ರೈತ ಪ್ರತಿಭಟನೆ: ಬೀದಿಯಲ್ಲಿ ರಕ್ತಪಾತವನ್ನು ತಪ್ಪಿಸಲು, ಮೋದಿ ಸರ್ಕಾರ ಸಂಸತ್ತಿನಲ್ಲಿ ಬೆವರು ಸುರಿಸಬೇಕು

ಸುಸಂಸ್ಕೃತ, ಸಾಂವಿಧಾನಿಕ ರಾಜಕಾರಣದ ಒಂದು ಪಾಠವೆಂದರೆ, ನೀವು ಸಂಸತ್ತಿನಲ್ಲಿ ಹೆಚ್ಚು ಬೆವರು ಸುರಿಸುತ್ತೀರಿ,  ನೀವು ಬೀದಿಯಲ್ಲಿ ರಕ್ತಪಾತವಾಗುವುದನ್ನು ಕಡಿಮೆ ಮಾಡುತ್ತೀರಿ ಎಂಬುದು. ಆದರೆ, ಇಂದಿನ ಸರ್ಕಾರ ಅದಕ್ಕೆ ತದ್ವಿರುದ್ಧವಾಗಿದೆ. ನರೇಂದ್ರ ಮೋದಿ ಸರ್ಕಾರವು ರೈತರ ಅಶಾಂತಿ ಮತ್ತು ಪ್ರತಿಭಟನೆಗಳನ್ನು ತಪ್ಪಿಸಬಹುದಿತ್ತು. ಅದು ವಿಶಾಲ ಸಾಮಾಜಿಕ ಸಮಾಲೋಚನೆ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದ್ದರೆ ಮತ್ತು ಸಂಸತ್ತಿನ ಪ್ರಕ್ರಿಯೆಯ ಮೂಲಕ ಕೃಷಿ ಮಸೂದೆಗಳನ್ನು ಜಾರಿಗೊಳಿಸಲು ಸಮಯ ತೆಗೆದುಕೊಂಡಿದ್ದರೆ ಅದು ಸಾಧ್ಯವಾಗುತ್ತಿತ್ತು.

ಹಲವಾರು ರೈತರ ಸಂಘಗಳು ಮತ್ತು ನಾಗರಿಕ ಸಮಾಜ ಗುಂಪುಗಳು ಕೃಷಿ ನೀತಿಯ ಬದಲಾವಣೆಗಳು ಮತ್ತು ಮಧ್ಯವರ್ತಿಗಳ ಲಾಬಿಗಳ ವಿರುದ್ಧ ಧ್ವನಿ ಎತ್ತಿದ್ದವು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮಸೂದೆಗಳನ್ನು ವಿರೋಧಿಸುತ್ತಿದ್ದವು. ಆದರೆ ಭಾರತೀಯ ಜನತಾ ಪಕ್ಷವು ಮಾಧ್ಯಮಗಳಲ್ಲಿ ಮತ್ತು ಭಾರತೀಯ ಜನಸಂಖ್ಯೆಯಲ್ಲಿ ಬೆಂಬಲಿಗರ ಕೊರತೆಯಿಲ್ಲದ ಕಾರಣ ಅಥವಾ ಮೋದಿ ಸರ್ಕಾರದ ಸುಧಾರಣಾ ಪ್ರಸ್ತಾಪಗಳು ವಿಫಲವಾಗಲು ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೆ ಸ್ಥಾನಗಳಿಲ್ಲದ ಕಾರಣ ಸರ್ವಾಧಿಕಾರಿ ಧೋರಣೆಯಲ್ಲಿ ಕೃಷಿ ನೀತಿಗಳನ್ನು ದೇಶದ ಮೇಲೆ ಹೇರಿತು. ಇದಕ್ಕೆ ಜನರು ಉಘೇ ಎನ್ನುತ್ತಾರೆ. ತಮ್ಮ ಸುಳ್ಳು-ಪೊಳ್ಳು ಭಾವೋದ್ವೇಗದ ಭಾಷಣಗಳಿಂದ ರೈತರನ್ನು ಸೆಳೆಯಬಹುದು ಎಂಬ ಭ್ರಮೆಯಲ್ಲಿ ಬಿಜೆಪಿ ಇದ್ದಿತು. ಆದರೆ, ಈಗ ಅದು ರೈತ ಪ್ರತಿಭಟನೆಗಳ ಮೂಲಕ ರಸ್ತೆಯಲ್ಲಿ ವಿಫಲವಾಗಿದೆ.

ಇದನ್ನೂ ಓದಿ: ಕೊರೆವ ಚಳಿಯಲಿ ರೈತರು; ದೇವ್ ದೀಪಾವಳಿಯಲ್ಲಿ ಮೋದಿ; ನಮೋ-ನಮೋ ಎನ್ನುತ್ತಿವೆ ಮಾಧ್ಯಮಗಳು!

ನರೇಂದ್ರ ಮೋದಿ ಸರ್ಕಾರದ ಕೃಷಿ ಸುಧಾರಣೆಗಳ ಪ್ಯಾಕೇಜ್‌, ರಾಜಕೀಯ ಆರ್ಥಿಕತೆಯಿಂದ ರೈತರನ್ನು ದೂರ ಇಡುವ ಉದ್ದೇಶದೊಂದಿಗೆ ಹೊರಟ್ಟಿತ್ತು. ಆದರೆ, ಅದು ಈಗ ಸಿಕ್ಕಿಬಿದ್ದಿದೆ. ಅವರ ಕೃಷಿ ಕ್ಷೇತ್ರದ ಬದಲಾವಣೆ ಮತ್ತು ರಕ್ಷಣೆಯ ಹೆಸರಿನಲ್ಲಿ ಗುತ್ತಿಗೆ ಕೃಷಿಗೆ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ಇದಕ್ಕೆ ಕಾನೂನು ಮತ್ತು ಆಡಳಿತಾತ್ಮಕ ಆಧಾರವನ್ನು ಒದಗಿಸುತ್ತಿದ್ದಾರೆ. ಧೀರ್ಘಕಾಲದಿಂದ ರೈತರ ಅನುಭವಿಸುತ್ತಿರುವ ಯಾತನೆ, ಸಂಕಷ್ಟವನ್ನು ಬಳಸಿಕೊಂಡು ಬದಲಾವಣೆಯ ಹೆಸರಿನಲ್ಲಿ ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಭಾರತೀಯ ರೈತರು ಸಿಕ್ಕಿಹಾಕಿಕೊಂಡ ವ್ಯವಸ್ಥಿತ ಸಂಕೋಲೆಗಳನ್ನು ಮುರಿಯಬೇಕಾಗಿದೆ ಎಂದು ಅರಿವಾಗಿದೆ.

ಸಮಾಲೋಚನೆಗಳ ಅಗತ್ಯ

ಉದ್ದೇಶಪೂರ್ವಕವಾಗಿ ಪ್ರಜಾಪ್ರಭುತ್ವದ ಹಂತಗಳನ್ನು ನಿರ್ಲಕ್ಷಿಸುವುದರ ಪರಿಣಾಮವೆಂದರೆ, ನೀತಿವಾದವು ಅರ್ಥಶಾಸ್ತ್ರದ ಬದಲು ಭಾವನೆಗಳ ಮೂಲಕ ಹೊರಹೊಮ್ಮುತ್ತದೆ. ಇದು ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ತೋರಿಸಿದಂತೆ, ಭಾರತದಲ್ಲಿ ಕೃಷಿಯನ್ನು ಯಾವಾಗಲೂ ಭಾವನಾತ್ಮಕ, ನೈತಿಕ ದೃಷ್ಟಿಯಿಂದ ಕೂಡಿಸಲಾಗುತ್ತದೆ. ಎಂಜಿನಿಯರ್‌ಗಳು, ಆಟೋರಿಕ್ಷಾ ಚಾಲಕರು ಅಥವಾ ಅಂಚೆ ನೌಕರರಂತಲ್ಲದೆ, ರೈತರು ವಿಭಿನ್ನ ಮತ್ತು ಹೆಚ್ಚು ಸಾಮಾಜಿಕವಾಗಿ ಅಮೂಲ್ಯವಾದ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬ ಅಭಿಪ್ರಾಯವನ್ನು ಹೆಚ್ಚಿನ ಜನರು ಒಪ್ಪುತ್ತಾರೆ. ಇದರರ್ಥ ನಮ್ಮ ಆರ್ಥಿಕ ಭಾವನೆಗಳನ್ನು ಆಕರ್ಷಿಸದ ಕಾರಣ ಉತ್ತಮ ಆರ್ಥಿಕ ವಾದಗಳು ಸಹ ರೈತರ ವಿಚಾರದಲ್ಲಿ ಅಪಹಾಸ್ಯಕ್ಕೊಳಗಾಗುತ್ತವೆ. ಅದೇ ಸಮಯದಲ್ಲಿ, ಪಿಎಂ ಮೋದಿ ಮತ್ತು ಬಿಜೆಪಿಗೆ ಹೆಚ್ಚಿನ ಜನ ಬೆಂಬಲವು ಸಹ ಭಾವನಾತ್ಮಕ ಆಧಾರದ ಮೇಲೆ ಆಧಾರಿತವಾಗಿದೆ. ಆದ್ದರಿಂದ, ನಾವು ಭಾವನೆಗಳ ಘರ್ಷಣೆಯೊಂದಿಗೆ ಸುತ್ತುವರಿದಿದ್ದೇವೆ. ದುರದೃಷ್ಟವಶಾತ್, ಭಾವನಾವಾದವು ಭಾರತೀಯ ಕೃಷಿಯ ಭವಿಷ್ಯದ ಮುಖ್ಯವಾದ ಸಮಸ್ಯೆಯನ್ನು ಬಗೆಹರಿಸುವ ಅತ್ಯುತ್ತಮ ಮಾರ್ಗವಲ್ಲ.

ರೈತರ ಸಂಘಗಳು ಬೇಡಿಕೆಯಿಡುವುದು – ಪರಿಹಾರ. ಪರಿಹಾರ ಮತ್ತು ಖಾತರಿಪಡಿಸುವ ಕನಿಷ್ಟ ಬೆಲೆಗಳು – ಸಮಂಜಸವಾದವು ಮಾತ್ರವಲ್ಲದೆ ಸುಧಾರಣೆಗಳ ಒಟ್ಟಾರೆ ಮಾರ್ಗಕ್ಕೆ ಹೊಂದಿಕೆಯಾಗುವುದಿಲ್ಲ. ಭಾರತೀಯ ರೈತರ ನೈಜ ಆತಂಕಗಳು ಮತ್ತು ಅನುಮಾನಗಳನ್ನು ಗಣನೀಯವಾಗಿ ಪರಿಹರಿಸಲು ಮೋದಿ ಸರ್ಕಾರವು ನಿಜವಾದ ಪ್ರಯತ್ನವನ್ನು ಮಾಡಬೇಕು. ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳು ಯಶಸ್ವಿಯಾಗಲು, ರೈತರ ಕುಂದುಕೊರತೆಗಳ ನ್ಯಾಯಸಮ್ಮತತೆ ಮತ್ತು ಅವರ ಬೇಡಿಕೆಗಳ ಪ್ರಾಮಾಣಿಕತೆ ಎರಡನ್ನೂ ಒಪ್ಪಿಕೊಳ್ಳುವುದು ಅವಶ್ಯಕ.


ಇದನ್ನೂ ಓದಿ: ಎಂಎಸ್​ಪಿ ಎಂದರೇನು? ಕೇಂದ್ರದ ವಿರುದ್ಧ ರೈತರ ಆಕ್ರೋಶಕ್ಕೆ ಕಾರಣವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights