ಕೊರೊನಾ ವೈರಸ್ಸನ್ನು ‘ತಟಸ್ಥಗೊಳಿಸಬಲ್ಲ’ ಪ್ರತಿಕಾಯವನ್ನು ಯಶಸ್ವಿಯಾಗಿ ಪ್ರತ್ಯೇಕಿಸಿದ ಇಸ್ರೇಲ್!
ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದ್ದು, ಬೇರೇ ಬೇರೆ ದೇಶಗಳು ಕೋವಿಡ್-19 ವಿರುದ್ಧ ಔಷಧಿ ಕಂಡುಹಿಡಿಯಲು ಪ್ರಯತ್ನಗಳನ್ನು ನಡೆಸಿವೆ. ಈ ಪೈಕಿ ಇಸ್ರೆಲ್ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಹೌದು… ರೋಗಿಯ ದೇಹದಲ್ಲಿನ ಕೊರೊನಾ ವೈರಸ್ ಅನ್ನು ಸಮತೋಲನಗೊಳಿಸಬಲ್ಲ ಪ್ರತಿಕಾಯವನ್ನು ಯಶಸ್ವಿಯಾಗಿ ಪ್ರತ್ಯೇಕಿಸುವಲ್ಲಿ ಇಸ್ರೇಲ್ ಯಶಸ್ವಿಯಾಗಿದೆ. ಸೋಮವಾರ( ಮೇ 4) ರಂದು ಇಸ್ರೇಲ್ನ ರಕ್ಷಣಾ ಮಂತ್ರಿ ಮಾತನಾಡಿ, ಮೊನೊಕ್ಲೋನಲ್ ತಟಸ್ಥಗೊಳಿಸುವ ಪ್ರತಿಕಾಯ ವಾಹಕಗಳು ದೇಹದೊಳಗೆ COVID-19 ಅನ್ನು ತಟಸ್ಥಗೊಳಿಸುತ್ತದೆ ಎಂದು ಹೇಳಿರುವ ವಿಚಾರದ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಹೇಗೆ ಕೆಲಸ ಮಾಡುತ್ತೆ?
ಈ ಮೊನೊ ಕ್ಲೋನಲ್ ಆಂಟಿಬಾಡೀಸ್ ಸೋಂಕು ಪೀಡಿತರ ದೇಹದೊಳಗಿರುವ ವೈರಸ್ ನಿರ್ಮೂಲನೆ ಮಾಡುತ್ತದೆ ಅಥವಾ ಕೆಲಸ ಮಾಡದಂತೆ ತಟಸ್ಥಗೊಳಿಸುತ್ತದೆ. ಇದರಿಂದಾಗಿ ಸೋಂಕು ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ. ವಿಶ್ವಾದ್ಯಂತ ಇರುವ ವಿವಿಧ ಕಂಪನಿಗಳ ಜೊತೆ ಈ ಪ್ರತಿಕಾಯಗಳ ಉತ್ಪಾದನೆ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ನಫ್ತಾಲಿ ಬೆನೆಟ್ ಹೇಳಿದ್ದಾರೆ.
“ರಕ್ಷಣಾ ಸಚಿವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ , ತಾವು ಇಸ್ರೇಲ್ ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಗೆ ಭೇಟಿ ನೀಡಿದಾಗ, ಕೊರೊನ ವೈರಸ್ ಅನ್ನು ಎದುರಿಸುವ ದಿಕ್ಕಿನಲ್ಲಿ ಈ ಹೊಸ ಬೆಳವಣಿಗೆಯ ಬಗ್ಗೆ ತಿಳಿಸಲಾಯಿತು” ಎಂದಿದ್ದಾರೆ. ಜೊತೆಗೆ ಐಐಬಿಆರ್ ನಿರ್ದೇಶಕ ಶ್ಮುಯೆಲ್ ಶಪೀರಾ ಅವರು ಉಲ್ಲೇಖಿಸಿದ ಈ ಸೂತ್ರವನ್ನು ಪೇಟೆಂಟ್ ಮಾಡಲಾಗುತ್ತಿದೆ. ಅದನ್ನು ಸಾಮೂಹಿಕವಾಗಿ ಉತ್ಪಾದಿಸಲು ಅಂತರರಾಷ್ಟ್ರೀಯ ತಯಾರಕರನ್ನು ಸಂಪರ್ಕಿಸಲಾಗುತ್ತದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, “ಈ ಅದ್ಭುತ ಪ್ರಗತಿಗಾಗಿ ನಾನು ಸಂಸ್ಥೆಯ ಸಿಬ್ಬಂದಿಯ ಬಗ್ಗೆ ಹೆಮ್ಮೆಪಡುತ್ತೇನೆ. ಅವರ ಸೃಜನಶೀಲತೆ ಮತ್ತು ಈ ಅದ್ಭುತ ಸಾಧನೆಯನ್ನು ಅಭಿನಂದಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.
ಕೊರೊನಾ ವೈರಸ್ಗೆ ಚಿಕಿತ್ಸೆ ಮತ್ತು ಲಸಿಕೆ ಹುಡುಕುವ ಇಸ್ರೇಲಿ ಪ್ರಯತ್ನಗಳಿಗೆ ಐಐಬಿಆರ್ ಮುಂದಾಗಿದೆ. COVID-19 ನಿಂದ ಚೇತರಿಸಿಕೊಂಡ ಜನರಿಂದ ಪ್ಲಾಸ್ಮಾ ಸಂಗ್ರಹಿಸುವಲ್ಲಿ ಈ ಸಂಸ್ಥೆ ತೊಡಗಿಸಿಕೊಂಡಿದೆ.

