ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಪತನ : ನಾಲ್ವರು ದುರ್ಮರಣ..!
ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಮೃತಪಟ್ಟಿದ್ದಾರೆ.
ಮಧ್ಯಾಹ್ನ 1:15 ಕ್ಕೆ ವಿಮಾನ ಪತನಗೊಂಡಿದೆ ಎಂದು ಕೊಲೊಸಾ ಕೌಂಟಿ ಶೆರಿಫ್ ಇಲಾಖೆಯಿಂದ ಸುದ್ದಿ ಪ್ರಕಟಣೆಯಾಗಿದೆ. ಸಿಸಿಎಸ್‌ಡಿ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ವಿಮಾನದಲ್ಲಿದ್ದ ದೇಹಗಳನ್ನು ಹೊರತೆಗೆದಿದ್ದಾರೆ.
ಹೆಲಿಕಾಪ್ಟರ್ ರಾಬಿನ್ಸನ್ ಆರ್ 66 ಸ್ಯಾಕ್ರಮೆಂಟೊದಿಂದ ವಾಯುವ್ಯಕ್ಕೆ 65 ಮೈಲಿ ದೂರದ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಕ್ಯಾಲಿಫೋರ್ನಿಯಾದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವಕ್ತಾರ ಇಯಾನ್ ಗ್ರೆಗರ್ ಹೇಳಿದ್ದಾರೆ.
ತನಿಖಾಧಿಕಾರಿಗಳು ಘಟನೆಗೆ ಕಾರಣ ಹುಡುಕಾಟದಲ್ಲಿದ್ದು ಹೆಲಿಕಾಪ್ಟರ್ ದೃಶ್ಯಗಳನ್ನು ಪರೀಕ್ಷಿಸಲು ಪ್ರಾರಂಭಿಸಿದ್ದಾರೆ. ತನಿಖೆಯ ಭಾಗವಾಗಿ ರೇಡಾರ್ ಡೇಟಾ, ಹವಾಮಾನ ಮಾಹಿತಿ, ಏರ್ ಟ್ರಾಫಿಕ್ ಕಂಟ್ರೋಲ್ ಸಂವಹನ, ವಿಮಾನ ನಿರ್ವಹಣೆ ದಾಖಲೆಗಳು ಮತ್ತು ಪೈಲಟ್ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. 15 ದಿನಗಳ ನಂತರ ಪ್ರಾಥಮಿಕ ವರದಿಯು ಏಜೆನ್ಸಿಯಿಂದ ಲಭ್ಯವಾಗಲಿದೆ ಎಂದು ಎನ್‌ಟಿಎಸ್‌ಬಿ ವಕ್ತಾರ ಜೆನ್ನಿಫರ್ ಗೇಬ್ರಿಸ್ ಹೇಳಿದ್ದಾರೆ.