ನಿಜವಾಯ್ತು ಸಚಿವ ಸಿಟಿ ರವಿ ಹರಕೆ : ಚಿಕ್ಕಮಗಳೂರು ನಗರದಲ್ಲಿ ಭಿಕ್ಷಾಟನೆ…

ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಸಚಿವ ಸಿ.ಟಿ.ರವಿ ಭಿಕ್ಷಾಟನೆ ಮಾಡಿದ್ದಾರೆ.

ಹೌದು… ಸಚಿವ ಸಿ.ಟಿ.ರವಿ ಹಾಗೂ ದತ್ತ ಮಾಲಾಧಾರಿಗಳಿಂದ ಪಡಿ ಸಂಗ್ರಹಿಸಿದ್ದಾರೆ. ನಗರದ ನಾರಾಯಣಪುರದ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವ ಮೂಲಕ ಪಡಿ ಸಂಗ್ರಹಿಸಿದ್ದಾರೆ. ಪಡಿಸಂಗ್ರಹಕ್ಕೆ ಅಗಮಿಸಿದ ದತ್ತಭಕ್ತರಿಗೆ ಅಕ್ಕಿ, ಬೆಲ್ಲ, ವಿಳ್ಳೆದೆಲೆ ಜನರು ನೀಡಿದ್ದಾರೆ. ನಾಳೆ ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ದತ್ತಭಕ್ತರು ತೆರಳುತ್ತಿರುವುದರಿಂದ, ದತ್ತಾತ್ರೇಯ ಸ್ವಾಮಿ ಭಜನೆ ಮೂಲಕ ಸಚಿವ ಸಿ.ಟಿ.ರವಿ ಸೇರಿ ದತ್ತಭಕ್ತರಿಂದ ಬಿಕ್ಷಾಟನೆ ಮಾಡಿದರು.

ಈ ವೇಳೆ ಶೋಭಯಾತ್ರೆ ಹಾಗೂ ದತ್ತಜಯಂತಿಯಲ್ಲಿ ಭಾಗವಹಿಸುವಂತೆ ಜನರಲ್ಲಿ ಮಾಲಾಧಾರಿಗಳು ಮನವಿ ಮಾಡಿದರು.

ಕಳೆದ ವರ್ಷ ದತ್ತಾತ್ರೇಯ ಸ್ವಾಮಿಯ ಬಳಿ ಶಾಸಕ ಸಿ. ಟಿ ರವಿ ಹರಕೆ ಕಟ್ಟಿಕೊಂಡು, ಚಿಕ್ಕಮಗಳೂರಿನ ನಾರಾಯಣಪುರದಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ್ದಾರೆ.

“ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ನಾವು ಹರಕೆ ಮಾಡಿಕೊಳ್ಳುತ್ತಿದ್ದೇವೆ” ಹೀಗಾಗಿ ದತ್ತಜಯಂತಿಯ ಅಂಗವಾಗಿ ಭಿಕ್ಷಾಟನೆ ಮಾಡುತ್ತಿದ್ದೇನೆ. ದೇಶದ ಪ್ರಗತಿಗೆ ಮೋದಿ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದೇನೆ ಎಂದು ತಿಳಿಸಿದ್ದರು. ಆ ಹರಕೆ ಇಂದು ಪೂರ್ಣಗೊಂಡಿದೆ.

ಮೋದಿಯಿಂದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ. ಆದ್ದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ನಮಗೆ ಸ್ವಾರ್ಥರಹಿತ ರಾಜಕಾರಣದ ಅವಶ್ಯಕತೆ ಇದೆ ಎಂದು ಭಿಕ್ಷಾಟನೆ (ಪಡಿ ಸಂಗ್ರಹ) ವೇಳೆ ಹೇಳಿದ್ದರು. ಸಿಟಿ ರವಿ ಹರಕೆ ಹೊತ್ತುಕೊಂಡಂತೆ ಮೋದಿ ಪ್ರಧಾನಿಯಾಗಿದ್ದಾರೆ. ಜೊತೆಗೆ ಅವರಿಗೂ ಕೂಡ ಸಚಿವ ಸ್ಥಾನ ಲಭಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights