ಪೊಲೀಸರಿಂದ ಹಲ್ಲೆಗೊಳಗಾದ ವ್ಯಕ್ತಿ ಸಾವು; ವಿಶೇಷ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಬಂಧನ!

ತಮಿಳುನಾಡಿನ ಪಪ್ಪಾನೈಖೆನಪಟ್ಟಿ ಚೆಕ್ ಪೋಸ್ಟ್‌ನಲ್ಲಿ ಮಂಗಳವಾರ ಸಂಜೆ ಪೊಲೀಸರು ಅಮಾನುಷವಾಗಿ ಥಳಿಸಿದ್ದ ಸೇಲಂನ ವ್ಯಕ್ತಿಯೊಬ್ಬರು ಬುಧವಾರ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಲಂನ ವಿಶೇಷ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಪೆರಿಯಸ್ವಾಮಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸೇಲಂನ ಯೇತಪುರ ಸಮೀಪದ ಎಡಪಟ್ಟಿಯ ಮರೇಗೇಶನ್‌ ಎಂಬಾತ ತುಂಬೈ ರಸ್ತೆಯಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು. ಮಂಗಳವಾರ ಸಂಜೆ ತನ್ನ ಗೆಳೆಯನೊಂದಿಗೆ ಬೈಕ್‌ನಲ್ಲಿ ತೆರಳಿದ್ದಾಗ, ಪಪ್ಪಾನೈಖೆನಪಟ್ಟಿ ಚೆಕ್‌ಪೋಸ್ಟ್‌ನಲ್ಲಿ ಅವರ ಬೈಕ್‌ ಅನ್ನು ತಡೆದ ಪೊಲೀಸರು ಮತ್ತು ಆತನ ನಡುವೆ ಮಾತಿಗೆ ಮಾತು ಬೆಳೆದು, ಆತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರು. ತೀವ್ರ ಥಳಿತದಿಂದ ಪ್ರಜ್ಞೆ ತಪ್ಪಿದ ಆತನನ್ನು ಸೇಲಂ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ, ಅತ ಬುಧವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

ಪೊಲೀಸರು ಥಳಿಸಿದ್ದರಿಂದ ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು. ತಾವು ಕೂಡಲೇ ಆತನನನ್ನು ತುಂಬಾಲ್ ಪ್ರಾರ್ಥಮಿಕ ಆರೋಗ್ಯ ಕೇಂದ್ರ ದಾಖಲಿಸಿದ್ದರು. ಬಳಿಕ ಅತ್ತೂರು ಸರಕಾರಿ ಆಸ್ಪತ್ರೆಗೆ ವರ್ಗಾಯಿಸಲಾಗಿತು. ಅದರೆ, ಚಿಕಿತ್ಸೆ ಫಲಿಸಲಿಲ್ಲ. ಆತ ಮೃತಪಟ್ಟ ಎಂದು ಮುರುಗೇಶನ್‌ ಅವರ ಸ್ನೇಹಿತ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆ ಸಂಬಂಧಿಸಿದಂತೆ ವಿಶೇಷ ಸಬ್‌ ಇನ್ಸ್‌ಪೆಕ್ಟರ್‌ ಪೆರಿಯಸ್ವಾಮಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ವಿಡಿಯೋ ನೋಡಿ: ತಬ್ಲಿಘಿಗಳ ವಿರುದ್ದ ಸುಳ್ಳು ಪ್ರಸಾರ ಮಾಡಿದ್ದಕ್ಕೆ ಕ್ಷಮೆ ಕೇಳಿದ ನ್ಯೂಸ್‌ 18 ಕನ್ನಡ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights