ಕೃಷಿ ಕಾಯ್ದೆಗಳು: ಸರ್ಕಾರ ಮತ್ತು ರೈತರ ನಡುವಿನ ಮಾತುಕತೆ ವಿಫಲ; ಮುಂದುವರಿದ ಹೋರಾಟ

ಹೋರಾಟ ನಿರತ ರೈತ ಮುಖಂಡರೊಂದಿಗೆ ಮೂವರು ಕೇಂದ್ರ ಸಚಿವರು ನಡೆಸಿದೆ ಮಾತುಕತೆ ಮುರಿದುಬಿದ್ದಿದೆ. ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ರೈತ ಮುಖಂಡರು ತಿರಸ್ಕರಿಸಿದ್ದಾರೆ. ಪ್ರತಿಭಟನೆಯನ್ನು ಮುಂದುವೆರೆಸಿದ್ದಾರೆ.

ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣ ಹಿಂಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು ಎಂಬ ರೈತರ ಹಕ್ಕೊತ್ತಾಯಕ್ಕೆ ಕೇಂದ್ರ ಸರ್ಕಾರ ಒಪ್ಪಿಲ್ಲ. ಬದಲಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಎಪಿಎಂಸಿ ಮಂಡಿಗಳ ಬಗೆಗಿನ ಕಳವಳವನ್ನು ಹೋಗಲಾಡಿಸಲು ಪ್ರಯತ್ನಿಸುವುದಾಗಿ ಕೇಂದ್ರದ ಪರ ಸಚಿವರು ಹೇಳಿದ್ದಾರೆ. ಇದನ್ನು ತಿರಸ್ಕರಿಸಿರುವ ರೈತರು ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಕೃಷಿ ಸಚಿವ ನರೇಂದ್ರ ತೋಮರ್, ಪಿಯೂಷ್ ಗೋಯಲ್ ಮತ್ತು ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಅವರು 35 ಸದಸ್ಯರ ರೈತರ ತಂಡದೊಂದಿಗೆ ಇಂದು ಮಧ್ಯಾಹ್ನ 3 ಗಂಟೆಯಿಂದ ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಯುತ್ತಿದೆ.

ದೆಹಲಿ ಚಲೋದ ಏಳು ಸದಸ್ಯರ ರೈತರ ಸಮಿತಿಯ ಭಾಗವಾಗಿದ್ದ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರು ಇಂದಿನ ಮಾತುಕತೆಗೆ ಹಾಜರಾಗುವ ಬಗ್ಗೆ ಕೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅವರು ಸರ್ಕಾರದ ಮಾತುಕತೆಯಿಂದ ಹಿಂದೆ ಸರಿದಿದ್ದರು. ರಾಜಕೀಯ ಕಾರ್ಯಕರ್ತರು ಇರಬಾರದು ಎಂದು ಕೇಂದ್ರ ಹೇಳುತ್ತಿದೆ. ನನ್ನಿಂದ ಅಡ್ಡಿಯಾಗುವುದ ಬೇಡ, ಮಾತುಕತೆ ಮುಂದುವರಿಯಬೇಕು ಎಂದು ಯಾದವ್ ಹೇಳಿದ್ದಾರೆ.

ಇದು ಕೇಂದ್ರ ಸರ್ಕಾರದೊಂದಿಗೆ ರೈತರ ಮೂರನೇ ಮಾತುಕತೆಯಾಗಿದೆ. ಕಳೆದೆರೆಡು ಮಾತುಕತೆಗಳು ವಿಫಲಗೊಂಡಿದ್ದವು. ಇಂದಿನ ಸಭೆ ಮುಂದುವರೆಯುತ್ತಿದ್ದರು ಇದು ಸಹ ವಿಫಲವಾಗುವ ಸಂಭವವಿದೆ.

ಸರ್ಕಾರದ ಮುಖಂಡರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಮುಂದುವರಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಮಸೂದೆಯಲ್ಲಿ ಸೇರಿಸುವಲ್ಲಿ ಏನು ಸಮಸ್ಯೆ? ಎಂದು ಜನನಾಯಕ್ ಜನತಾ ಪಕ್ಷದ(ಜೆಜೆಪಿ) ಸಂಸ್ಥಾಪಕ ಅಜಯ್ ಚೌತಲಾ ಪ್ರಶ್ನಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳಿಗೆ ಗುರುವಾರದೊಳಗೆ ಸರ್ಕಾರ ಒಪ್ಪದಿದ್ದರೆ ಮಹಾರಾಷ್ಟ್ರದಿಂದ ದೆಹಲಿಗೆ ಮೆರವಣಿಗೆ ಪ್ರಾರಂಭಿಸುವುದಾಗಿ ಮಹಾರಾಷ್ಟ್ರ ರೈತ ಗುಂಪುಗಳು ಕೇಂದ್ರಕ್ಕೆ ಎಚ್ಚರಿಕೆ ನೀಡಿವೆ.


ಇದನ್ನೂ ಓದಿ: ಎಂಎಸ್​ಪಿ ಎಂದರೇನು? ಕೇಂದ್ರದ ವಿರುದ್ಧ ರೈತರ ಆಕ್ರೋಶಕ್ಕೆ ಕಾರಣವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights