Lock down : Publicity ಗಾಗಿ ಸೆಲೆಬ್ರಿಟಿಗಳ ಮೊರೆಹೊದ ಸಚಿವ ಸುಧಾಕರ್…!

ರಾಜ್ಯದಲ್ಲಿ ಲಾಕ್‌ಡೌನ್ ಪರಿಣಾಮಗಳ ಬಗ್ಗೆ ವೈದ್ಯ ಶಿಕ್ಷಣ ಸಚಿವ ಸುಧಾಕರ್ ಅವರು ಕ್ರೀಡೆ ಮತ್ತು ಚಿತ್ರರಂಗದ ಗಣ್ಯರ ಜೊತೆ ವಿಡಿಯೊ ಸಂವಾದ ನಡೆಸಿದರು. ಎರಡು ತಾಸುಗಳ ಕಾಲ ನಡೆದ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದ ಚಿತ್ರರಂಗ ಮತ್ತು ಕ್ರೀಡಾಲೋಕದ ಗಣ್ಯರು ಸರ್ಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 

ಅಲ್ಲದೇ ಜನತೆಯ ಸುರಕ್ಷತೆ ಮತ್ತು ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಕೋವಿಡ್ – 19 ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಕೈಗೊಳ್ಳುವ ಯಾವುದೇ ಕಾರ್ಯದಲ್ಲಿ ಸಕ್ರೀಯರಾಗಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ಲಸಿಕೆ ಕಂಡುಹಿಡಿಯುವವ ತನಕ ರೋಗಾಣು ಜತೆ ಬದುಕುವುದು ಅನಿವಾರ್ಯ. ಅದಕ್ಕಾಗಿ ದೈನಂದಿನ ಚಟುವಟಿಕೆಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆಎಂದು ಸುಧಾಕರ್‍ ಅಭಿಪ್ರಾಯಪಟ್ಟರು.

ಖ್ಯಾತ ನಟರಾದ ರವಿಚಂದ್ರನ್, ಪುನಿತ್ ರಾಜ್‍ಕುಮಾರ್, ಉಪೇಂದ್ರ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಸುಮಲತಾ ಅಂಬರೀಷ್, ಸಂಗೀತ ನಿರ್ದೇಶಕರಾದ ಗುರುಕಿರಣ್, ಅರ್ಜುನ್ ಜನ್ಯ, ವಾಸುಕಿ ವೈಭವ್, ರವಿಶಂಕರ್, ನೆನಪಿರಲಿ ಪ್ರೇಮ್, ತಾರಾವೇಣು, ಶ್ರುತಿ, ರಾಗಿಣಿ ದ್ವಿವೇದಿ ಸಂವಾದದಲ್ಲಿದ್ದರು.

ಇನ್ನು ಕ್ರೀಡಾ ಕ್ಷೇತ್ರದಿಂದ ವಿಖ್ಯಾತ ಕ್ರಿಕೆಟಿಗ ಅನಿಲ್‌ ಕುಂಬ್ಳೆ, ಬಿಲಿಯರ್ಡ್ಸ್ ಪಟು ಪಂಕಜ್ ಅಡ್ವಾಣಿ ಅವರ ಜತೆ ಚರ್ಚಿಸಿ ಅವರಿಂದ ಸಲಹೆಗಳನ್ನು ಪಡೆದುಕೊಳ್ಳಲಾಯಿತು. ಒಟ್ಟಾರೆ ಕ್ರೀಡೆ ಮತ್ತು ಚಿತ್ರರಂಗದ ಗಣ್ಯರ ಜೊತೆ ಸಂವಾದ ನಡೆಸಿ ಸಚಿವರು ಭಲೆ ಭಲೆ ಅನ್ನಿಸಿಕೊಂಡರು …

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights