ಕಾಬೂಲ್ ನಲ್ಲಿ ತಾಲಿಬಾನಿಗಳಿಂದ ಹಿಂಸಾಚಾರ : ಪ್ರತಿಭಟನಾ ನಿರತ ಮಹಿಳೆಯರ ಮೇಲೆ ಫೈರಿಂಗ್!

ಪ್ರತಿಭಟನಾನಿರತ ಆಫ್ಘಾನಿಸ್ತಾನರ ಮೇಲೆ ತಾಲಿಬಾನಿಗಳು ಗುಂಡು ಹಾರಿಸಿದ್ದಾರೆ.

ಪಾಕಿಸ್ತಾನದ ವಿರೋಧಿ ರ್ಯಾಲಿಯಲ್ಲಿ ಇಂದು ನೂರಾರು ಅಫ್ಘಾನಿಸ್ತಾನಗಳು, ಹೆಚ್ಚಾಗಿ ಮಹಿಳೆಯರು ಕಾಬೂಲ್ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅವರು ಇಸ್ಲಾಮಾಬಾದ್ ಮತ್ತು ಐಎಸ್ಐ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ತಾಲಿಬಾನಿಗಳು ರ್ಯಾಲಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಕಾಬೂಲ್ ನ ರಾಯಬಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರ ಮೇಲೆ ತಾಲಿಬಾನ್ ಗುಂಡಿನ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಸ್ಥಳೀಯ ಮಾಧ್ಯಮ ವರದಿಗಳು ಹಂಚಿಕೊಂಡ ವೀಡಿಯೋಗಳಲ್ಲಿ ನೂರಾರು ಅಫಘಾನ್ ಪುರುಷರು ಮತ್ತು ಮಹಿಳೆಯರು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಜೊತೆಗೆ ಕಾಬೂಲ್ ಬೀದಿಗಳಲ್ಲಿ ಫಲಕಗಳನ್ನು ತೋರಿಸಿರುವ ದೃಶ್ಯಗಳಿವೆ.

ನಿಕಾಬ್ ಮತ್ತು ಬುರ್ಖಾ ಧರಿಸಿದ ಮಹಿಳೆಯರು ಕಾಬೂಲ್ ಬೀದಿಗಳಲ್ಲಿ “ಆಜಾದಿ, ಆಜಾದಿ” ಮತ್ತು “ಪಾಕಿಸ್ತಾನಕ್ಕೆ ಸಾವು”, “ಐಎಸ್ಐಗೆ ಸಾವು” ಎಂದು ಘೋಷಣೆಗಳನ್ನು ಕೂಗಿದ್ದೇ ತಾಲಿಬಾನಿಗಳನ್ನು ಕೆರಳಿಸಿದೆ.

ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಲು ಪಾಕಿಸ್ತಾನವು ತಾಲಿಬಾನ್ ನ ಪ್ರಬಲ ಬೆಂಬಲವಾಗಿದೆ. ತಾಲಿಬಾನ್ ಪಾಕಿಸ್ತಾನವನ್ನು ತಮ್ಮ “ಎರಡನೇ ಮನೆ” ಎಂದು ಕರೆದಿದೆ ಮತ್ತು ಶೀಘ್ರದಲ್ಲೇ ಸರ್ಕಾರ ರಚನೆ ಸಮಾರಂಭಕ್ಕೆ ದೇಶವನ್ನು ಆಹ್ವಾನಿಸಲಾಗುವುದು ಎಂದು ಹೇಳಿಕೊಂಡಿದೆ.

ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನವು ಹೊಸ ತಾಲಿಬಾನ್ ಆಡಳಿತಕ್ಕೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಅನೇಕ ತಾಲಿಬಾನ್ಗಳು ತಮ್ಮ ಕುಟುಂಬಗಳನ್ನು ಹೊಂದಿದ್ದಾರೆ, ಮಕ್ಕಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

“ನಾವು ತಾಲಿಬಾನ್ ನಾಯಕರ ಪಾಲಕರು. ನಾವು ಅವರನ್ನು ದೀರ್ಘಕಾಲ ನೋಡಿಕೊಂಡಿದ್ದೇವೆ. ತಾಲಿಬಾನ್ ಗಳು ಪಾಕಿಸ್ತಾನದಲ್ಲಿ ಆಶ್ರಯ, ಶಿಕ್ಷಣ ಮತ್ತು ಮನೆ ಪಡೆದವರು. ನಾವು ಅವರಿಗಾಗಿ ಎಲ್ಲವನ್ನೂ ಮಾಡಿದ್ದೇವೆ ಎಂದು ಪಾಕಿಸ್ತಾನ ಘೋಷಿಸಿದೆ.

ಹೀಗಾಗಿ ಆಫ್ಘಾನಿಸ್ತಾನಿಗಳು ಪಾಕಿಸ್ತಾನ್ ಹಾಗೂ ತಾಲಿಬಾನಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights