ರಾಜ್ಯದಲ್ಲಿ ಕೊರೊನಾ ಹೆಚ್ಚಳಕ್ಕೆ ಕಠಿಣ ಕ್ರಮ: ಎರಡು ವಾರಗಳ ಕಾಲ ಪ್ರತಿಭಟನೆಗಳಿಗೆ ಬ್ರೇಕ್…!
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎರಡು ವಾರಗಳ ಕಾಲ ಪ್ರತಿಭಟನೆಗಳಿಗೆ ಬ್ರೇಕ್ ಹಾಕಿ ಸಿಎಂ ಯಡಿಯೂರಪ್ಪ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.
ಹೌದು… ಸಿಎಂ ಗೃಹ ಕಚೇರಿಯಲ್ಲಿ ಸಭೆ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ” ಇವತ್ತಿನಿಂದ 15 ದಿನ ಸತ್ಯಗ್ರಹ, ಚಳುವಳಿ ಮಾಡುವಂತಿಲ್ಲ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡೋದಿಲ್ಲ” ಎಂದು ಆದೇಶಿಸಿದ್ದಾರೆ.
ಜೊತೆಗೆ “ಕೊರೊನಾ ಬಗ್ಗೆ ಜನರಲ್ಲಿ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಿಯಮ ಪಾಲಿಸದೇ ಇರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಟ್ಟೆಚ್ಚರ ವಹಿಸಬೇಕು” ಎಂದು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
‘ತಜ್ಞರ ಮಾಹಿತಿ ಪ್ರಕಾರ ಒಂದು ಸಮಾಧಾನ ತಂದಿರುವ ವಿಚಾರ ಏನೆಂದರೆ ಸ್ಲಮ್ ಗಳಲ್ಲಿ ಕೊರೊನಾ ವಿರಳವಾಗಿದೆ. ಆದರೆ ಅಪಾರ್ಟ್ ಮೆಂಟ್ ನಲ್ಲಿ ಅಧಿಕವಾಗಿದೆ. ಹೀಗಾಗಿ ಜನ ಎಚ್ಚರ ವಹಿಸಬೇಕು. ಮಾಸ್ಕ್ ದೈಹಿಕ ಅಂತರ ಕಾಪಾಡಬೇಕು’ ಎಂದು ಆದೇಶಿಸಿದ್ದಾರೆ.
8 ವಲಯಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಾಳೆಯಿಂದ ಮಾಸ್ಕ ಧರಿಸದವರಿಗೆ ದಂಡ ಹಾಕಲು ಸಮಭಂದಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದರು.