ್ಯೂಸ್ ಸಂಪರ್ಕ ಮಾಡಿದೆ. ಆಲ್ಟ್ ನ್ಯೂಸ್ ಜೊತೆ ಮಾತನಾಡಿದ ಮಹೇಂದ್ರ ಯಾದವ್, ಇದು ಬಿಜೆಪಿಯ ಪಿತೂರಿ. ನನ್ನ ಮಗಳು ವಿಡಿಯೋ ಮಾಡುವಾಗ ಉಕ್ರೇನ್ನಲ್ಲಿ ಸಿಕ್ಕಿಬಿದ್ದಿದ್ದಳು. ಈಗ ಅಲ್ಲಿಂದ ಹೊರಟು ರೊಮೇನಿಯಾದಲ್ಲಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ನಕಲಿ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ವೈಶಾಲಿ ಮತ್ತೊಂದು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ, ಅದರಲ್ಲಿ ಬಿಜೆಪಿಯವರು ಮಾಡಿರುವ ಪ್ರತಿಪಾದನೆ ಸುಳ್ಳು ಎಂದು ತಿಳಿಸಿದ್ದಾರೆ. ಮಹೇಂದ್ರ ಯಾದವ್ ಅವರು ವೈಶಾಲಿ ಅವರೊಂದಿಗೆ ಮಾತನಾಡಿರುವ ಕುರಿತು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವಾಟ್ಸಾಪ್ ಮೂಲಕ ವೈಶಾಲಿಯವರನ್ನು ಸಂಪರ್ಕ ಮಾಡಲಾಗಿದ್ದು. ವಿರೋಧ ಪಕ್ಷಗಳ ನಾಯಕರು ನನ್ನ ತಂದೆ ಮತ್ತು ಎಸ್ಪಿಯನ್ನು ದೂಷಿಸಲು ಏನು ಬೇಕಾದರೂ ಮಾಡಬಹುದು ಎಂದು ವೈಶಾಲಿ ಹೇಳಿದ್ದಾರೆ. ಅವರು ಹೇಳಿರುವ ಎಲ್ಲಾ ಹೇಳಿಕೆಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದು, ಅವರ ಹುನ್ನಾರವನ್ನು ಬಯಲು ಮಾಡಿದ್ದು ನನಗೆ ಸಂತೋಷವಾಗಿದೆ ಮತ್ತು ನಾನು ಸುರಕ್ಷಿತವಾಗಿ ಮನೆಗೆ ಮರಳುತ್ತಿದ್ದೇನೆ ಎಂದರು.
ವೈಶಾಲಿ ಅವರು ನಮಗೆ ವೀಡಿಯೊವನ್ನು ಕಳುಹಿಸಿದ್ದಾರೆ, ಅಲ್ಲಿ ಅವರು ಉಕ್ರೇನ್ನಲ್ಲಿ ವೈರಲ್ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಪ್ರಸ್ತುತ ರೊಮೇನಿಯಾದಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಭಾರತಕ್ಕೆ ಮರಳುವ ನಿರೀಕ್ಷೆಯಿದೆ. ವೀಡಿಯೊದಲ್ಲಿ, ವೈಶಾಲಿ ಅವರು ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸಬೇಡಿ ಮತ್ತು ಈ ಸಂಕಷ್ಟದಲ್ಲಿ ಸಿಲುಕಿರುವವರ ಬಗ್ಗೆ ಸಹಾನುಭೂತಿ ಇರಲಿ ಇದರಲ್ಲಿ ನಿಮ್ಮ ರಾಜಕೀಯವನ್ನು ತರಬೇಡಿ ಎಂದು ವಿನಂತಿಸಿದ್ದಾರೆ.
ವೈರಲ್ ವೀಡಿಯೊವನ್ನು ಫೆಬ್ರವರಿ 24 ರಂದು ಚಿತ್ರೀಕರಿಸಲಾಗಿದೆ ಎಂಬುದಕ್ಕೆ ಖಾತ್ರಿಪಡಿಸಿಕೊಳ್ಳಲು ನಾವು ವೈಶಾಲಿ ಅವರನ್ನು ಕೇಳಿಕೊಂಡಾಗ. ಅವರು ವೀಡಿಯೊದ ಮೆಟಾಡೇಟಾದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದೇ ದಿನ ಆಕೆಯ ಮನವಿಯ ಕುರಿತು ದೈನಿಕ್ ಜಾಗರಣ್ ವರದಿಯನ್ನು ಪ್ರಕಟಿಸಿದೆ. ಇದರ ಜೊತೆಗೆ ವೈಶಾಲಿಯವರನ್ನು ವಾಟ್ಸಾಪ್ನಲ್ಲಿ ಲೈವ್ ಲೊಕೇಶನ್ ಶೇರ್ ಮಾಡಲು ಕೇಳಲಾಗಿತ್ತು ಅದನ್ನು ಸಹ ಹಂಚಿಕೊಡಿದ್ದಾರೆ. ಅದರ ಆಧಾರದಲ್ಲಿ ವೈಶಾಲಿಯವರು ರೊಮೇನಿಯಾದಲ್ಲಿದ್ದಾರೆ ಎಂದು ಖಚಿವಾಗಿದೆ..

ಉತ್ತರಪ್ರದೇಶ ಪ್ರಾದೇಶಿಕ ಸುದ್ದಿ ಪೋರ್ಟಲ್ , ಒಆರ್ಜಿ ಕೂಡ ವೈಶಾಲಿ ಬಂಧನದ ಆರೋಪ ಸುಳ್ಳು ಎಂದು ವರದಿ ಮಾಡಿದೆ.
ಒಟ್ಟಾರೆಯಾಗಿ ಉಕ್ರೇನ್ನಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿನಿ ವೈಶಾಲಿ ಯಾದವ್ ಅವರು ಹಂಚಿಕೊಂಡ ವೀಡಿಯೊವನ್ನು ಸಹಿಸದ ಭಾರತದ ಬಿಜೆಪಿ ಬೆಂಬಲಿಗರ ಸೋಶಿಯಲ್ ಮೀಡಿಯಾ ಗುಂಪು ವೈಶಾಲಿ ಯಾದವ್ ಅವರು ಉತ್ತರ ಪ್ರದೇಶದಲ್ಲೆ ಇದ್ದುಕೊಂಡು ಭಾರತದ ಮಾನಹಾನಿ ಮಾಡುವ ಸಲುವಾಗಿ ಆಕೆಯ ತಂದೆ ಸಮಾಜವಾದಿ ಪಕ್ಷದ ನಾಯಕ ಮಹೇಂದ್ರ ಯಾದವ್ ಅವರ ಆಜ್ಞೆಯ ಮೇರೆಗೆ ವೀಡಿಯೊವನ್ನು ಮಾಡಿದ್ದು ಅವರನ್ನು ಹರ್ದೋಯ್ ಪೋಲೀಸರು ಬಂಧಿಸಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ:← Fact check: ಭಾರತೀಯ ಪ್ರಜೆಗಳೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂವಾದ ನಡೆಸಿದ್ದು ನಿಜವೆ?
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ