ಗಣೇಶೋತ್ಸವಕ್ಕೆ 5 ದಿನ ಅಲ್ಲ 3 ದಿನ ಮಾತ್ರ ಅವಕಾಶ : ಬಿಬಿಎಂಪಿಯಿಂದ ಮಹತ್ವದ ನಿರ್ಧಾರ!

ಗಣೇಶೋತ್ಸವಕ್ಕೆ 5 ದಿನ ಅಲ್ಲ 3 ದಿನ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೌರವ್ ಗುಪ್ತ, ” ರಾಜ್ಯದಲ್ಲಿ ನೆರೆಯ ರಾಜ್ಯದಿಂದ ನಿಫಾ ಕಾಯಿಲೆ ಹರಡುವ ಆತಂಕ ಹೆಚ್ಚಾಗಿದ್ದು, ಕೊರೊನಾ ಹರಡುವುದನ್ನ ತಡೆಗಟ್ಟಲು ಗಣೇಶೋತ್ಸವಕ್ಕೆ 5 ದಿನ ಅಲ್ಲ 3 ದಿನ ಮಾತ್ರ ಅವಕಾಶ ನೀಡಲಾಗುತ್ತದೆ” ಎಂದಿದ್ದಾರೆ.

ಈ ಹಿಂದೆ ಸರ್ಕಾರ ಗಣೇಶೋತ್ಸವಕ್ಕೆ 5 ದಿನ ಅನುಮತಿ ನೀಡಿತ್ತು. ಆದ್ರಿಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ” ಗಣೇಶನನ್ನು ಕೂರಿಸಲು 5 ದಿನವಲ್ಲ 3 ದಿನ ಮಾತ್ರ ಅವಕಾಶವಿದೆ” ಎಂದಿದ್ದಾರೆ.

ಇನ್ನುಳಿದಂತೆ ಗಣೇಶ ಹಬ್ಬವನ್ನು ಆಚರಿಸುವವರು ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಅನುಸರಿಬೇಕು. ಪ್ರತೀ ಮನೆಯಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡಲು ಅವಕಾಶವಿದೆ. ಆದರೆ 1 ವಾರ್ಡ್ ಗೆ ಒಂದು ಗಣೇಶ ಮಾತ್ರ ಇಡಬೇಕು. ಆಯೋಜಕರು ಕೊರೊನಾ 2 ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಪೆಂಡಾಲ್ ಒಳಗೆ 20 ಜನ ಮಾತ್ರ ಇರಬೇಕು. ಡಿಜೆ, ಸಂಗೀತ, ಯಾವುದೇ ಕಾರ್ಯಕ್ರಮ ಹಾಗೂ ಮನರಂಜನೆ ಗೆ ಅವಕಾಶ ಇರುವುದಿಲ್ಲ. 4 ಅಡಿ ಎತ್ತರದ ಗಣೇಶ ಮೂರ್ತಿ ಮಾತ್ರ ಪ್ರತಿಷ್ಠಾಪನೆ ಮಾಡಬೇಕೆಂದು ಸರ್ಕಾರ ತನ್ನ ಕೊರೊನಾ ಮಾರ್ಗಸೂಚಿಸಿಯಲ್ಲಿ ತಿಳಿಸಿದೆ.

ಜೊತೆಗೆ ಗಣೇಶ ಮೂರ್ತಿಯನ್ನು ಮನೆಯಲ್ಲಿ ವಿಸರ್ಜನೆ ಮಾಡಬೇಕು. ಇಲ್ಲವಾದರೆ ಬಿಬಿಎಂಪಿ ಸೂಚಿಸಿದ ಕೃತಕ ವಿಸರ್ಜನಾ ಕೇಂದ್ರಗಳಲ್ಲಿ ವಿಸರ್ಜನೆ ಮಾಡಲು ಆದೇಶಿಸಲಾಗಿದೆ. ವಾರ್ಡ್ ಗಳಲ್ಲಿ ಗಣೇಶನನ್ನು ಕೂರಿಸುವವರಿಗೆ ಬಿಬಿಎಂಪಿ ಹಾಗೂ ಪೊಲೀಸರಿಂದ ಒಪ್ಪಿಗೆ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.