Bigg Boss : ಮೊಟ್ಟೆ ಹಿಡಿಯಲು ಹೋಗಿ ಮತ್ತೆ ಮತ್ತೆ ಬಿದ್ದ ಲ್ಯಾಗ್ ಮಂಜಾ!

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಲ್ಯಾಗ್ ಮಂಜನದ್ದೇ ಕಾಮಿಡಿ. ಲ್ಯಾಗ್ ಮಂಜಾ ಒಂದು ನಿಮಿಷ ಮಾತನಾಡಿಲ್ಲಾ ಅಂದರೂ ಹುಡುಕಿಕೊಂಡು ಹೋಗಿ ಮಾತು ಕೇಳಿ ನಗುವಷ್ಟು ಸ್ಪರ್ಧಿಗಳು ಫ್ಯಾನ್ಸ್ ಆಗಿ ಹೋಗಿದ್ದಾರೆ.

ಇನ್ನೂ ಟಾಸ್ಕ್ ವಿಚಾರದಲ್ಲೂ ಮಾಸ್, ನಿರ್ಧಾರದಲ್ಲೂ ಮಾಸ್ ಆಗಿರುವ ಲ್ಯಾಗ್ ಮಂಜಾ ಮನೆ ಸ್ಪರ್ಧಿಗಳ ನೆಚ್ಚಿನ ಸ್ಪರ್ಧಿಯಾಗಿದ್ದಾನೆ. ಟಾಸ್ಕ್ ವಿಚಾರದಲ್ಲೂ ಮಂಜನದ್ದು ಆಟದ ಜೊತೆಗೆ ಕಾಮಿಡಿ ಕೂಡ ಸಖತ್ತಾಗಿರುತ್ತೆ. ಹೀಗಾಗಿ ಈ ಬಾರಿ ಲ್ಯಾಗ್ ಮಂಜ ಬಿಗ್ ಬಾಸ್ ಮನೆಯಿಂದ ಭಾರೀ ಸದ್ದು ಮಾಡುತ್ತಿದ್ದಾನೆ.

ನಿನ್ನೆ ನೀಡಿದ ಜೋಡಿ ಆಟದಲ್ಲಿ ಲ್ಯಾಗ್ ಮಂಜ ಮೊಟ್ಟೆ ಹಿಡಿಯಬೇಕಾಗಿತ್ತು. ಆದರೆ ಮೊಟ್ಟೆ ಹೆಚ್ಚಾಗಿ ಹಿಡಿಯದೇ ಹೋದರೂ ಲ್ಯಾಗ್ ಮಂಜಾ ಬಿದ್ದಿದ್ದೇ ಹೆಚ್ಚು. ಮೊಟ್ಟೆ ಹಿಡಿಯಲು ಹೋಗಿ ಮತ್ತೆ ಮತ್ತೆ ಬೀಳುತ್ತಿದ್ದ ಮಂಜನನ್ನು ನೋಡಿ ಸ್ಪರ್ಧಿಗಳು ಮಾತ್ರವಲ್ಲ ಬಿಗ್ ಬಾಸ್ ವೀಕ್ಷಕರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಸಿಕ್ಕ ಕೆಲ ಮೊಟ್ಟೆಗಳನ್ನು ಜೋಬಿನಲ್ಲಿ ಇಟ್ಟುಕೊಳ್ಳುತ್ತದ್ದ ಮಂಜ ಕೆಳಗೆ ಬೀಳುತ್ತಿದ್ದ. ಹೀಗಾಗಿ ಮೊಟ್ಟೆಗಳು ಹಿಡಿದಾದರೂ ಒಡೆಯುತ್ತಿದ್ದವು. ಈ ಸಮಯದಲ್ಲಿ ಮನೆಯ ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರೂ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ.

ಟಾಸ್ಕ್ ನಲ್ಲಿ ಸೀರೆಸ್ ಆಟ ಆಡುತ್ತಲೇ ಮಂಜನ ಕಾಮಿಡಿ ನೋಡುಗರಿಗೆ ಖುಷಿ ಕೊಡುತ್ತಿದೆ. ಆದರೆ ಮನೆಯಲ್ಲಿ ಮನಸ್ತಾಪಗಳು ಧ್ವೇಷಗಳು ಈಗಿನ್ನು ಆರಂಭದ ಹಂತದಲ್ಲಿ ಚಿಗುರೊಡೆಯುತ್ತಿವೆ. ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಗೇಟ್ ಪಾಸ್ ಆಗಿದ್ದು ಉಳಿದಂತೆ 15 ಜನರ ಪೈಕಿ ಕ್ಯಾಪ್ಟನ್ ಹೊರತುಪಡಿಸಿ ಎಲ್ಲರೂ ಜೋಡಿ ಆಟದಲ್ಲಿ ಸ್ಪರ್ದೆಗಿಳಿದಿದ್ದಾರೆ.

ಮುಂದಿನ ದಿನಗಳಲ್ಲಿ ಹೀಗೆ ಮನೆ ಸ್ಪರ್ಧಿಗಳು ಖುಷಿಯಾಗಿ ಇರ್ತಾರಾ? ಅಥವಾ ಪರಸ್ಪರ ದ್ವೇಷ ಹುಟ್ಟಿಸಿಕೊಳ್ಳುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights