ಓಲಾ ಆದಾಯದಲ್ಲಿ 95% ಇಳಿಕೆ; 1400 ಉದ್ಯೋಗಿಗಳನ್ನು ಕೆಲಸದಿಂದ ಕೈಬಿಡಲಿರುವ ಸಂಸ್ಥೆ

ಭಾರತದ ಅತಿ ದೊಡ್ಡ ಟ್ಯಾಕ್ಸಿ ಅಗ್ರಿಗೇಟರ್ ಸಂಸ್ಥೆ ಓಲಾ ಕೋವಿಡ್-19 ರಿಂದ ಆಗಿರುವ ನಷ್ಟದಿಂದ 1400 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವುದಾಗಿ ಘೋಷಿಸಿದೆ.

ಕೋವಿಡ್-19 ನಿಂದ ಉಂಟಾದ ಲಾಕ್ ಡೌನ್ ನಿಂದಾಗಿ ಕಳೆದ ಎರಡು ತಿಂಗಳುಗಳಲ್ಲಿ ಸಂಸ್ಥೆಯ ಆದಾಯ ಶೇಕಡಾ 95 ಕಡಿಮೆಯಾಗಿದೆ ಎಂದು ಸಂಸ್ಥೆಯ ಸಿಇಒ ಭವೀಶ್ ಅಗರ್ವಾಲ್ ಘೋಷಿಸಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಸಂಸ್ಥೆಯ ಉದ್ಯೋಗಿಗಳಿಗೆ ಕಳುಹಿಸಿರುವ ಈಮೇಲ್ ನಲ್ಲಿ ಮುಂದಿನ ದಿನಗಳು ಅನಿಶ್ಚಿತತೆಯ ದಿನಗಳಾಗಿರುವುದರಿಂದ ಇದರ ಪ್ರಭಾವ ದೀರ್ಘ ಕಾಲ ಉಳಿಯಲಿದೆ ಎಂದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಆಹಾರ ಸರಬರಾಜು ಸಂಸ್ಥೆಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿ ಸಾವಿರಾರು ಸಿಬ್ಬಂದಿಳನ್ನು ತಮ್ಮ ಸಂಸ್ಥೆಯಿಂದ ತೆಗೆಯುವುದಾಗಿ ಹೇಳಿದ್ದರು. ಕೊರೊನ ಸೃಷ್ಟಿಸಿರುವ ಈ ಆರ್ಥಿಕ ಹಿಂಜರಿತದಿಂದ ದೇಶದಾದ್ಯಂತ ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದು, ಸೋಂಕಿನ ಜೊತೆಗೆ ಉದ್ಯೋಗ ಅಭದ್ರತೆಯ ಭಯವನ್ನು ದಿನವೂ ಎದುರಿಸುವಂತೆ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights