ದೆಹಲಿ ಸಿಎಂ ಕೇಜ್ರಿವಾಲ್‌ ಪುತ್ರಿಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ 34,000 ರೂ ವಂಚನೆ!

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿದಾರನಾಗಿ ಸಂಪರ್ಕಿಸಿದ ವಂಚಕನೊಬ್ಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ಅವರರಿಗೆ 34,000 ರೂ.ಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇ-ಕಾಮರ್ಸ್‌ ಫ್ಲಾಟ್‌ಫಾಂನಲ್ಲಿ ಹರ್ಷಿತಾ ಅವರು ಒಂದು ಸೋಫಾವನ್ನು ಮಾರಾಟಕ್ಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ದೆಹಲಿ ಉತ್ತರ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಹಷಿರ್ತಾ ಅವರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಸೋಫಾವನ್ನು ಮಾರಾಟಕ್ಕೆ ಇಟ್ಟಿದ್ದರು. ಅದನ್ನು ಖರೀದಿ ಮಾಡಲು ಆಸಕ್ತಿ ತೋರಿಸಿದ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿದ್ದಾರೆ. ಆ ವೇಳೆ, ಆಕೆ ಕಳುಹಿಸಿದ್ದ ಬ್ಯಾಂಕಿಂಗ್ ಖಾತೆಯ ವಿವಿರ ಸರಿಯಿದೆಯೇ ಒಂದು ಪರಿಶೀಲಿಸಲು ಕಡಿಮೆ ಹಣವನ್ನು ಆಕೆಯ ಖಾತೆಗೆ ವರ್ಗಾಯಿಸಿದ್ದಾನೆ.

ನಂತರ, ವಂಚಕ ಹರ್ಷಿತಾ ಅವರಿಗೆ ಕ್ಯೂಆರ್ ಕೋಡ್ ಕಳುಹಿಸಿ, ಅದನ್ನು ಸ್ಕ್ಯಾನ್ ಮಾಡಲು ಕೇಳಿದ್ದಾನೆ. ಇದರಿಂದಾಗಿ 20,000 ರೂಗಳನ್ನು ಆಕೆಯ ಖಾತೆಯಿಂದ ಕಡಿತವಾಗಿದೆ. ಆಕೆ ಅದರ ಬಗ್ಗೆ ಕೇಳಿದಾಗ, ತಾನು ತಪ್ಪಾಗಿ ಕೋಡ್‌ ಕಳಿಸಿರುವುದಾಗಿ ಹೇಳಿದ ಆತ ಎರಡನೇ ಬಾರಿ ಮತ್ತೊಂದು ಕೋಡ್‌ ಕಳಿಸಿದ್ದಾನೆ. ಆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದ ನಂತರ ಆಕೆಯ ಖಾತೆಯಿಂದ 14,000 ರೂ.ಗಳನ್ನು ಕಡಿತಗೊಳಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

“ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದ್ದೇವೆ. ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಶಂಕಿತನನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಾನು ದೆಹಲಿ ಸಿಎಂ ಕೇಜ್ರಿವಾಲ್‌ ಅವರ ದೊಡ್ಡ ಅಭಿಮಾನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights