‘ನಾನು ಯಾರ ಬೂಟ್ ನೆಕ್ಕಿಲ್ಲ’ – ಬೊಮ್ಮಾಯಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ!

ತಮ್ಮನ್ನು ‘ಸ್ವತಂತ್ರ ರಾಜಕಾರಣಿ’ ಎಂದು ಕರೆದಿದ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಸಂಸದ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.

“ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುಬ್ರಮಣಿಯನ್ ಸ್ವಾಮಿಯನ್ನು ‘ಸ್ವತಂತ್ರ ರಾಜಕಾರಣಿ’ ಎಂದು ಕರೆಯುತ್ತಾರೆ. ನಾನು ಆರು ಅವಧಿಯ ಸಂಸದನಾಗಿದ್ದೇನೆ. ಎರಡು ಬಾರಿ ಮಂತ್ರಿಯಾಗಿದ್ದೇನೆ. ಆದರೆ ಯಾರ ಬೂಟ್ ನೆಕ್ಕಿಲ್ಲ.  ಪ್ರಜಾಪ್ರಭುತ್ವಕ್ಕೆ ಸತ್ಯವನ್ನು ಹೇಳುವುದು ಅನಿವಾರ್ಯ” ಎಂದು ಟ್ವೀಟ್ ಮೂಲಕ ಬೊಮ್ಮಾಯಿಗೆ ತಿರುಗೇಟು ಕೊಟ್ಟಿದ್ದಾರೆ.

ರಾಜ್ಯದಲ್ಲಿ ಬೆಲೆ ಏರಿಕೆ ವಿಚಾರವಾಗಿ ಸೆಪ್ಟೆಂಬರ್ 15 ರಂದು ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸುಬ್ರಮಣಿಮ್ ಸ್ವಾಮಿಯವರ ಟ್ವೀಟ್ ಕುರಿತು ಉಲ್ಲೇಖೀಸಿ ಮಾತನಾಡಿದರು. ಈ ವೇಳೆ ಮದ್ಯೆ ಪ್ರವೇಶಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸುಬ್ರಮಣಿಮ್ ಸ್ವಾಮಿಯವರ ನಿಮಗೆ ಗೊತ್ತಿದೆ. ಅವರು ಯಾವುದೇ ಪಕ್ಷದಲ್ಲಿರಲಿ ಸ್ವತಂತ್ರ ರಾಜಕಾರಣವನ್ನು ಮಾಡುತ್ತಾರೆ. ಅವರ ಮನಸ್ಸಿಗೆ ಬಂದಂಗೆ ಮಾಡುತ್ತಾರೆ. ಅವರದ್ದೇ ಆದ ವಿಶ್ಲೇಷಣೆಯಲ್ಲಿ ಮಾತನಾಡುತ್ತಾರೆ ಎಂದು ಸುಬ್ರಮಣಿಮ್ ಸ್ವಾಮಿಯವರ ನಡುವಳಿಕೆ ಹಾಗೂ ಸ್ವಾಭಾದ ಬಗ್ಗೆ ಬೊಮ್ಮಾಯಿ ಮಾತನಾಡಿದ್ದರು.

ಇದಕ್ಕೆ ಪ್ರತಿಯಾಗಿ ಇಂದು ಸಂಸದ ಸುಬ್ಮಣಿಯನ್ನ ಟ್ವೀಟ್ ಮಾಡಿದ್ಧಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights