ಕಾಂಗ್ರೆಸ್‌ ನಾಯಕರ ಕಾರ್ಯವೈಕರಿಗೆ ಶ್ಲಾಘನೆ; ರಾಜ್ಯಸಭೆಯಲ್ಲಿ ಕಣ್ಣೀರು ಹಾಕಿದ ಪ್ರಧಾನಿ ಮೋದಿ!

ರಾಜ್ಯಸಭೆಯಲ್ಲಿ ಸುಧೀರ್ಘ ಅವಧಿಯಲ್ಲಿ ಸದಸ್ಯರಾಗಿದ್ದ ಕಾಂಗ್ರೆಸ್‌ ಹಿರಿಯ ಮುಖಂಡ ಗುಲಾಂ ನಬೀ ಅಜಾದ್ ಅವರು ಮಂಗಳವಾರ ರಾಜ್ಯಸಭೆಯಿಂದ ನಿವೃತ್ತರಾಗಿದ್ದಾರೆ. ಈ ವೇಳೆ ಅವರ ಕಾರ್ಯವೈಕರಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿದ್ದ ನಬೀ ಅವರ ರಾಜ್ಯಸಭೆಯ ಅಧಿಕಾರವಧಿ ಅಂತ್ಯಗೊಂಡಿದ್ದು, ಮಂಗಳವಾರ ನಿವೃತ್ತಿ ಪಡೆದಿದ್ದಾರೆ. ಗುಲಾಂ ನಬೀ ಅವರ ವಿಚಾರವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿಯವರು, ಗುಲಾಂ ನಬಿ ಆಜಾದ್‌ ಕೇವಲ ತಮ್ಮ ಪಕ್ಷ ಅಥವಾ ನಾಯಕರನ್ನು ಮಾತ್ರ ನೋಡಲಿಲ್ಲ. ಅವರು ದೇಶಕ್ಕಾಗಿ, ದೇಶದ ಹಿತಕ್ಕಾಗಿ ಕೆಲಸ ಮಾಡಿದರು ಎಂದು ಹೇಳಿದ್ದಾರೆ.

ತಾವು ಗುಜರಾತ್‌ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಗುಜರಾತಿನ ಯಾತ್ರಾರ್ಥಿಗಳ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ಎರಡು ಮೂರು ಬಾರಿ ತಮಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ನೀಡಿದ್ದಲ್ಲದೇ, ಮೃತಪಟ್ಟವರ ದೇಹಗಳನ್ನು ವಾಪಾಸ್‌ ತರಲು ನಬೀ ನೆರವಾಗಿದ್ದರು ಎಂದು ಮೋದಿ ಹೇಳಿದ್ದು, ಈ ವೇಳೆ ಬಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಕೆಂಪುಕೋಟೆ ಘಟನೆಯ ರುವಾರಿ, BJP ಬೆಂಬಲಿಗ-ನಟ ದೀಪ್‌ ಸಿಧು ಅರೆಸ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights