Fact Check: ಸಚಿನ್ ವಿರುದ್ಧ ಹೇಳಿಕೆಗಾಗಿ ಶರದ್ ಪವಾರ್ ಗೆ ಕಪಾಳಮೋಕ್ಷ?

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಹೀಗೊಬ್ಬ ವ್ಯಕ್ತಿ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ಶರದ್ ಪವಾರ್, “ಬೇರೆ ಯಾವುದೇ ಕ್ಷೇತ್ರದ ಬಗ್ಗೆ ಮಾತನಾಡುವಾಗ ಜಾಗರೂಕರಾಗಿರಿ” ಎಂದು ಹೇಳಿದ್ದಕ್ಕೆ  ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ ಎಂದು ಬರೆಯಲಾಗಿದೆ.

ವೀಡಿಯೋದ ಹಿನ್ನೆಲೆ :-

ಈ ವೀಡಿಯೋ ಇತ್ತೀಚೆಗೆ ನಡೆದ ಘಟನೆಯಲ್ಲ. 2011 ರ ನವೆಂಬರ್ 24 ರಂದು ದೆಹಲಿಯಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಪವಾರ್ ಅವರಿಗೆ 2011 ರ ನವೆಂಬರ್ 24 ರಂದು ಅಗತ್ಯ ವಸ್ತುಗಳ ಬೆಲೆ ಏರುತ್ತಿರುವ ಕಾರಣ ಅರವಿಂದರ್ ಸಿಂಗ್ ಎಂಬಾತ ಕಪಾಳಮೋಕ್ಷ ಮಾಡಿದ್ದನು.

ರಾಜಧಾನಿಯ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಕೇಂದ್ರ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಬಂಧಿಸಲ್ಪಟ್ಟ ಅರವಿಂದರ್ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಪವಾರ್ ಮೇಲೆ ಹಲ್ಲೆ ನಡೆಸಿದ್ದು “ಇದು ಭ್ರಷ್ಟ ರಾಜಕಾರಣಿಗಳಿಗೆ ನನ್ನ ಉತ್ತರ” ಎಂದು ಕೂಗಿದ್ದರು. ಈ ಹಿಂದೆ ಮಾಜಿ ಕೇಂದ್ರ ಟೆಲಿಕಾಂ ಸಚಿವ ಸುಖ್ರಾಮ್ ಅವರನ್ನು ದೆಹಲಿ ಹೈಕೋರ್ಟ್ ಆವರಣದಲ್ಲಿ ಕಪಾಳಮೋಕ್ಷ ಇದೇ ಅರವಿಂದರ್ ಮಾಡಿದ್ದನು. ವಿಚಾರಣೆಯ ವೇಳೆ ನಾಪತ್ತೆಯಾಗಿದ್ದ ಈತನಿಗೆ 2014 ರಲ್ಲಿ ದೆಹಲಿ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿತು. ಬಳಿಕ ಈತನನ್ನು 2019 ರಲ್ಲಿ ಬಂಧಿಸಲಾಯಿತು.

ಸದ್ಯ ನಡೆದಿದ್ದೇನೆ..?

ದೆಹಲಿಯ ಗಡಿಯಲ್ಲಿ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಆಂದೋಲನಕ್ಕೆ ಪಾಪ್ ಗಾಯಕ ರಿಹಾನ್ನಾ ಮತ್ತು ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ರೈತರ ಬೆಂಬಲದೊಂದಿಗೆ ಟ್ವೀಟ್ ಮಾಡಿದ ನಂತರ ಸಚಿನ್ ಮತ್ತು ಪೌರಾಣಿಕ ಗಾಯಕ ಲತಾ ಮಂಗೇಶ್ಕರ್ ಸೇರಿದಂತೆ ಅನೇಕ ಗಣ್ಯರು #IndiaTogether ಮತ್ತು #IndiaAgainstPropaganda ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಜನರನ್ನು ಒಟ್ಟುಗೂಡಿಸಿದರು.

ರೈತರ ಪ್ರತಿಭಟನೆ ಕುರಿತಂತೆ ಅಮೆರಿಕಾದ ಪಾಪ್ ತಾರೆ ರಿಹಾನ್ನಾ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಸಚಿನ್ ತೆಂಡೂಲ್ಕರ್ ಅವರು ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ,.. ಇಲ್ಲಿ ಬಾಹ್ಯವ್ಯಕ್ತಿ ಅಥವಾ ಶಕ್ತಿಗಳು ಪ್ರೇಕ್ಷಕರಾಗಬಹುದು… ಆದರೆ ಪಾತ್ರದಾರಿಗಳಲ್ಲ. ಭಾರತೀಯರಿಗೆ ಭಾರತ ಏನು ಎಂಬುದು ತಿಳಿದಿದೆ ಮತ್ತು ಭಾರತಕ್ಕಾಗಿ ಭಾರತವೇ ನಿರ್ಧರಿಸಬೇಕು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಹಲವಾರು ಸೆಲೆಬ್ರಿಟಿಗಳು ಕೈ ಜೋಡಿಸಿದ್ದರು.

ಸಚಿನ್ ತೆಂಡೂಲ್ಕರ್ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದು ಶರದ್ ಪವಾರ್ ಹೇಳಿದ್ದರು. ಹೀಗಾಗಿ ರೈತರ ಪ್ರತಿಭಟನೆ ಕುರಿತಂತೆ ವಿರೋಧವಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಂದು ಮಾತನ್ನು ಆಡಿಲ್ಲವಾದರೂ ರಾಜಕೀಯ ಮುಖಂಡರು ಮಾತ್ರ ಮಾಸ್ಟರ್ ಬ್ಲಾಸ್ಟರ್ ವಿರುದ್ಧ ಮುಗಿಬಿದ್ದಿದ್ದು ಸಚಿನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
Sachin-Sharad Pawar
ಇದೇ ಸಂದರ್ಭಕ್ಕೆ ಹೋಲಿಸಿ ಕೆಲವರು ಈ ಹಳೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಆದ್ದರಿಂದ, ಶರದ್ ಪವಾರ್ ಅವರನ್ನು ಕಪಾಳಮೋಕ್ಷ ಮಾಡಿದ ಈ ಘಟನೆ 2011 ರಲ್ಲಿ ನಡೆದಿದೆ. ಸಚಿನ್ ಬಗ್ಗೆ ಪಾವರ್ ಇತ್ತೀಚಿನ ಕಾಮೆಂಟ್‌ಗಳಿಗೂ ಈ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights