ಮುಗಿಯದ ಕನ್ನಂಬಾಡಿ ಕದನ : KRS ಬಿರುಕು ಬಿಟ್ಟಿದ್ದು ಸತ್ಯ ಎಂದ ಸುಮಲತಾ..!

ಮಂಡ್ಯದ ಕನ್ನಂಬಾಡಿ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ. ಯಾಕೆಂದ್ರೆ ಇಂದು KRS ಗೆ ಭೇಟಿ ನೀಡಿದ ಸಂಸದೆ ಸುಮಲತಾ KRS ಬಿರುಕು ಬಿಟ್ಟಿದ್ದು ಸತ್ಯ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಮಂಡ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ KRS ಬಿರುಕು ಬಿಟ್ಟಿದ್ದು ಸತ್ಯ ಎಂದು ಹೇಳಿದ್ದಾರೆ. ಕೆಆರ್ ಎಸ್ ಕಾವೇರಿ ಸಭಾಂಗಣದಲ್ಲಿ ಸಭೆ ಬಳಿಕ ಮಾತನಾಡಿದ ಸುಮಲತಾ, “ಆಣೆಕಟ್ಟೆಯಲ್ಲಿ ಎಷ್ಟು ಲೈನ್ ಗಳಿವೆ? ಎಷ್ಟು ವಿಸ್ತಾರವಿದೆ ? ಎನ್ನುವುದು ಎಲ್ಲರಿಗೂ ತಿಳಿದಿರು ವಿಚಾರ. ಇದರಲ್ಲಿ ಸಣ್ಣಪುಟ್ಟ ಬಿರುಕು ಆಗುತ್ತದೆ. ಕೆಲವರು ಇದನ್ನು ಏರ್ ಕ್ರ್ಯಾಕ್ ಅಂತಾ ಹೇಳ್ತಾರೆ. ಗ್ರೌಟಿಂಗ್ ಮಾಡುವ ಮೂಲಕ ಅದನ್ನು ಮುಚ್ಚುತ್ತಾರೆ. ಆದರೆ ಬಿರುಕಾಗಿರೋದು ಸತ್ಯ” ಎಂದಿದ್ದಾರೆ.

ಇದರಿಂದಾಗುವ ಅಪಾಯದ ಬಗ್ಗೆ ಯಾರೂ ಕೂಡ ಸರ್ಟಿಫಿಕೆಟ್ ಕೊಡಲು ಅಧಿಕಾರಿಗಳಿಗೆ ಅಧಿಕಾರ ನೀಡಿಲ್ಲ. ಇದರ ಬಗ್ಗೆ ಸರ್ಟಿಫಿಕೇಟ್ ಕೊಡಲೂ ನಮ್ಮಲ್ಲಿ ಯಾರಿಗೂ ಅಧಿಕಾರವಿಲ್ಲ. ಅದರದ್ದೇ ಆದ ಟೆಕ್ನಿಕಲ್ ಕಮಿಟಿ ಬರಬೇಕಿದೆ. ಕ್ರ್ಯಾಕ್ ಆಗುವ ಮುಂಚೆ ಎಚ್ಚರಿಕೆ ವಹಿಸಬೇಕಿದೆ. ಕೊರೊನಾ ಬಂದು 10 ದಿನದ ನಂತರ ಾಸ್ಪತ್ರೆಗೆ ಹೋದ್ರೆ ಏನು ಪ್ರಯೋಜನಾ? ಮೊದಲೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಹಾಗೆ ಇದು ಕೂಡ. ನಾಳೆಯ ಅಪಾಯ ನೋಡಿಕೊಂಡು ಕುಳಿತುಕೊಳ್ಳುವುದಲ್ಲ. ಹತ್ತು ವರ್ಷದ ಬಳಿಕ ಅಪಾಯ ಎದುರಾದರೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ್ದಾರೆ.

ನಾನೆಲ್ಲೂ ಅಕ್ರಮ, ಸಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಿಲ್ಲ. ನನ್ನ ಉದ್ದೇಶ ಇಷ್ಟೆ ಗಣಿಗಾರಿಕೆಯಿಂದ ಕೆಆರ್ ಎಸ್ ಆಣೆಕಟ್ಟಿಗೆ ಅಪಾಯವಾಗಬಾರದು. ಅಂತಹ ಗಣಿಗಾರಿಕೆ ಬೇಡ ಎಂದು ಹೇಳಿದ್ದಾರೆ.

ಗಣಿಗಾರಿಕೆ ವಿಚಾರ ಆರಂಭವಾದಾಗಿನಿಂದಲೂ ನನ್ನ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ. ನನ್ನ ಹೇಳಿಕೆಗಳನ್ನು ತಿರುಚಲಾಗುತ್ತದೆ ಎಂದು ದಳಪತಿಗಳ ವಿರುದ್ದ ಮತ್ತೆ ತಿರುಗಿ ಬಿದ್ದಿದ್ದಾರೆ. ಕೇಂದ್ರ ಸಚಿವರ ಸೂಚನೆಯಂತೆ ಟ್ರಯಲ್ ಬ್ಲಾಸ್ಟ್ ಆಗಬೇಕು. ಅಲ್ಲಿವರೆಗೂ ಕಾದು ನೋಡೋಣ ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights