ಮತ್ತೆ ಎಲ್‌ಪಿಜಿ ಸಿಲಿಂಡರ್‌ಗೆ 50 ರೂ ಹೆಚ್ಚಳ; ಈ ತಿಂಗಳಲ್ಲಿ 100 ರೂ ಏರಿಕೆ!

ಡಿಸೆಂಬರ್ ತಿಂಗಳಿನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಎರಡನೇ ಬಾರಿಗೆ ಹೆಚ್ಚಿಸಲಾಗಿದ್ದು, ಇಂದು (ಬುಧವಾರ) 50 ರೂಗಳಷ್ಟು ಬೆಲೆ ಹೆಚ್ಚಾಗಿದೆ.

ಅಲ್ಲದೆ, ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ಶೇಕಡಾ 6.3 ರಷ್ಟು ಏರಿಸಲಾಗಿದೆ.

ರಾಜ್ಯ ಇಂಧನ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು 14.2 ಕೆಜಿ ಸಿಲಿಂಡರ್‌ಗೆ 644 ರೂ.ಗಳಿಂದ 694 ರೂ.ಗೆ ಹೆಚ್ಚಿಸಲಾಗಿದೆ.

ಈ ತಿಂಗಳಲ್ಲಿ ಇದು ಎರಡನೇ ಹೆಚ್ಚಳವಾಗಿದೆ. ಡಿಸೆಂಬರ್ 1 ರಂದು ಸಿಲಿಂಡರ್‌ಗೆ 50 ರೂ. ಹೆಚ್ಚಿಸಲಾಗಿತ್ತು.

ಮೇ ತಿಂಗಳಿನಿಂದ, ಹೆಚ್ಚಿನ ಗ್ರಾಹಕರು ಅಡುಗೆ ಅನಿಲ ಸಬ್ಸಿಡಿಗಳನ್ನು ಸ್ವೀಕರಿಸಿಲ್ಲ. ಏಕೆಂದರೆ ಅಂತರರಾಷ್ಟ್ರೀಯ ತೈಲ ಬೆಲೆ ಕುಸಿತ ಮತ್ತು ದೇಶೀಯ ಪರಿಷ್ಕೃತ ದರದ ಹೆಚ್ಚಳದಿಂದಾಗಿ ಸಬ್ಸಿಡಿ ಮತ್ತು ಮಾರುಕಟ್ಟೆ ದರಗಳ ನಡುವೆ ಸಾಮ್ಯತೆಯನ್ನು ತಂದಿತ್ತು.

ಜೂನ್ 2019 ರಲ್ಲಿ ದೆಹಲಿಯಲ್ಲಿ ಸಬ್ಸಿಡಿ ಪಡೆದ ಅಡುಗೆ ಅನಿಲದ ಸಿಲಿಂಡರ್ ಬೆಲೆ 497 ರೂ. ಆಗಿತ್ತು. ಅಂದಿನಿಂದ ಇಂದಿನವರೆಗೂ 147ರೂಗಳಷ್ಟು ಬೆಲೆ ಏರಿಕೆಯಾಗಿದೆ.

ಅದೇ ಸಮಯದಲ್ಲಿ, ಜೆಟ್ ಇಂಧನದ ಬೆಲೆಯನ್ನು ದೆಹಲಿಯಲ್ಲಿ ಪ್ರತಿ ಕಿಲೋಲೀಟರ್‌ಗೆ 2,941.5 ರೂ. ಅಥವಾ ಶೇಕಡಾ 6.3 ರಷ್ಟು ಹೆಚ್ಚಿಸಲಾಗಿದೆ.

ಈ ತಿಂಗಳು ಎಟಿಎಫ್ ಬೆಲೆಯಲ್ಲಿ ಇದು ಎರಡನೇ ಹೆಚ್ಚಳವಾಗಿದೆ. ಡಿಸೆಂಬರ್ 1 ರಂದು ದರಗಳು ಶೇಕಡಾ 7.6 ರಷ್ಟು (ಪ್ರತಿ ಕಿಲೋಗೆ 3,288.38 ರೂ) ಏರಿಕೆ ಮಾಡಲಾಗಿತ್ತು.

ಸಬ್ಸಿಡಿ ರಹಿತ ಎಲ್‌ಪಿಜಿಗೆ ಈಗ ಕೋಲ್ಕತ್ತಾದಲ್ಲಿ 720.50 ರೂ., ಮುಂಬೈನಲ್ಲಿ 694 ರೂ., ಮತ್ತು ಚೆನ್ನೈನಲ್ಲಿ 710 ರೂ. ಇದೆ.


ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ : ಹೊಸ ಬೆಲೆಯ ಮಾಹಿತಿ ಇಲ್ಲಿದೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights