Covid 19 : ಸೋಂಕಿತ ಸಂಖ್ಯೆ 865ಕ್ಕೆ ಏರಿಕೆ, ಒಂದೇ ದಿನ 23 ಮಂದಿ ಗುಣಮುಖ…!

ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆಯೇ ದೇಶದಲ್ಲಿ ಒಂದೇ ದಿನ 20ಕ್ಕೂ ಹೆಚ್ಚು ಮಂದಿ ಈ ಪಿಡುಗಿನಿಂದ ಗುಣಮುಖರಾಗಿರುವುದು ಸಮಾಧಾನದ ಸಂಗತಿಯಾಗಿದೆ.

ಕೊರೋನಾ ಪಿಡುಗು ಕರ್ನಾಟಕದಲ್ಲಿ ತನ್ನ ಮೂರನೇ ಬಲಿ ಪಡೆದ ಶುಕ್ರವಾರದಂದೇ ದೇಶದಲ್ಲಿ 23 ಜನ ಗುಣಮುಖರಾಗಿದ್ದಾರೆ. ಈವರೆಗೆ ದೇಶದ್ಲ್ಲಿ ಸೋಂಕಿತ ಸಂಖ್ಯೆ 865ಕ್ಕೆ ಏರಿದ್ದರೇ ಗುಣಮುಖರಾದವರ ಸಂಖ್ಯೆ ಸಹ 73ಕ್ಕೇ ಏರಿಕೆ ಕಂಡಿದೆ. ಶುಕ್ರವಾರದಂದೇ 23 ಜನ ಗುಣಮುಖರಾಗಿದ್ದಾರೆ.
ಕರ್ನಾಟಕದಲ್ಲಿ ಇದುವರೆಗೆ 63 ವ್ಯಕ್ತಿಗಳಲ್ಲಿ ಸೋಂಕು ಖಚಿತವಾಗಿದ್ದು, ನಾಗರೀಕರು ಕಡ್ಡಾಯವಾಗಿ ಮನೆಯಲ್ಲಿದ್ದು ಶುಚಿತ್ವ ಪಾಲಿಸಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿನಂತಿ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 10 ತಿಂಗಳ ಮಗುವಿಗೆ ಸೋಂಕು ಕಂಡುಬಂದಿದೆ,

ಎಲ್ಲಾ ಮುಂಜಾಗೃತಾ ಕ್ರಮ ಕೈಗೊಂಡರೂ, ಬ್ರಿಟನ್ನಿನ ಪ್ರಧಾನಿಯನ್ನು ಈ ಸೋಂಕು ಬಿಡಲಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿಯೆಂದರೆ ಮನೆಯಲ್ಲಿರುವುದಾಗಿದೆ ಎಂದು ಅವರು ಹೇಳಿದ್ದಾರೆ,       ಈ ಮಧ್ಯೆ ಹೊರದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರು ತುಮಕೂರಿನಲ್ಲಿ ಶುಕ್ರವಾರ ಅಸುನೀಗಿದ್ದು, ಕೊರೋನಾಗೆ ರಾಜ್ಯದ ಮೂರನೇ ಬಲಿಯಾಗಿದ್ದಾರೆ.

ಸೋಂಕಿನ ಪರಿಣಾಮವಾಗಿ ರೈತರು ಮಾಡಿದ ಸಾಲದ ಮರುಪಾವತಿ ಅವಧಿಯನ್ನು 3 ತಿಂಗಳು ವಿಸ್ತರಿಸಲಾಗಿದೆ. ಅಲ್ಲಿಯವರೆಗಿನ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಸಲಿದೆ ಎಂದು ಅವರು ಹೇಳಿದ್ದಾರೆ.  ಇದೇ ವೇಳೆ ಕೋವಿಡ್ ಸೋಂಕಿನ ಅಬ್ಬರದ ಕಾರಣ ಬ್ಯಾಂಕ್ ಬಡ್ಡಿ ದರ ಇಳಿಕೆಗೆ ಅನುಕೂಲವಾಗುವಂತಹ ಕ್ರಮಗಳನ್ನು ರಿಸರ್ವ್‌ ಬ್ಯಾಂಕ್ ಘೋಷಿಸಿದೆ.

ಇಷ್ಟೇ ಅಲ್ಲದೇ ಈಗಿರುವ ಆರ್ಥಿಕ ಸಂಕಷ್ಟದ ದಿನಗಳ ಹಿನ್ನೆಲೆಯಲ್ಲಿ ಮೂರು ತಿಂಗಳ ವರೆಗೆ ಸಾವಧಿ ಸಾಲದ ಮೇಲಿನ ಮಾಸಿಕ ಕಂತು ಪಾವತಿಸುವುದನ್ನು ಸಹ ಮುಂದೂಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights